ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಡಾ.ಜ್ಯೋತಿ ಸತೀಶ್

ಡಾ. ಜ್ಯೋತಿ ಸತೀಶ್ ಮೂಲತಃ ಕುಂದಾಪುರದ ಬಿಜೂರಿನವರು. ಮುಂಬಯಿ ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ. ಎ. ಯನ್ನು ಪ್ರಥಮ ರ್ಯಾಂಕ್ ನೊಂದಿಗೆ ಪಡೆದರಲ್ಲದೆ, ವರದರಾಜ್ಯ ಆದ್ಯ ಬಂಗಾರ ಪದಕವನ್ನು ಪಡೆದುಕೊಂಡರು. ಡಾ. ಜಿ. ಎನ್. ಉಪಾಧ್ಯರ ಮಾರ್ಗದರ್ಶನದಲ್ಲಿ “ಶಿವರಾಮ ಕಾರಂತರ ವೈಚಾರಿಕ ನೆಲೆಗಳು” ಈ ವಿಷಯದಲ್ಲಿ ಸಂಪ್ರಬಂಧವನ್ನು ಮಂಡಿಸಿ ಡಾಕ್ಟರೇಟ್ ಪಡೆದಿದ್ದಾರೆ. ಇವರ ಲೇಖನಗಳು, ಕಥೆಗಳು ಒಳನಾಡಿನ ಹಾಗೂ ಹೊರನಾಡಿನ ಅನೇಕ ಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ. ಅಭಿಜಿತ್ ಪ್ರಕಾಶನದ ಮೂಲಕ ಪ್ರಕಟಗೊಂಡ ’ಸಾಹಿತ್ಯ ಸಂಸ್ಕೃತಿ ಚಿಂತನ’ ಇವರ ಚೊಚ್ಚಲ ಕೃತಿ. ಮೈಸೂರು ಅಸೋಸಿಯೇಶನ್ನ ಮುಖವಾಣಿ ನೇಸರುವಿನ ಸಂಪಾದಕಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ಕಣ್ಣ ಮುಂದೆ ಕತ್ತಲೆ… ಯಾವುದಕ್ಕೂ ಮನಸ್ಸಾಗುತ್ತಿಲ್ಲ. ನೀರವ ಮೌನ ಆವರಿಸಿದೆ ಎಲ್ಲ ಕಡೆ. ನಾಳೆ ನಾನು ಬದುಕಿರಲಾರೆ.. ಇವತ್ತು ನನ್ನ…