ಸುಬ್ರಾಯ ಚೊಕ್ಕಾಡಿ
ಕನ್ನಡ ಸಾರಸ್ವತ ಲೋಕ ಕಂಡ ಅತ್ಯಂತ ಮಹತ್ವದ ಬರೆಹಗಾರರಲ್ಲಿ ಶ್ರೀ ಸುಬ್ರಾಯ ಚೊಕ್ಕಾಡಿಯವರು ಒಬ್ಬರು. ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಬರೆದರೂ ಮುಖ್ಯವಾಗಿ ಕವಿಯಾಗಿ, ವಿಮರ್ಶಕರಾಗಿ, ನಾಟಕಕಾರರಾಗಿ ಎಲ್ಲರಿಗೂ ಪರಿಚಿತರು.ಸುಳ್ಯ ತಾಲ್ಲೂಕಿನ ಚೊಕ್ಕಾಡಿಯಲ್ಲಿ ಜೂನ್ ೨೯, ೧೯೪೦ ರಂದು ಜನಿಸಿದರು. ಅವರ ತಂದೆ ಯಕ್ಷಗಾನ ಭಾಗವತರಾದ ಗಣಪಯ್ಯನವರು, ತಾಯಿ ಸುಬ್ಬಮ್ಮನವರು.
ಶ್ರೀಯುತರು ಸುಳ್ಯ ತಾಲ್ಲೂಕಿನ ಚೊಕ್ಕಾಡಿಯನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಸೇರಿಸಿದವರು. ಸುಳ್ಯ, ಪೈಲೂರು, ಕುಕ್ಕುಜಡ್ಕ ಶಾಲೆಗಳಲ್ಲಿ ೩೯ ವರ್ಷಕಾಲ ಸಹಾಯಕ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದಾರೆ.
೬೫ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ, ಸುಳ್ಯ ತಾಲ್ಲೂಕು ೫ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ದ.ಕ. ಜಿಲ್ಲಾ ೧೫ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ವರ್ಧಮಾನ ಪ್ರಶಸ್ತಿ, ಮುದ್ದಣ ಪ್ರಶಸ್ತಿ, ಮೃತ್ಯುಂಜಯ ಸಾರಂಗ ಮಠ ಪ್ರಶಸ್ತಿ, ಸಾಹಿತ್ಯಕಲಾನಿ ಪ್ರಶಸ್ತಿ, ಕರ್ನಾಟಕ ಶ್ರೀ ಪ್ರಶಸ್ತಿ ಇತ್ಯಾದಿಗಳು ಇವರ ಬರವಣಿಗೆಗೆ ಸಂದಿವೆ.
ಮುಖ್ಯ ಕವನ ಸಂಕಲನಗಳು :
ತೆರೆ, ಬೆಟ್ಟವೇರಿದ ಮೇಲೆ, ನಿಮ್ಮವೂ ಇರಬಹುದು, ಮೊನ್ನೆ ಸಿಕ್ಕವರು, ಇದರಲ್ಲಿ ಅದು, ಇನ್ನೊಂದು ಬೆಳಗು, ಮಾಗಿಯ ಕೋಗಿಲೆ, ಹಳದಿ ಬೆಳಕಿನ ಸಂಜೆ,ಕಲ್ಲು ಮಂಟಪ
'ಚೊಕ್ಕಾಡಿಯ ಹಕ್ಕಿಗಳು' ಇವರ ಸಮಗ್ರ ಕವಿತೆಗಳ ಪುಸ್ತಕ.
ವಿಮರ್ಶೆ:
ಕಾವ್ಯ ಸಮೀಕ್ಷೆ, ಕೃತಿಶೋಧ, ಒಳಹೊರಗು.
ಕಾದಂಬರಿ:
ಸಂತೆಮನೆ
ಕ್ಯಾಸೆಟ್ ಹಾಗೂ ಸಿಡಿಗಳು:
ಮಿಲನ, ಮಾನಸ, ಬೆಣ್ಣೆ ಕದ್ದ ನಮ್ಮ ಕೃಷ್ಣ, ವನಸಿರಿ, ಅನುರಾಗ, ಸಲ್ಲಾಪ, ಹುಣ್ಣಿಮೆ, ನೂಪುರ, ಸಿರಿಗನ್ನಡ, ದೀಪ, ಭಾವ ಚಿತ್ತಾರ, ನಿನ್ನ ಬಾಂದಳದಂತೆ.
ಇವರಿಗೆ ಅರ್ಪಿತವಾದ ಗೌರವ ಗ್ರಂಥ:
ಮುಕ್ತ ಹಂಸ