ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಹನಿಗವಿತೆ ಸ್ಪರ್ಧೆ – ೨೦೨೧

ನಿಮ್ಮ ದೇಶ ಹಾಗೂ ಊರು ಅಥವಾ ನಗರದ ಬಗ್ಗೆ ತಿಳಿಸಿ
ನಿಮ್ಮ ವೈಯಕ್ತಿಯ ಮಾಹಿತಿಗಳು ನಮ್ಮಲ್ಲಿ ಗೌಪ್ಯವಾಗಿ ಇರುತ್ತದೆ.

ಇತ್ತೀಚಿಗೆ ಪ್ರಕಟಿತ ನಸುಕು.ಕಾಮ್ ಹನಿಗವಿತೆ ಸ್ಪರ್ಧೆ – ೨೦೨೧ ಕುರಿತು ಅನೇಕರು ಕೇಳಿದ ಹೆಚ್ಚಿನ ಮಾಹಿತಿಗಳನ್ನು ಒಂದೆಡೆ ಸಾವಗಿಸಿ ಎಲ್ಲರ ಅವಗಾಹನೆಗೆ ನೀಡಲಾಗಿದೆ. ಇತರರಿಗೂ ಹಂಚಿಕೊಳ್ಳಬಹುದು.

೧. ಹನಿಗವಿತೆ ಸಾಹಿತ್ಯ ಪ್ರಕಾರದಲ್ಲಿ ಇದೊಂದು ಸ್ಮರಣೀಯ ಸ್ಪರ್ಧೆ ಆಗಲಿದ್ದು ಎಲ್ಲ ದೇಶ ವಿದೇಶಗಳಲ್ಲಿ ವಾಸಿಸುವ ಲೇಖಕರು ಭಾಗವಹಿಸ ಬಹುದಾಗಿದೆ.

೨. ನಸುಕು.ಕಾಮ್ ಗೆ ಒಂದು ವರ್ಷ ತುಂಬುತ್ತಿರುವ ಸಂಭ್ರಮದಲ್ಲಿ “ನಚ್ಚ ನಸುಕು” ವ್ಯಾಪ್ತಿಯಲ್ಲಿ ಬರುವ ಪ್ರಸ್ತುತಿಗಳಲ್ಲಿ ಇದೂ ಒಂದಾಗಿದೆ. ನಚ್ಚ ನಸುಕು ಅವಾರ್ಡ್ಸ್ ಬಗ್ಗೆ ಮುಂದೆ ಹಂಚಿಕೊಳ್ಳಲಾಗುವುದು.

೩. ಇದಕ್ಕೆ ಎರಡು ಹನಿಗವಿತೆಗಳನ್ನು ಕಡ್ಡಾಯವಾಗಿ ಕಳಿಸಬೇಕು.

೪. ಕವಿತೆಗಳು ಕನಿಷ್ಠ ಎರಡು ಸಾಲು ಗಳಿಂದ ಹಿಡಿದು ಗರಿಷ್ಟ ಏಳು ಸಾಲುಗಳವರೆಗೆ ಇರಬಹುದು.

೫. ಚುಟುಕು, ದ್ವಿಪದಿ, ತ್ರಿಪದಿ, ಚತುಷ್ಪದಿ, ಹಾಯ್ಕು, ಶಾಯರಿ, ಅಬಾಬಿ ಹೀಗೆ ಯಾವುದೇ ಪ್ರಕಾರ , ವಿಷಯ ಆಗಿರಬಹುದು..

೬. ಯಾವುದೇ ವಯಸ್ಸಿನ ಮಿತಿ ಇರುವುದಿಲ್ಲ. ಆದರೆ ಕವಿತೆಗಳು ಈ ಮೊದಲು ಎಲ್ಲಿಯೂ ಪ್ರಕಟ ವಾಗಿರಬಾರದು.

೭. ಜೂನ್ ಹತ್ತು ಕೊನೆಯ ದಿನ.

೮. ತೀರ್ಪುಗಾರರಾಗಿ ಕನ್ನಡದ ಪ್ರಸಿದ್ಧ ಸಾಹಿತಿಗಳು ಹಾಗೂ ನಸುಕು ಸಲಹಾ ಸಮಿತಿ ಇರಲಿವೆ.

೯. ಜೂನ್ ತಿಂಗಳಲ್ಲಿ ಟಾಪ್ ೧೫ ಹನಿಗವನಗಳ ವಾಚನ ಗೋಷ್ಠಿ ನಡೆಯಲಿದ್ದು , ಅಲ್ಲಿ ವಿಜೇತರ ಘೋಷಣೆ ಆಗಲಿದೆ.

೧೦. ಬಹುಮಾನಗಳ ವಿವರ:

  • ಮೊದಲ ಬಹುಮಾನ ೩೦ USD(30$) +ನಚ್ಚ ನಸುಕು ಮೆಡಲ್ + ಡಿಜಿಟಲ್ ಸರ್ಟಿಫಿಕೇಟ್ + ಪುಸ್ತಕಗಳು
  • ಎರಡನೇ ಬಹುಮಾನ ೨೦ USD (20$)+ ಡಿಜಿಟಲ್ ಸರ್ಟಿಫಿಕೇಟ್ + ಪುಸ್ತಕಗಳು
  • ಮೂರನೆಯ ಬಹುಮಾನ ೧೦ USD (10$) + ಡಿಜಿಟಲ್ ಸರ್ಟಿಫಿಕೇಟ್ + ಪುಸ್ತಕಗಳು
  • ಹಾಗೂ ೭ ಮೆಚ್ಚುಗೆ ಬಹುಮಾನಗಳು + ಡಿಜಿಟಲ್ ಸರ್ಟಿಫಿಕೇಟ್

೧೧. ನೀವು ಕವಿತೆಯನ್ನು ಯೂನಿಕೋಡ್ ಅಥವಾ ನುಡಿ ಅಥವಾ ಬರಹ ಅಥವಾ ನೇರವಾಗಿಯೂ ಕಳಿಸಬಹುದು.

ಮೇಲ್ ಐಡಿ : hani.nasuku@gmail.com

ಮೇಲ್ ಐಡಿ ಇಲ್ಲದವರು ನೇರವಾಗಿ www.nasuku.com/hani ಇಲ್ಲಿ ಕಾಪಿ ಪೇಸ್ಟ್ ಮಾಡಿಯೂ Submit ಮಾಡಬಹುದು.

೧೨. “ನಚ್ಚ ನಸುಕು” ಅಡಿಯಲ್ಲಿ ಬರುವ ಪ್ರಸ್ತುತಿ ಹಾಗೂ ಸ್ಪರ್ಧೆಗಳಲ್ಲಿ ಅಂತಿಮ ಹಕ್ಕು ನಸುಕು.ಕಾಮ್ ಹಾಗೂ ಸಲಹಾ ಸಮಿತಿಗೆ ಇರಲಿದೆ.