- ವಿನಾಯಕರ ಪ್ರತಿಜ್ಞೆ ಎಂಬ ಕವಿತೆ - ಆಗಸ್ಟ್ 9, 2021
- ಒಲವಿಲ್ಲದ ಪೂಜೆ - ಮೇ 14, 2021
- ಪರಿವಾರ ಪ್ರಿಯನಲ್ವೆ ಇಕ್ಷ್ವಾಕು ಸಂಜಾತ? - ಏಪ್ರಿಲ್ 20, 2021
ವ್ಯಕ್ತಿತ್ವದ ಶುದ್ಧೀಕರಣದೊಂದಿಗೆ ಸಮಾಜದ ಶುದ್ಧೀಕರಣಕ್ಕೂ ಒತ್ತುಕೊಟ್ಟು ತನ್ನ ಕಾಲದ ಜೀವನಕ್ರಮವನ್ನೇ ಪಲ್ಲಟಗೊಳಿಸಿ ಸಮಾನತೆಯ ಹರಿಕಾರನಾಗಿ ಮಿಂಚಿದ ಅಮರ ಚೇತನವೆಂದರೆ ಭಕ್ತಿಭಂಡಾರಿ ಬಸವಣ್ಣ. ಪ್ರತಿಯೊಬ್ಬ ವ್ಯಕ್ತಿ ಶ್ರಮದಿಂದ ಗಳಿಸಬೇಕು ಎಂಬುದು ಕಾಯಕ ತತ್ವ. ಹೀಗೆ ಗಳಿಸಿದ ಸಂಪತ್ತನ್ನು ಸರಳವಾದ ಜೀವನ ಶೈಲಿಗಾಗಿ ಬಳಸಿಕೊಂಡು ಹೆಚ್ಚಿನ ಪಾಲನ್ನು ಹಂಚಬೇಕು ಎಂದು ಹೇಳುವುದು ದಾಸೋಹ. ಇಂತಹ ಅಪರೂಪದ ಚಿಂತನಾ ಕ್ರಮವನ್ನು ಜನಪ್ರಿಯಗೊಳಿಸಿ ಇಡೀ ಸಮಾಜದ ಆಶಯವಾಗಿ ಬೆಳೆಸುವುದು ಬಹುಮುಖ್ಯವಾದ ಸಾಮಾಜಿಕ ಕ್ರಾಂತಿಯೆಂದು ದಾಖಲಾಗಿದೆ. ಹನ್ನೆರಡನೆಯ ಶತಮಾನದಲ್ಲಿ ಇಡೀ ಸಮಾಜವನ್ನು ಆವರಿಸಿದ್ದ ಅಂಧ ಆಚರಣೆಗಳು ಹಾಗೂ ಡಾಂಭಿಕ ಭಕ್ತಿಯ ಪ್ರದರ್ಶನದ ಬೂಟಾಟಿಕೆಯನ್ನು ಬಹಳ ಉಗ್ರವಾಗಿ ಟೀಕಿಸಿದ ಬಸವಣ್ಣ ತನ್ನ ವಚನಗಳ ಮೂಲಕ ಅಂತ;ಕರಣ ಶುದ್ಧಿಯ ಮಹತ್ವವನ್ನು ವಿಶದೀಕರಿಸಿದ್ದಾನೆ. ಆತನ ವಚನವೊಂದು ಹೀಗಿದೆ.
