ಜ್ಯೋತಿ ಗಾಂವ್ಕರ್
ಗೃಹಿಣಿ. ಯಲ್ಲಾಪುರ- ಅಂಕೋಲಾಗಳ ನಡುವಿನ ಹಸಿರಿನ ಮಡಿಲಿನ ಕಲ್ಲೇಶ್ವರ ದ ನಿವಾಸಿ. ಬಿ ಎ ಪದವೀಧರೆ.
ಕತೆ, ಲೇಖನ, ಕವಿತೆಗಳಲ್ಲಿ ಕೃಷಿ. ಯಕ್ಷಗಾನ ತಾಳಮದ್ದಳೆಯ ಅರ್ಥಧಾರಿ.
ಇವರ ಬರಹಗಳು ಹಲವು ಪತ್ರಿಕೆಗಳಲ್ಲಿ ಮತ್ತು ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಬುಕ್ ಬ್ರಹ್ಮ ನಡೆಸಿದ 'ಜನ ಮೆಚ್ಚಿದ ಕತೆ' (ಡಿಸೆಂಬರ್ ೨೦೨೦) ಸ್ಪರ್ಧೆಯಲ್ಲಿ ಇವರು ಬರೆದ ಕತೆ ಮೊದಲ ಬಹುಮಾನ ಗಳಿಸಿದೆ.