ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಮಹಿಮಾ ಭಟ್ ಧಾರವಾಡ
ಇತ್ತೀಚಿನ ಬರಹಗಳು: ಮಹಿಮಾ ಭಟ್ ಧಾರವಾಡ (ಎಲ್ಲವನ್ನು ಓದಿ)

ಕಾಣದೂರಿನ​ ತೀರದಲಿ ನಿಂತಿಹೆನು
ದಿಟ್ಟಿಸಿದರೂ ಕಾಣದಾಯಿತು ನನಗೆ
ಕಡಲ ಅಬ್ಬರದ ನೊರೆತಕೆ ಕೇಳದಾಯಿತು ನಿನಗೆ
ನೊರೆತ, ಮೊರೆತಗಳ ನಡುವೆ ಬೆಸೆಯುವುದೇ ಸಲುಗೆ?

ನೀನಲ್ಲಿ, ನಾನಿಲ್ಲಿ ಕಾಣುವುದೇ ಚಹರೆ
ಒಮ್ಮೆಯಾದರೂ ನೋಡುವೆನೇ ನಾ ನಿನ್ನ ಮೋರೆ
ಅಲ್ಲಿಯವರೆಗೂ ಕೇಳುವುದೇ ನನ್ನೀ ಕರೆ
ಆದರೂ ಏನೀ ಪ್ರೀತಿಯ ಬೆಸುಗೆ?

ಸಾಕಾಗಿದೆ ವಿರಹದ ಭಾವಕೆ
ಮನ ಹಪಹಪಿಸಿದೆ ಪದೇ ಪದೇ
ಬೇಡುತಿದೆ ಹೃದಯ ಪ್ರೇಮಕೆ
ಬಸವಳಿದಿದೆ ಮನ ನಿನ್ನ ಮೋಹಕೆ

ಒಮ್ಮೆ ಬಂದು ಹೋಗು ಎದೆಯಲ್ಲಿ ಬೆಚ್ಚಗೆ ಇಡುವೆ
ನೆನಪಲ್ಲಿ ಅಚ್ಚಳಿಯದೆ ನೀ ನನ್ನಲ್ಲೇ ಉಳಿವೆ
ದಿನಗಳನ್ನು ಸ್ಮೃತಿಯಲಿ ಹಾಗೇ ಕಳೆವೆ
ನೀ ಮಾಡುತಿರುವೆ ಹೃದಯದ ಸುಲಿಗೆ