ವಿನಾಯಕ ಅರಳಸುರಳಿ
ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲೂಕಿನ ಅರಳಸುರಳಿ ಗ್ರಾಮ ಇವರ ಹುಟ್ಟೂರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಕಾಮರ್ಸ್ ವಿಭಾಗದಲ್ಲಿ ಪದವಿ ಪಡೆದಿದ್ದು ಪ್ರಸ್ತುತ ಹುಟ್ಟೂರಿನಲ್ಲಿ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಹವ್ಯಾಸೀ ಬರಹಗಾರರಾಗಿದ್ದು ಕವನ, ಲಲಿತ ಪ್ರಬಂಧ ಹಾಗೂ ಸಣ್ಣಕಥೆಗಳು ಇವರ ಬರಹದ ಮುಖ್ಯ ಪ್ರಕಾರಗಳು. ಇವರ ಬರಹಗಳು ರಾಜ್ಯದ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.