ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ರಘುಚಂದ್ರ ಮಧುರೆ

ಮೂಲತಃ ಚಿತ್ರದುರ್ಗ ಜಿಲ್ಲೆ, ಹೊಸದುರ್ಗ ತಾಲ್ಲೂಕು ಮಧುರೆ ಗ್ರಾಮದವರಾದ ಇವರು ಸದ್ಯಕ್ಕೆ ತುಮಕೂರಿನಲ್ಲಿ ವಾಸವಾಗಿದ್ದಾರೆ. ಇವರು ಭೂಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯಲ್ಲಿ ಸರ್ವೆ ಸೂಪರ್ ವೈಸರ್ ಆಗಿ ಬೆಳಗಾವಿ ಸಿಟಿ ಸರ್ವೆ ಕಛೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಮನೆಯಲ್ಲಿ ತಂದೆಯವರು ಬರೆಯುತ್ತಿದ್ದ ಕತೆ, ಕವನ, ನಾಟಕಗಳ ರೂಪಕಗಳನ್ನು ಬರೆಯುತ್ತಿದ್ದುದರಿಂದ ಸಾಹಿತ್ಯದ ಮೇಲಿನ ಆಸಕ್ತಿ ಮತ್ತು ಅಭಿರುಚಿ ಇವರನ್ನು ಅತ್ತಕಡೆ ಸೆಳೆಯುವಂತೆ ಮಾಡಿತು. ಶ್ರೀ ಶ್ರೀ ಶ್ರೀ ಪರಮಪೂಜ್ಯ ಶಿವಕುಮಾರ ಸ್ವಾಮಿಗಳ ಬಗ್ಗೆ ಲೇಖನ, ಮಹಿಳಾ ದಿನಾಚರಣೆ, ತಾಯಂದಿರ ದಿನ, ಕೋವಿಡ್ ಸಮಯದಲ್ಲಿ ಇವರು ಬರೆದ ಲೇಖನಗಳು ಹೀಗೆ ಅನೇಕ ಬರಹಗಳು ವಿಜಯವಾಣಿ ಪತ್ರಿಕೆಯಲ್ಲಿ ಮೂಡಿಬಂದಿವೆ. ಎಸ್ ಎಲ್ ಭೈರಪ್ಪ, ಜೋಗಿ, ಜಯಂತ ಕಾಯ್ಕಿಣಿ ಅಂಥವರ ಕತೆ ಕಾದಂಬರಿಗಳು ಇವರಲ್ಲಿ ಸಾಹಿತ್ಯದ ಮೇಲೆ ಆಸಕ್ತಿ, ಒಲವು, ಭರವಸೆ ಮೂಡಿಸಿದ್ದಲ್ಲದೇ ಸಾಹಿತ್ಯ ಕೃಷಿಯಲ್ಲಿ ಕೈಯಾಡಿಸುವಂತೆ ಪ್ರೇರಿಪಿಸಿದವು.

ಪ್ರವಾಸ ಕಥನ ಅಂದರೆ ಅದು ಕೇವಲ ರಸ್ತೆಗಳಿಗೆ​, ದುಡ್ಡಿನ ಲೆಕ್ಕಾಚಾರಕ್ಕೆ ಸೀಮಿತವಾದ ಸಂಗತಿಯಲ್ಲ​. ಅದು ನಮ್ಮ ಪ್ರಕೃತಿ, ಬದುಕು, ಜನ​,…