ಒಲವಿಲ್ಲದ ಪೂಜೆ ನೇಹವಿಲ್ಲದ ಮಾಟ
ಆ ಪೂಜೆಯು ಆ ಮಾಟವು
ಚಿತ್ರದ ರೂಹು ಕಾಣಿರಣ್ಣಾ ಚಿತ್ರದ ಕಬ್ಬು ಕಾಣಿರಣ್ಣಾ
ಅಪ್ಪಿದಡೆ ಸುಖವಿಲ್ಲ, ಮೆಲಿದಡೆ ರುಚಿಯಿಲ್ಲ ಕೂಡಲಸಂಗಮದೇವಾ
ನಿಜವಿಲ್ಲದವನ ಭಕ್ತಿ ದೇವರಲ್ಲಿ ಪ್ರೀತಿ-ಶೃದ್ಧೆಯಿಲ್ಲದಿದ್ದರೆ ಅನ್ನು ಒಲವಿಲ್ಲದ ಪೂಜೆ ಎನ್ನಬಹುದು. ಅಂತಹ ಪೂಜೆಯನ್ನು ಮಾಡುವ ವ್ಯಕ್ತಿ ಕೇವಲ ಆಡಂಬರದ ಆಷರಣೆಗಾಗಿ ಮಾಡುತ್ತಿರುತ್ತಾನೆ. ತಾನೊಬ್ಬ ಭಕ್ತನೆಂದು ಸಾಮಾಜಿಕವಾಗಿ ಗುರುತಿಸಿಕೊಳ್ಳುವುದಕ್ಕಾಗಿಯೋ ಅಥವಾ ಬಾಹ್ಯಾವಲೋಕನದಿಂದ ಜನಮನ್ನಣೆ ಗಳಿಸುವುದಕ್ಕಾಗಿಯೋ ಪೂಜೆಯ ನಾಟಕವನ್ನು ನಡೆಸಿರುತ್ತಾನೆ. ನೇಹವೆಂದರೆ ಸ್ನೇಹ. ಪ್ರೀತಿ-ಪ್ರೇಮದಂತಹ ಅನುರಕ್ತಿಯ ಭಾವವಿಲ್ಲದಿದ್ದರೆ ಅದು ತೋರಿಕೆಯ ಸೌಂದರ್ಯವಾಗಿರುತ್ತದೆ. ಅಂತಹ ಪೂಜೆಯಿಂದಲಾಗಲೀ ಅಥವಾ ಸೌಂದರ್ಯದಿಂದಲಾಗಲೀ ಯಾವುದೇ ರೀತಿಯ ಪ್ರಯೋಜನವಿರುವುದಿಲ್ಲ.
ಬಸವಣ್ಣನವರು ಅದನ್ನು ಚಿತ್ರದಲ್ಲಿರುವ ರೂಪ ಅಥವಾ ಚಿತ್ರದಲ್ಲಿರುವ ಕಬ್ಬಿಗೆ ಹೋಲಿಸುತ್ತಾರೆ. ಚಿತ್ರದಲ್ಲಿರುವ ಕಬ್ಬು ಎಷ್ಟೇ ಚೆಂದವಾಗಿ ಬಿಡಿಸಲ್ಪಟ್ಟಿದ್ದರೂ ಕೂಡ ಅದು ಕೇವಲ ನೇತ್ರಾನಂದವನ್ನು ಕೊಡುತ್ತದೆ. ಅದನ್ನು ತಿನ್ನುವುದಕ್ಕೆ ಸಾಧ್ಯವಿಲ್ಲ. ಕಬ್ಬಿನ ಬಳಕೆಯಿರುವುದು ಅದರ ಆಸ್ವಾದನೆಯಲ್ಲಿ. ತಿನ್ನಲು ಸಾಧ್ಯವೇ ಇರದ ಕಬ್ಬನ್ನು ನಾವು ಮೆಚ್ಚುವುದು ಸಾಧ್ಯವಿಲ್ಲ. ಭಕ್ತಿ-ಶೃದ್ಧೆಗಳಿಲ್ಲದೇ ಪೂಜೆ ಮಾಡಿದರೆ ಅದು ಚಿತ್ರದಲ್ಲಿರುವ ಕಬ್ಬಿನಂತೆ ರಸಹೀನವಾಗಿಯೂ, ಸ್ವಾದಹೀನವಾಗಿಯೂ ಕೇವಲ ಕಾಣುವುದಕ್ಕೆ ಮಾತ್ರ ಚೆಂದವಾಗಿ ಆದರೆ ಯಾವುದೇ ಬಳಕಗೆ ದೊರಕದಂತೆ ಅಸ್ತಿತ್ವದಲ್ಲಿರುತ್ತದೆ. ಚಿತ್ರದಲ್ಲಿರುವ ಸುಂದರವಾದ ಆಕಾರವನ್ನು ಅಪ್ಪಿಕೊಂಡರೆ ಯಾವುದೇ ಸುಖವೂ ದೊರೆಯುವುದಿಲ್ಲ. ನಿಜವಾದ ಭಕ್ತಿಯಿರದೇ ಇದ್ದಾಗ ಯಾವ ಪೂಜೆ ಮಾಡಿದರೂ ಅದರಿಂದ ಫಲ ಪ್ರಾಪ್ತಿಯಾಗುವುದಿಲ್ಲ.
