ಇತ್ತೀಚಿನ ಬರಹಗಳು: ಅಬ್ಳಿ ಹೆಗಡೆ (ಎಲ್ಲವನ್ನು ಓದಿ)
- ನನ್ನ ಈ…ಮನೆ - ಜುಲೈ 25, 2022
- ಬದುಕ ಮಧ್ಯ - ಆಗಸ್ಟ್ 22, 2021
- ಒಂದು ಸ್ವಗತ - ಜೂನ್ 30, 2021
ಹೂವು ಕೂಡ ಅಳಬಹುದು
ಕೆಲವೊಮ್ಮೆ ಬದುಕಿನಹಾಗೆ.
ಕವಿತೆಯಹಾಗೆ ನಗು ನೋಟಕ್ಕಷ್ಟೆ
ವೇದ್ಯ ಅಳು ಅಭೇದ್ಯ..
ಮುಂಜಾವಲ್ಲಿ ಮೈನೆರೆದ ಹುಡುಗಿ
ಮುಖದ ತುಂಬ ಮತ್ತು ಬರಿಸುವ
ಮಂದಹಾಸ ಮನಸೋತ ದುಂಬಿಗಳ
ಸಾಲು,ಸಾಲು ಮೇಲಾಟ..
ಹಸಿದ ಕಣ್ಣು ಮನಸ್ಸು ಹೊಟ್ಟೆ
ತಣಿಸುವ ಪರಿ ಸಂಜೆವರೆಗಷ್ಟೆ
ಅಂದ,ಗಂಧ,ಮಕರಂದ,ಉನ್ಮಾದ
ವೆಲ್ಲ ಖಾಲಿ ತೊಳೆದು ಚೆಲ್ಲಾಪಿಲ್ಲಿ
ಬೀಸಾಡಿದ ಪಾತ್ರೆ,ಬಾಡಿ ಬಸವಳಿದು
ಗಿಡದಿಂದ ತೊಟ್ಟು ಕಳಚಿ
ನೆಲಕ್ಕುದುರಿ ಮಣ್ಣಲಿ ಮಣ್ಣಾಗುವ
ಒಂದು ದಿನದ ಬದುಕ ಯಾತ್ರೆ ನೆನೆದು
ಒಳಗೊಳಗೇ ಅಳುತ್ತಿರಬಹುದು
ಮೌನವಾಗಿ ಮುಂಜಾವಲ್ಲೂ
ಈ ಅಂದದ ಹೂವು.
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