ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಲೆಕ್ಕಿತ ಮತ್ತು ಅಲೆಕ್ಕಿತ ಅಪಾಯಗಳು

ಧೀರೇಂದ್ರ ನಾಗರಹಳ್ಳಿಯವರು ಲೆಕ್ಕಿತ ಹಾಗೂ ಅಲೆಕ್ಕಿತ ಅಪಾಯಗಳ ಮೇಲೆ ಈ ಲೇಖನದಲ್ಲಿ ಬೆಳಕು ಚೆಲ್ಲಿದ್ದಾರೆ.
ಧೀರೇಂದ್ರ ನಾಗರಹಳ್ಳಿ
ಪ್ರೊಫೈಲ್
ಇತ್ತೀಚಿನ ಬರಹಗಳು: ಧೀರೇಂದ್ರ ನಾಗರಹಳ್ಳಿ (ಎಲ್ಲವನ್ನು ಓದಿ)

ನಮ್ಮ ಪ್ರಜ್ಞೆಗೆ ಬಾರದಂತೆಯೆ ನಾವು ತೆಗೆದು ಕೊಳ್ಳುವ ನಿರ್ಧಾರಗಳು ಸಾಕಷ್ಟು ಲೆಕ್ಕಾಚಾರಗಳಿಂದ ಕೂಡಿರುತ್ತವೆ.ಒಂದು ಸಣ್ಣ ಉದಾಹರಣೆಯಿಂದ ವಿಷದಪಡಿಸ ಬೇಕೆಂದರೆ : ನಾವು ಮನೆ ಗೆಲಸಕ್ಕೆ ಗೊತ್ತು ಮಾಡುವ ಕೆಲಸದಾಳುಗಳು .ಅವರು ಕೆಲಸಕ್ಕೆ ಬಂದಾಗ ನಮಗೆ ಗೊತ್ತಿಲ್ಲದಂತೆಯೆ  ಕೆಲವು ಪ್ರಶ್ನೆಗಳನ್ನು ಕೇಳಿರುತ್ತೇವೆ (ಕೆಲವೊಮ್ಮೆ ಪ್ರಜ್ಞಾ ಪೂರ್ವಕವಾಗಿಯೂ  ಆಗುವುದುಂಟು ).ಅಂದರೆ ಆ ಕೆಲಸಗಾರರ  ಪೂರ್ವಾಪರ ಮತ್ತು ಮನೆಯ ವಿಳಾಸದ ಬಗ್ಗೆ ಪ್ರಶ್ನೆಗಳನ್ನು ಕೇಳುವುದು ಸಹಜ. ಈ ಪ್ರಶ್ನೆಗಳ ಅರ್ಥ ಸರಳ : ಮನೆಗೆಲಸಕ್ಕೆ ಬರುವವರ ಕೆಲವು ಮೂಲಭೂತವಾದ ವಿವರಗಳನ್ನು ಕೇಳಿಟ್ಟುಕೊಂಡಿದ್ದಾರೆ ಮುಂದೆ ಏನಾದ್ರೂ ಅಚಾತುರ್ಯ ನಡೆದಾಗ ಹುಡುಕುವುದಕ್ಕೆ ಸುಲಭವಾಗುವುದು ಎನ್ನುವುದು.ಇದನ್ನೆ  ಲೆಕ್ಕಿತ ಅಪಾಯಗಳು (CALCULATED RISKS) ಅಂತ ಕರೆಯುವುದು.ಅಂದರೆ ಕೆಲಸದಾಳುವನ್ನು ಗೊತ್ತು ಮಾಡುವ ಮೊದಲೆ ಕೆಲವು ಮಾಹಿತಿಗಳನ್ನು ಕಲೆಹಾಕಿ ಇಟ್ಟು ಕೊಳ್ಳುವುದು.

ಲೆಕ್ಕಿತ  ಅಪಾಯದ ವ್ಯಾಖಾನ: ಯಾವುದೆ ಕೆಲಸ ಕಾರ್ಯಗಳಿಗೆ ಮುಂದಾಗುವ ಮೊದಲು ಆ ಕೆಲಸ ಕಾರ್ಯಗಳಲ್ಲಿ ಮುಂದೆ ಬಂದೆರೆಗುವ ಅಪಾಯಗಳನ್ನು ಮುಂದಾಲೋಚನೆಯಿಂದ ಅಳೆದು ತೊಗಿ ನಿರೀಕ್ಷಿಸುವುದು ಮತ್ತು  ಆ ಅಪಾಯಗಳಿಗೆ ಸಾಧ್ಯವಾದಷ್ಟು ಮಟ್ಟಿಗೆ ಪರಿಹಾರವನ್ನು ನೋಡಿಟ್ಟು ಕೊಂಡಿರುವುದು.  
