ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸುಚಿತ್ರಾ ಹೆಗಡೆ

ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಕತಗಾಲ ಹುಟ್ಟೂರು. ಕುಮಟಾದ ಬಾಳಿಗಾ ಕಾಲೇಜು, ಕರ್ನಾಟಕ ವಿಶ್ವವಿದ್ಯಾಲಯದಿಂದ ಆಂಗ್ಲ ಸಾಹಿತ್ಯದಲ್ಲಿ ಪದವಿ (ಪ್ರಥಮ ದರ್ಜೆ). ಕಮಲಾ ಬಾಳಿಗಾ ಕಾಲೇಜಿನಿಂದ ಬಿ ಎಡ್ ಪದವಿ ಹಾಗೆಯೇ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ. ಕನ್ನಡ ಸಾಹಿತ್ಯದಲ್ಲಿ ಅಪಾರ ಆಸಕ್ತಿ. ಹಲವು ಕವನಗಳು ನಾಡಿನ ವಿವಿಧ ವೆಬ್ ಮ್ಯಾಗಜೀನ್, ಪತ್ರಿಕೆ/ನಿಯತಕಾಲಿಕಗಳಲ್ಲಿ ಪ್ರಕಟಗೊಂಡಿವೆ. ಇಪ್ಪತ್ತೆರಡು ವರುಷಗಳಿಂದ ಹೈಸ್ಕೂಲು, ಕಾಲೇಜುಗಳಲ್ಲಿ ಸೇವೆ ಸಲ್ಲಿಸಿ ಈಗ ಸ್ವಂತ ಉದ್ಯೋಗ ಒಂದನ್ನು ಆರಂಭಿಸಿದ್ದಾರೆ. ಇತ್ತೀಚಿನವರೆಗೂ ಬೆಂಗಳೂರು ನಿವಾಸಿಯಾಗಿದ್ದು ಪ್ರಸ್ತುತ ಸಾಂಸ್ಕೃತಿಕ ನಗರಿ ಮೈಸೂರಲ್ಲಿ ನೆಲೆಸಿದ್ದಾರೆ.

ಯುಗಯುಗಗಳಿಂದ ಮಿಸುಕದೆ ಮಲಗಿ ನನ್ನೊಳಗೆ ನಾ ಬಿದ್ದು ಜಡವಾಗಿಮುದ್ದೆಯಾಗಿದೆ ಮೈಮನ ಚಳಿ ಬಿಸಿಲು ಮಳೆಯ ಮನವಿಗೆಕಾಲನ ಪಾಚಿಯ ಮುಸುಕು ಸರಿದಿಲ್ಲ ಯೋಗನಿದ್ರೆಯೋ ಮಾಯಾವಿದ್ಯೆಯೋಶಾಪಗ್ರಸ್ತ ಮೈಮನಕೆ ದೀರ್ಘ ಮಂಪರು ತಣ್ಣಗೆ ಸುಳಿವ ಗಾಳಿ ಕಿವಿಯಲಿ ಪಿಸುಗುಡುತ್ತದೆಪ್ರಾಣವಾಯುವಲ್ಲ…ನಿನಗೆ ಬೇಕು ಚಲನೆ ನಿನ್ನೊಳಗಿನ ಮರಗಟ್ಟಿದ ಅಂಗಾಂಗಗಳಿಗೆಚುರುಗುಡುವ ಜೀವಂತಿಕೆಯ ಸಂವೇದನೆ ನಿಶ್ಚಲ ದೇಹದಲಿ ನಿಜದರಿವಿನ ಆವಾಹನೆಹೊರಗಿನ ರಾಮನಿಗೆ ಕಾಯುವ ಸಹನೆಅದುಮಿಕೊಂಡಷ್ಟೂ ಭುಗಿಲೇಳುವ ವೇದನೆ ಸಾಕು, ಎದ್ದೇಳು, ಮೈ ಕೊಡವಿನಿನ್ನ ಕಾಲು ನಿನ್ನ ನೆಲ ನಿನ್ನ ಛಲ ನಿನ್ನ ಬಲ ಕೊಡವಿಕೋ ತಡವಿಕೋ ನಿನ್ನಂತರಂಗವಹೊಸ ಆತ್ಮಬಲದ ನೀರು ಚಿಮುಕಿಸು ಹಳೆ(ಣೆ) ಬರಹವ ಅಳಿಸಿಬಿಡುಪತಿತ ಪಾವನದಾಟದ ಕಥೆಯ ನಾಯಕಿಹುಟ್ಟದಿರಲಿ ಮತ್ತೆ ಮತ್ತೆ…

ಹೂಮಾಲೆಯೊಂದು ಕಟ್ಟುತ್ತಿದ್ದೇನೆಸಾವಧಾನತೆಯಿಂದನಿಮಗ್ನಳಾಗಿ… ಒಂದರ ಪಕ್ಕ ಇನ್ನೊಂದುಒಂದೇ ಸಮ ಬರುವಂತೆಹೂವು ಇಟ್ಟು ಜೋಡಿಸಿ… ಕುಸುಮ ಕೋಮಲ ಪಕಳೆನೋವಾಗದಷ್ಟು ಸಡಿಲಸಪೂರವಾದ ದಂಟುಮೈಜಾರಿ ಬೀಳದಷ್ಟು…