- ಕರೋನ ಚಿಂತನೆ - ಮಾರ್ಚ್ 15, 2020
ಹೀಗೊಂದು ಚಿಂತನೆ!
’ಕರೋ’ ’ನ’ ದಂತಹ ವೈರಾಣುಗಳಿಂದ ಹೇಗೆ ರಕ್ಷಿಸಿಕೊಳ್ಳಬಹುದು ಎಂದು ಯೋಗಾವಾಶಿಷ್ಠವು ವಿವರಿಸುತ್ತದೆ!
ಕರ್ಕಟಿ ಎನ್ನುವ ರಾಕ್ಷಸಿಯು, “ತನ್ನ ಜನಾಂಗಕ್ಕೆ ಅವಶ್ಯವಿರುವಷ್ಟು ಆಹಾರವು ಲಭಿಸದೇ ಹೋದುದರಿಂದ ಚಿಂತೆಗೊಳಗಾಗಿ ಬ್ರಹ್ಮನನ್ನು ಕುರಿತು ತಪಸ್ಸು ಮಾಡುತ್ತಾಳೆ. ಪ್ರಕೃತಿಯಲ್ಲಿ ದುಷ್ಟಜಂತುಗಳಿಗೂ ಸ್ಥಾನವಿದೆ. ಅರಣ್ಯಗಳನ್ನು ನಾಶಮಾಡಿ, ಮರಗಳನ್ನು ಕಡಿದು, ಜಲಸಂಪನ್ಮೂಲಗಳನ್ನು ಕಲುಷಿತಗೊಳಿಸಿದರೆ ಅವಕ್ಕೆ ಆಹಾರವು ದೊರೆಯದೆ ಅವು ಮನುಷ್ಯರ ಮೇಲೆ ಆಕ್ರಮಣ ಮಾಡುತ್ತಿವೆ ಎನ್ನುವುದನ್ನು ನಾವು ಮರೆಯಬಾರದು.
ಬ್ರಹ್ಮನು ಪ್ರತ್ಯಕ್ಷನಾದಾಗ ಆ ರಾಕ್ಷಸಿಯು, ತಾನು ರೋಗಸ್ವರೂಪಳಾಗಿ ಜೀವದಿಂದಿರುವ ಕಬ್ಬಿಣದ ಸೂಜಿಯ ರೂಪವನ್ನು ತಾಳಿ ಪ್ರಾಣಿಗಳ ಪ್ರಾಣವಾಯುವಿನ ಮೂಲಕ ಅವರ ಹೃದಯವನ್ನು ಹೊಕ್ಕು ರೋಗವುಂಟು ಮಾಡಿ ಆ ರೋಗಿಗಳನ್ನು ಸಾಯಿಸುವ ವರವನ್ನು ತನಗೆ ದಯಪಾಲಿಸೆಂದು ಬೇಡಿಕೊಂಡಳು.
ಆದರೆ ನಿಷಿದ್ಧ ಪದಾರ್ಥಗಳು, ಸರಿಯಾಗಿ ಬೇಯಿಸದ ಪದಾರ್ಥಗಳು, ಅಕಾಲದಲ್ಲಿ ಅತಿಯಾಗಿ ತಿನ್ನುವವರಿಗೆ, ಕೆಟ್ಟ ಕೆಲಸಗಳನ್ನು ಮಾಡುವವರಿಗೆ, ಅಚ್ಚ ಮೂಢರನ್ನು, ಅಶಾಸ್ತ್ರೀಯ ಮಾರ್ಗದಲ್ಲಿರುವವರನ್ನು, ಅನಾರೋಗ್ಯ ದಶೆಯಲ್ಲಿರುವವರನ್ನು ಮಾತ್ರ ಹಿಂಸಿಸು ಎನ್ನುವ ವರವನ್ನು ಬ್ರಹ್ಮನು ಆ ರಾಕ್ಷಸಿಗೆ ದಯಪಾಲಿಸಿದ.
