ಚಂದಕಚರ್ಲ ರಮೇಶ ಬಾಬು
ಶ್ರೀಯುತ ರಮೇಶ ಬಾಬು ಅವರು ಬಳ್ಳಾರಿಯವರು. ಮಾತೃಭಾಷೆ ಕನ್ನಡ. ಶಾಲಾ ಕಾಲೇಜುಗಳಲ್ಲಿ ಓದಿ ಬರೆದದ್ದು ತೆಲುಗು. ಹಾಗಾಗಿ ಎರಡೂ ಭಾಷೆಯ ಪರಿಚಯವಿದೆ. ಮೂಡಣದ ಮಿಂಚು, ಮಂಜಿನ ಹೂ ಮತ್ತು ತವಕ ಮೂರು ಕನ್ನಡಕ್ಕೆ ತಂದ ಅನುವಾದ ಕಾದಂಬರಿಗಳು.’ ಮನದರ್ಪಣ’ ’ ಅನಿಸಿದ್ದೆಲ್ಲ ಅಕ್ಷರದಲ್ಲಿ’ ಎನ್ನುವ ಎರಡು ಕವನ ಸಂಕಲನ ಬಂದಿವೆ. ಗೀತಲೋನಿ ಕರ್ತವ್ಯ ಬೋಧನ, ಸ್ಥಿತಪ್ರಜ್ಞತ, ಉಪನಿಷತ್ತುಲ ಸಾರಂ ಎಂಬ ತೆಲುಗು ಪುಸ್ತಕಗಳು ಬಂದಿವೆ. ತೆಲುಗು ಮತ್ತು ಕನ್ನಡ ಪತ್ರಿಕೆಗಳಲ್ಲಿ ಅನುವಾದ ಕತೆಗಳು ಅಚ್ಚಾಗಿವೆ. ಕನ್ನಡ ಪತ್ರಿಕೆಗಳಲ್ಲಿ ಸ್ವತಂತ್ರ ಲೇಖನಗಳು ಮುದ್ರಿತವಾಗಿವೆ.
ಕರ್ಣಾಟಕ ಬ್ಯಾಂಕಿನಲ್ಲಿ ೩೩ ವರ್ಷ ಸೇವೆ ಸಲ್ಲಿಸಿ ೨೦೧೩ ರಲ್ಲಿ ನಿವೃತ್ತನಾಗಿದ್ದು ಈಗ ಹೈದರಾಬಾದಿನ ಹತ್ತಿರ ನೆಲೆಸಿದ್ದಾರೆ.