    ನಾನು ಮೇಲೆ ಉಲ್ಲೇಖಿಸಿರುವ ಉದಾಹರಣೆ ದಿನ ನಿತ್ಯದ ಸಂದರ್ಭಕ್ಕೆ ತಕ್ಕುದಾದಾಗಿದೆ.ಆದರೆ ಸಂಕೀರ್ಣವಾಗಿರುವ ಬದುಕಿನ ಜಂಕ್ಸನ್ ಗಳಲ್ಲಿ ಬಹು ಗಂಭೀರವಾದ ನಿರ್ಧಾರಗಳನ್ನು  ತೆಗೆದು ಕೊಳ್ಳ ಬೇಕಾಗುತ್ತೆ ಕೆಲವು ಉದಾಹರಣೆಗಳೆಂದರೆ : ವಿದ್ಯಾಭ್ಯಾಸದಲ್ಲಿ ಆರಿಸಿ ಕೊಳ್ಳ ಬೇಕಾಗಿರುವ ವಿಷಯಗಳು. ವೃತ್ತಿ ಬದುಕಿನ ಆಯ್ಕೆಗಳಲ್ಲಿನ ಅತ್ಯುತ್ತಮ  ಆಯ್ಕೆಯನ್ನೆ  ಆಯ್ದು ಕೊಳ್ಳುವುದು. ವ್ಯಾಪಾರ ವ್ಯವಹಾರಗಳಲ್ಲಿ ತೋರ ಬೇಕಾಗಿರುವ ವೃತ್ತಿ ಪರೆತೆಯ ವಿಷಯಗಳು ಹೀಗೆ ಪಟ್ಟಿ ಮುಂದುವರೆಯುತ್ತದೆ.ಈ ತರಹದ ತುಂಬಾ ಘನ ಗಂಭಿರ ವಿಷಯಗಳಿಗೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳುವಾಗ ತುಂಬಾ ಜಾಗೂರುಕತೆಯಿಂದ ಹೆಜ್ಜೆಗಳನ್ನು ಇಟ್ಟು ನಡೆಯ ಬೇಕಾಗುತ್ತದೆ.ಇಂತಹ ನಿರ್ಧಾರಗಳನ್ನು ತೆಗೆದು ಕೊಳ್ಳುವಾಗಲೆ ನಾವು   ‘ಲೆಕ್ಕಿತ ಅಪಾಯಗಳ’ ಬಗ್ಗೆ ಯೋಚಿಸ ಬೇಕಾಗುತ್ತದೆ.
ಈ ಲೆಕ್ಕಿತ ಅಪಾಯಗಳನ್ನು    ಪರಿಗಣಿಸುವ ಮೊದಲು ಕೆಳಗಿನ ಕೆಲವು ಮೂಲಭೂತವಾದ ಪ್ರಶ್ನೆಗಳನ್ನು ಕೇಳಿ ಕೊಳ್ಳ ಬೇಕಾಗುತ್ತದೆ .


೧) ಈಗ ಮಾಡುತ್ತಿರುವ ನಿರ್ಧಾರ ದೀರ್ಘಾವಧಿಯಲ್ಲಿ ಪರಿಣಾಮ ಬಿರುವುದಿದೆಯೆ ಅಥವಾ ಅಲ್ಪಾವಧಿಯಲ್ಲಿ ಪರಿಣಾಮ ಬಿರುವುದಿದೆಯೆ ?
೨)ಈ ನಿರ್ಧಾರಕ್ಕೆ ಇರುವ ಇನ್ನಿತರೆ ಆಯ್ಕೆಗಳೇನು ಮತ್ತು ಅವುಗಳ ಔಚಿತ್ಯವೇನು ?
೩) ಮುಂದಿನ ದಿನಗಳಲ್ಲಿ ಈ ನಿರ್ಧಾರದಿಂದ ಬಂದೊದಗುವ ಅಪಾಯಗಳ್ಯಾವುವು  ಮತ್ತು ಅಪಾಯಗಳ ಪರಿಣಾಮಗಳೇನು ?