ಸರಿಯಾಗಿ ಬ್ರಹ್ಮದೇವರು ಮಾಡಬಾರದೆಂದು ಹೇಳಿರುವ ಕೆಲಸಗಳನ್ನು ನಾವಿಂದು ಮಾಡುತ್ತಿರುವುದರಿಂದಲೇ ಈ ದಿನ ಕರೋನಾ ವ್ಯಾಪಿಸುತ್ತಿದೆ ಎನ್ನುವುದನ್ನು ನಾವಿಲ್ಲಿ ಗಮನಿಸೋಣ.
ಸಂಸ್ಕೃತಿದಲ್ಲಿ ’ಕರೋ ನ’ ಅಂದರೆ ಇವನ್ನು ಮಾಡಬೇಡ; ಮಾಡಬಾರದ ಕೆಲಸಗಳನ್ನು ಮಾಡಬೇಡ ಎಂದು!
ಆ ರಾಕ್ಷಸಿ (ವೈರಾಣು) ದ್ವಾರಾ ಬಂದ ಕಾಯಿಲೆಯನ್ನು ವಿಷೂಚಿಕಾ ರೋಗ ಎಂದು ಕರೆಯಲಾಗಿದೆ.
ಈ ವಿಧವಾಗಿ ತನಗೆ ಹಸಿವೆಯಾದಾಗಲೆಲ್ಲಾ ಆ ರಕ್ಕಸಿಯು ಬ್ರಹ್ಮ ಕೊಟ್ಟ ವರದಿಂದಾಗಿ ಮಾನವಾಳಿಯನ್ನು ವ್ಯಾಧಿ ರೂಪದಲ್ಲಿ ಭಕ್ಷಿಸುತ್ತಿದೆ.
ಇದಕ್ಕೆ ಸಿಲುಕದಂತೆ ಗುಣವಂತರು ಅಂದರೆ ಪ್ರಕೃತಿ ಧರ್ಮಗಳಿಗೆ ಅನುಗುಣವಾಗಿ ಜೀವಿಸುವ ನಡವಳಿಕೆಯನ್ನು ಹೊಂದಿದವರಿಗೆ ಅದು ಏನೂ ಮಾಡಲಾರದು ಎಂದೂ ಬ್ರಹ್ಮನು ಅನುಗ್ರಹಿಸಿದ್ದಾನೆ.
ಧರ್ಮಬುದ್ಧಿಯುಳ್ಳವರು ಬಾಧೆಗೊಳಗಾಗದೇ ಇರುವುದಕ್ಕೆ ಮತ್ತು ವಿಷೂಚಿಕಾ ರೀತಿಯ ವೈರಾಣುಗಳ ನಿವಾರಣೆಗೆ ಮಂತ್ರವೊಂದನ್ನೂ ಸಹ ಬ್ರಹ್ಮನು ಉಪದೇಶಿಸಿದ್ದಾನೆ. ಆ ವಿಷೂಚಿಕಾ ಮಂತ್ರವು ಹೀಗಿದೆ –
“ಓಂ ಹ್ರಾಂ ಹ್ರೀಂ ಶ್ರೀಂ ರಾಂ ವಿಷ್ಣುಶಕ್ತಯೇ ನಮೋ ಭಗವತಿ ವಿಷ್ಣುಶಕ್ತಿ
ಏಹಿ ಏನಾಂ ಹರಹರ ದಹದಹ ಹನಹನ ಪಚಪಚ ಮಥಮಥ
ಉತ್ಸಾದಯ ಉತ್ಸಾದಯ ದೂರೇ ಕುರು ಕುರು ಸ್ವಾಹಾ”
ವಿಷೀಚಿಕೇ ತ್ವಂ ಹಿಮವಂತಂ ಗಚ್ಛ ಗಚ್ಛ ಜೀವಸಾರ ಚಂದ್ರ ಮಂಡಲಂ ಗತೋ ಸಿ ಸ್ವಾಹಾ”
(ಕರ್ಕಟ್ಯುಪಾಖ್ಯಾನ, ಯೋಗ ವಾಶಿಷ್ಠ)
