ಪೂರ್ಣಿಮಾ ಜೋಶಿ
ಮಲೆನಾಡಿನ ಹುಡುಗಿ! ಉತ್ತರಕನ್ನಡದ ಸಿದ್ದಾಪುರ ತಾಲೂಕಿನ ಅಂಚಿನ ಊರೊಂದರ ದಟ್ಟಕಾನನದ ಮಧ್ಯ ಪುಟ್ಟಮನೆಯೊಂದರಲ್ಲಿ ಹುಟ್ಟಿ, ಕಡಲ ತೀರದ ಕಾಲೇಜಿನಲ್ಲಿ ಓದಿ ಬೆಳೆದವರು. ವೃತ್ತಿಯಲ್ಲಿ ಸಾಪ್ಟವೇರ್ ಇಂಜಿನೀಯರ್. ಗಾಳಿಬೀಸಿದಾಗೆಲ್ಲಾ ಕಾಗದದ ಮೇಲೆ ಲೇಖನಿ ಆಡಿಸುವುದು ಹವ್ಯಾಸ. ಸಮಯ ಸಿಕ್ಕಾಗ ತೋಚಿದ್ದು ಗೀಚಲು ಇಷ್ಟ. ಬೆಂಗಳೂರಿನ ಧಾವಂತಕ್ಕೂ ಊರಿನ ಆಹ್ಲಾದತೆಗೂ ಕೊಂಡಿಯಾಗಿ ಬೆಸೆದುಕೊಂಡವರು! ಭಾವನೆಗಳನ್ನ ಮಾತಿಗಿಂತ ಬರಹದಲ್ಲಿ ಚಂದವಾಗಿ ವ್ಯಕ್ತಪಡಿಸಿಬಹುದೆಂದು ನಂಬಿದವರು. ಇರುವುದರಲ್ಲೇ ಒಪ್ಪಓರಣವಾಗಿ ಜೀವನವನ್ನ ಅಪ್ಪಿಕೊಂಡವರು..