೪) ಅಪಾಯಗಳು ತಂದೊಡ್ಡುವ ತೊಂದರೆಗಳಿಂದ ತಪ್ಪಿಸಿ ಕೊಳ್ಳಲು ನನ್ನ ಹತ್ತಿರ ಇರಬಹುದಾದ ಪರಿಹಾರಗಳೇನು ?
೫) ಒಂದು ವೇಳೆ ಅಪಾಯಕ್ಕೆ ಪರಿಹಾರ ಇಲ್ಲ ಎನ್ನುವುದಾದರೆ ಆ ಅಪಾಯವನ್ನು ನಿರ್ವಹಿಸುವುದು ಹೇಗೆ ?

  ಹೀಗೆ ಕೆಲವು ಮೂಲಭೂತವಾದ ಪ್ರಶ್ನೆಗಳನ್ನು ನಮ್ಮಷ್ಟಕ್ಕೆ ನಾವು ಕೇಳಿ ಕೊಂಡಾದ ಮೇಲೆ ಲೆಕ್ಕಿತ ಅಪಾಯಗಳ ಲೆಕ್ಕ ಹಾಕಿ ನಿರ್ಧಾರಗಳನ್ನು   ಮಾಡ ಬೇಕಾಗುತ್ತದೆ .ಇಷ್ಟೆಲ್ಲಾ ಆದ ಮೇಲು ನಮಗೆ ಕೆಲವೊಮ್ಮೆ ಅನಿರೀಕ್ಷಿತ ಅಪಾಯಗಳು ಬರುವುದು ಸಹಜ .ಆ ಅನಿರೀಕ್ಷಿತ ಅಪಾಯಗಳನ್ನು ಹೇಗೆ ನಿರ್ವಹಿಸ ಬೇಕು ಎನ್ನುವುದನ್ನು ಮುಂದಾಲೋಚನೆಯಿಂದ ಲೆಕ್ಕ ಹಾಕ ಬೇಕಾಗುತ್ತದೆ.ಇದಕ್ಕೂ ಹೆಚ್ಚಾಗಿ ನಾವು ಲೆಕ್ಕಿತ ಅಪಾಯಗಳನ್ನು ಪರಿಗಣಿಸುವಾಗ ‘CUSHIONING ZONE’ ನ ಪರಿಮಿತಿ ಏನು ಎನ್ನುವುದು ?
   ಹಾಗಿದ್ದರೆ ‘CUSHIONING ZONE’ ಎಂದರೇನು ? ನಮ್ಮ ನಿರ್ಧಾರ ಪ್ರಕ್ರಿಯೆಯಲ್ಲಿ ಲೆಕ್ಕಿತ ಅಪಾಯಗಳನ್ನು ಲೆಕ್ಕ ಹಾಕುತ್ತಿರುವಾಗ , ಏನೆಲ್ಲವನ್ನೂ ಪರಿಗಣಿಸಿಯಾದ ಮೇಲೆಯೂ ಬಂದೊದಗುವ ಅಪಾಯಗಳಿಗೆ ನಾವು ಹಾಕಿ ಕೊಂಡಿರುವ ಒಂದು ಮೆತ್ತನೆಯ ಪರಿಸರ.ಅಂದರೆ ಅಪಾಯಗಳಿಂದ ಒಂದು ವೇಳೆ ಏನಾದರೂ ತೊಂದರೆ ಎದುರಾದರೆ ನಮಗೆ ಬಂದೊದಗುವ ತೊಂದರೆಗಳಿಂದ ಆಗಬಹುದಾದ ಘಾಸಿಯಾ ಪ್ರಮಾಣವನ್ನು  ಹೇಗೆ ಕಡಿಮೆ ಮಾಡಬಹುದು  ಎನ್ನುವುದು.ಇದನ್ನು ಒಂದು ಸಣ್ಣ ಉದಾಹರಣೆಯಿಂದ ವಿವರಿಸ ಬಹುದು.ನಾವು ಒಂದು ವ್ಯವಹಾರಕ್ಕೆ ಸಿದ್ಧರಾಗಿದ್ದೇವೆ ಅಂದು ಕೊಳ್ಳೋಣ .