ಸಾಮೂಹಿಕ ಪಾಪಗಳು ಪ್ರಕೃತಿ ಪ್ರಕೋಪಗಳಾಗಿ ಪರಿಣಮಿಸುತ್ತವೆ. ಅಂತಹುದೇ ಈ ’ಕರೋ ನ’
ಪ್ರಕೃತಿಯಲ್ಲಿ ಅಸುರೀ ಶಕ್ತಿಗಳು ಸದಾಕಾಲ ಇದ್ದೇ ಇರುತ್ತವೆ. ವ್ಯಕ್ತಿಯ ನಡವಳಿಕೆಯು ಧರ್ಮಬದ್ಧವಾಗಿದ್ದರೆ ಅವು ಆತನನ್ನು ಬಾಧಿಸದೆ, ಆವಾಹಿಸದೆ ದೂರ ಸರಿಯುತ್ತವೆ. ಇದು ಅವುಗಳಿಗೆ ಸೃಷ್ಟಿಕರ್ತನ ಆದೇಶ. ಧರ್ಮಬುದ್ಧಿ ನಶಿಸಿದಾಗ ಆ ವ್ಯಕ್ತಿಯನ್ನು ಅವು ಆವಾಹಿಸಿ ಅವನನ್ನು ರೋಗಗ್ರಸ್ತನನ್ನಾಗಿಸಿ ಅಂತ್ಯಗೊಳಿಸುತ್ತವೆ.
ಆದ್ದರಿಂದ ಭಾರತೀಯ ಸಂಸ್ಕೃತಿಯಲ್ಲಿ ಆಚಾರದ ಹೆಸರಿನಲ್ಲಿ ನಡವಳಿಕೆಯನ್ನು ಏರ್ಪಡಿಸಿದ್ದಾರೆ. ಆಚಾರವನ್ನು ಪಾಲಿಸಿದರೆ ಆರೋಗ್ಯವಿರುತ್ತದೆ ಎಂದು ಹೇಳಿರುವುದು ಅದಕ್ಕಾಗಿಯೇ. ಇದನ್ನೇ ಇಂದಿನ ಪಾಶ್ಚಾತ್ಯ ವೈದ್ಯ ಪ್ರಪಂಚದಲ್ಲಿ ’ಇಮ್ಯೂನಿಟಿ ಪ್ರಿನ್ಸಿಪಲ್ಸ್’ (ರೋಗ ನಿರೋಧಕತೆಯ ತತ್ತ್ವ) ಎಂದು ಕರೆಯುತ್ತಾರೆ.
ಇಮ್ಯೂನಿಟಿ ತತ್ತ್ವಗಳನ್ನು ಸರಿಯಾಗಿ ಪಾಲಿಸುವ ವ್ಯಕ್ತಿಯನ್ನು ವೈರಾಣುಗಳು ಬಾಧಿಸುವುದಿಲ್ಲ, ಒಂದು ವೇಳೆ ಆವಾಹಿಸಿದರೂ ಸಹ ಅಲ್ಪ ಪ್ರಯತ್ನದಲ್ಲಿಯೇ ಅವು ತೊಲಗಿ ಹೋಗುತ್ತವೆ.
ಆಧಾರ: ತೆಲುಗಿನ ಫೇಸ್ ಬುಕ್ ಮಿತ್ರರಾದ ಶ್ರೀ ರಮಣ ಗುಂಡವರಪು Ramana Gundavarapu ಇವರು ಹಂಚಿಕೊಂಡ ಅಂಚೆಯ ಭಾವಾನುವಾದ.
ಹೆಚ್ಚಿನ ಬರಹಗಳಿಗಾಗಿ
ಚಾಚಾ ನೆಹರು ಮತ್ತು ನಮ್ಮ ಮಕ್ಕಳು
ಭವಿಷ್ಯದ ಔದ್ಯೋಗಿಕ ಕ್ಷೇತ್ರದಲ್ಲಿ ಕನ್ನಡಿಗರು
ಹಿಂದಿ ಹೇರಿಕೆ ಸರಿಯೇ?