ಬಸವಣ್ಣನವರ ಜಯಂತಿಯ ದಿನದಂದು ಅವರ ಸಂದೇಶಗಳನ್ನು ನೆನಪು ಮಾಡಿಕೊಂಡು ವರ್ತಮಾನದ
ಸಂದರ್ಭಗಳೊಡನೆ ಸಮೀಕರಿಸಿಕೊಂಡು ಆಸ್ವಾದಿಸುವುದು ಹಾಗೂ ತನ್ಮೂಲಕ ಜೀವನ ಮೌಲ್ಯಗಳನ್ನು ಎತ್ತರಿಸಿಕೊಳ್ಳುವುದು ಸೂಕ್ತವಾದ ಕಾರ್ಯ.
ಸವಣ್ಣನವರು ಅದನ್ನು ಚಿತ್ರದಲ್ಲಿರುವ ರೂಪ ಅಥವಾ ಚಿತ್ರದಲ್ಲಿರುವ ಕಬ್ಬಿಗೆ ಹೋಲಿಸುತ್ತಾರೆ. ಚಿತ್ರದಲ್ಲಿರುವ ಕಬ್ಬು ಎಷ್ಟೇ ಚೆಂದವಾಗಿ ಬಿಡಿಸಲ್ಪಟ್ಟಿದ್ದರೂ ಕೂಡ ಅದು ಕೇವಲ ನೇತ್ರಾನಂದವನ್ನು ಕೊಡುತ್ತದೆ. ಅದನ್ನು ತಿನ್ನುವುದಕ್ಕೆ ಸಾಧ್ಯವಿಲ್ಲ. ಕಬ್ಬಿನ ಬಳಕೆಯಿರುವುದು ಅದರ ಆಸ್ವಾದನೆಯಲ್ಲಿ. ತಿನ್ನಲು ಸಾಧ್ಯವೇ ಇರದ ಕಬ್ಬನ್ನು ನಾವು ಮೆಚ್ಚುವುದು ಸಾಧ್ಯವಿಲ್ಲ. ಭಕ್ತಿ-ಶೃದ್ಧೆಗಳಿಲ್ಲದೇ ಪೂಜೆ ಮಾಡಿದರೆ ಅದು ಚಿತ್ರದಲ್ಲಿರುವ ಕಬ್ಬಿನಂತೆ ರಸಹೀನವಾಗಿಯೂ, ಸ್ವಾದಹೀನವಾಗಿಯೂ ಕೇವಲ ಕಾಣುವುದಕ್ಕೆ ಮಾತ್ರ ಚೆಂದವಾಗಿ ಆದರೆ ಯಾವುದೇ ಬಳಕಗೆ ದೊರಕದಂತೆ ಅಸ್ತಿತ್ವದಲ್ಲಿರುತ್ತದೆ. ಚಿತ್ರದಲ್ಲಿರುವ ಸುಂದರವಾದ ಆಕಾರವನ್ನು ಅಪ್ಪಿಕೊಂಡರೆ ಯಾವುದೇ ಸುಖವೂ ದೊರೆಯುವುದಿಲ್ಲ. ನಿಜವಾದ ಭಕ್ತಿಯಿರದೇ ಇದ್ದಾಗ ಯಾವ ಪೂಜೆ ಮಾಡಿದರೂ ಅದರಿಂದ ಫಲ ಪ್ರಾಪ್ತಿಯಾಗುವುದಿಲ್ಲ.
ಬಸವಣ್ಣನವರ ಜಯಂತಿಯ ದಿನದಂದು ಅವರ ಸಂದೇಶಗಳನ್ನು ನೆನಪು ಮಾಡಿಕೊಂಡು ವರ್ತಮಾನದ
ಸಂದರ್ಭಗಳೊಡನೆ ಸಮೀಕರಿಸಿಕೊಂಡು ಆಸ್ವಾದಿಸುವುದು ಹಾಗೂ ತನ್ಮೂಲಕ ಜೀವನ ಮೌಲ್ಯಗಳನ್ನು ಎತ್ತರಿಸಿಕೊಳ್ಳುವುದು ಸೂಕ್ತವಾದ ಕಾರ್ಯ.
ಹೆಚ್ಚಿನ ಬರಹಗಳಿಗಾಗಿ
ಗಣೇಶನ ಕೈಯಲ್ಲಿಯ ಲಾಡು
ಹರಿಹರಪುರ ಗ್ರಾಮವೂ, ಲೊವೆಂಥಾಲ್ ಎಂಬ ಪಾದ್ರಿಯೂ..
ಬೇಂದ್ರೆ ಸಂಗೀತ: ಒಂದು ವಿಶ್ಲೇಷಣೆ