ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ವಿದುಷಿ ಸರೋಜಾ ಶ್ರೀನಾಥ್‍

ಸರೋಜಾ ಶ್ರೀನಾಥ್ : ವಿದುಷಿ ಸರೋಜಾ ಶ್ರೀನಾಥ್‍ರವರು ಸಂಗೀತ ಮತ್ತು ಸಾಹಿತ್ಯಕ್ಷೇತ್ರಕ್ಕೆ ಅಮೂಲ್ಯ ಕೊಡುಗೆಯನ್ನು ಕೊಟ್ಟವರು. ಬಹುಮುಖ ವ್ಯಕ್ತಿತ್ವ. ಮೂಲತಃ ಮೈಸೂರಿನವರಾದ ಇವರು ಮುಂಬಯಿಯಲ್ಲಿದ್ದು ಇದೀಗ ಸಿಂಗಾಪುರದಲ್ಲಿ ನೆಲೆಸಿರುವರು. ಬಾಲ್ಯದಿಂದಲೇ ಸಂಗೀತ, ನೃತ್ಯದ ಬಗೆಗೆ ವಿಶೇಷ ಒಲವಿದ್ದ ಅವರು ಮುಂಬಯಿ ವಿಶ್ವವಿದ್ಯಾಲಯದ ನಲಂದ ನೃತ್ಯಕಲಾ ಮಹಾವಿದ್ಯಾಲಯದಲ್ಲಿ ಸಂಗೀತ ಶಾಸ್ತ್ರಜ್ಞೆಯಾಗಿ, ಭರತನಾಟ್ಯ ವಿಭಾಗದ ಮುಖ್ಯಸ್ಥೆಯಾಗಿ ಸುಮಾರು 28 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಜೊತೆಯಲ್ಲಿ ಮುಂಬಯಿಯಲ್ಲಿ ತಮ್ಮದೇ ಆದ `ಕನಕಸಭಾ ಪರ್‍ಫಾರ್ಮಿಂಗ್ ಆಟ್ರ್ಸ್ ಸೆಂಟರ್’ ಎನ್ನುವಂತಹ ಭರತನಾಟ್ಯ ಶಾಲೆಯನ್ನು ಆರಂಭಿಸಿ ನೂರಾರು ಪ್ರತಿಭಾವಂತ ವಿದ್ಯಾರ್ಥಿಗಳನ್ನು ತಯಾರು ಮಾಡಿದ್ದಾರೆ. ಸಾಹಿತ್ಯದ ಮೇಲೆ ಅಪಾರ ಆಸಕ್ತಿವುಳ್ಳವರು. ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಇವರ ಮಗಳು ಡಾ. ಸಿರಿರಾಮ ಅಂತಾರಾಷ್ಟ್ರೀಯ ಖ್ಯಾತಿಯ ನೃತ್ಯಪಟು. ದೇಶ ವಿದೇಶಗಳಲ್ಲಿ ನೃತ್ಯ ಕಾರ್ಯಕ್ರಮಗಳ ಮೂಲಕ ಕಲೆ, ಸಂಸ್ಕ್ರತಿಯನ್ನು ಪ್ರಖ್ಯಾತಿಗೊಳಿಸುವಲ್ಲಿ ಮಹತ್ತರ ಪಾತ್ರ ವಹಿಸಿದವರು.

ಹನ್ನೊಂದನೇ ಶತಮಾನದಲ್ಲಿ ಆಳಿದ ದೊರೆ ಅನವ್ರತನ ಕಾಲದಲ್ಲೇ ರಾಮನ ಕಥೆಯು ಜನಜನಿತವಾಗಿತ್ತು. ಬರಹದಲ್ಲಿರಲಿಲ್ಲವಾದರೂ ಬಾಯಿ ಮಾತುಗಳಲ್ಲೇ ರಾಮನ ಕಥೆಯ ಪ್ರಸಾರವಾಗಿತ್ತು….