ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಪೂರ್ಣಿಮಾ ಜೋಶಿ
ಇತ್ತೀಚಿನ ಬರಹಗಳು: ಪೂರ್ಣಿಮಾ ಜೋಶಿ (ಎಲ್ಲವನ್ನು ಓದಿ)

ಹನಿ ಹನಿ ಚುಂಬಿಸು ವರ್ಷವೇ
ಇಳೆಯ ಕೋಪ ತಣಿಸೋವರೆಗೆ..
ಹಸಿರ ಸೀರೆ ತೊಡಿಸೋವರೆಗೆ
ಮರಳಿ ಮರಳಿ ಸುರಿ
ಮಳೆಯ ರಿಮಿಝಿಮಿ
ನಾದವೊಂದೆ ಕೇಳೋ ತೆರದಿ
ಅವನಿಯ ಹೃದಯ ತಂತಿ ಮೀಟಿ
ಒಡಲು ತುಂಬಿ ಹರಿಯೋವರೆಗೆ
ಝರಿಯು ಧುಮ್ಮಿಕ್ಕುವವರೆಗೆ
ಜಲಧಿ ಬಳಸಿ ಅಬ್ಬರಿಸುವವರೆಗೆ..
ಸುರಿ ಸುರಿ ನೀ, ಸುಂದರಿ ಧರೆ
ಮಂಜ ಮುಸುಕ ಹೊದೆವವರೆಗೆ
ಫಸಲು ತುಂಬಿ ತುಳುಕೋ ತನಕ
ಕೆಸರ ಗಂಧ ತೊಳೆವ ತನಕ
ಬಸಿರು ಭುವಿಯ ನಗಿಸೋವರೆಗೆ
ಮಿಂದ ಇಳೆಯ ಶೃಂಗರಿಸೋ ಬಗೆ!
ಮತ್ತೆ ಬಾ ಇಳೆಗೆ…
ನೀಡು ತುತ್ತ ಈ ಜೀವರಾಶಿಗೆ
ಸುರಿದು ಮಳೆಯಾಗಿ
ಜೀವ ಸುಧೆಯಾಗಿ
ಮನದ ಬೇಗೆಯ ತಣಿಸೆ..
ಸಮೃದ್ಧಿಯ ತುಂಬಿ ಸಂಭ್ರಮಿಸಿ
ನಳನಳಿಸಲು ಈ ಧರೆ…
ಬಾ ವರ್ಷಧಾರೆ..!!