ಆ ವ್ಯವಹಾರಕ್ಕೆ ನಾವು ಕೂಡಿಟ್ಟ ಹಣ ಒಂದು ಹತ್ತು ಲಕ್ಷ ವೆಂದಾದರೆ.ಒಂದು ವೇಳೆ ಕರನಂತರಗಳಿಂದ  ವ್ಯವಹಾರ ನಷ್ಟಕ್ಕೆ ತಿರುಗಿದಾಗ ನಾವು ನಮ್ಮ ಮುಂದಿನ ದಿನಗಳಿಗೆ ಹೇಗೆ ಹಣ ಹೊಂದಿಸ ಬೇಕು ಎಂದು ಯೋಚಿಸಿ ಮೊದಲೆ ಹತ್ತು ಲಕ್ಷ ಎತ್ತಿಟ್ಟಿದ್ದೇವೆ ಅಂದು ಕೊಳ್ಳೋಣ .ಅಂದರೆ ನಮ್ಮ ‘CUSHIONING ZONE’ ಈಗ ಹತ್ತು ಲಕ್ಷ ಅಂತಾಯಿತು.ಅಂದರೆ ಒಂದು ವೇಳೆ ವ್ಯವಹಾರದಲ್ಲಿ  ನಷ್ಟ ಅನುಭವಿಸುವ ಪ್ರಮೇಯ ಬಂದಾಗ  ನಮ್ಮ ಮುಂದಿನ ಭವಿಷ್ಯಕ್ಕೆ ಇನ್ನು ಹತ್ತು ಲಕ್ಷ ಇದೆ ಎಂದಾಯಿತು.ಆದರೆ ಈ ‘CUSHIONING ZONE’ ನಾವು ಯಾವ ತರಹ ನಿರ್ಧಾರ ಮಾಡುತ್ತೇವೆ ಅನ್ನುವುದರ ಮೇಲೆಯೆ  ನಮ್ಮ ಲೆಕ್ಕಿತ ಅಪಾಯಗಳ ಪಟ್ಟಿಯು ನಿರ್ಧಾರವಾಗುತ್ತದೆ.ಇದಿಷ್ಟು ಲೆಕ್ಕಿತ ಅಪಾಯ .

      ಇನ್ನು ಅಲೆಕ್ಕಿತ ಅಪಾಯ(BLIND RISK )’ : ಇದರ ಬಗ್ಗೆ ಹೇಳುವುದಕ್ಕೂ ಮೊದಲು ಒಂದು ಸಣ್ಣ ಉದಾಹರಣೆ ಕೊಡುವುದು ಉಚಿತ ಅನ್ನಿಸುತ್ತೆ. ನಮ್ಮಲ್ಲಿ ಸುಖ ಸುಮ್ಮನೆ ನಷ್ಟ ಅನುಭವಿಸುತ್ತಿದ್ದರೆ ಅವರನ್ನು ‘ಹೋಗಿ ಹೋಗಿ ಗುಡ್ಡಕ್ಕೆ ತಲೆ ಜಜ್ಜಿ ಬರ್ತಾನೆ’ ಅಂತೀವಿ. ಇದೆ ಅಲೆಕ್ಕಿತ ಅಪಾಯ.ಅಂದರೆ ಯಾವುದೇ ಕೆಲಸ ಕಾರ್ಯಕ್ಕೆ ಕೈ ಹಾಕುವುದಕ್ಕೂ ಮೊದಲು ಯಾವ ಮುಂದಾಲೋಚನೆ ಮತ್ತು ಲೆಕ್ಕಾಚಾರವಿಲ್ಲದೆ ಮುಂದಾಗುವುದು.ಹೀಗೆ ಕೆಲಸ ಕಾರ್ಯಗಳಿಗೆ ಮುಂದಾದಾಗ ಸಹಜವಾಗಿ ಅಪಾಯಗಳ ಲೆಕ್ಕಾಚಾರ ವಿರುವುದಿಲ್ಲ ಮತ್ತು ಪರಿಣಾಮವು ಸ್ಪಷ್ಟವಿರುವುದಿಲ್ಲ .ಇದೆ ಅಲೆಕ್ಕಿತ ಅಪಾಯ.ಇದಕ್ಕೆ ಹೆಚ್ಚಿನ ವಿವರಣೆಯ ಅಗತ್ಯವಿಲ್ಲ .