ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಶಶಿಧರ್ ಕೃಷ್ಣ
ಇತ್ತೀಚಿನ ಬರಹಗಳು: ಶಶಿಧರ್ ಕೃಷ್ಣ (ಎಲ್ಲವನ್ನು ಓದಿ)

ಅಂತರಾಳದಲಿ ಆಂತರಿಕವಾಗಿ ಇಳಿದೆ
ಇನ್ನು ಆಳಕ್ಕೆ ಅಂದು
ಎದುರಿಗೆ ಕಂಡಿದ್ದ ಬೆಟ್ಟ ಏರಿದೆ ಅಂದು
ಇವನು ಅದನ್ನು ಹುಡುಕಲಿಲ್ಲ
ಅದು ಇವನ ಬಳಿಗೆ ಬಾರದೆ ಇರಲಿಲ್ಲ
ಬಂದಿದ್ದನ್ನು ಇವ ಅಪ್ಪಿದ್ದ…..


ಒಮ್ಮೆ ಒಳಮುಖವಾಗಿ ನೋಡಲು ಶುರುಮಾಡಿದ ನಂತರ ಹೆಚ್ಚು… ಹೆಚ್ಚು… ಅದನ್ನೇ ಮಾಡತೊಡಗಿದೆ. ಹೊರಗೆ ಗಮನಿಸುವುದು ಕಡಿಮೆ ಆಯಿತು. ಬದಲಾಗಿ ಒಳಗೆ ಹೆಚ್ಚಾಯಿತು ಅದು ಕಣ್ಣು ಮುಚ್ಚಿ, ಕಣ್ಣು ಬಿಟ್ಟು ಎರಡೂ ರೀತಿಯಲ್ಲಿ‌.

ಯಾವ ಸಂದರ್ಭದಲ್ಲಿ ಏನಾಗುತ್ತಿದೆ? ಹೇಗೆ ದೇಹ ಮತ್ತು ಮನಸ್ಸು ಅದಕ್ಕೆ ಸ್ಪಂದಿಸುತ್ತಿದೆ. ಎಂಬುದರ ಬಗ್ಗೆ ಏಕಾಗ್ರತೆ ಇತ್ತು. ಈಗಲೂ ಇದೆ, ಅದರ ಮೇಲೆ ಇನ್ನೊಂದೆಡೆ ಒಳಗಿನ ಘರ್ಷಣೆ, ತಿಕ್ಕಾಟ, ಚರ್ಚೆಗಳನ್ನು ಮುಖ್ಯವಾಗಿ ಕೇಳಿಸಿಕೊಳ್ಳುವುದು ನಿಲ್ಲಿಸಿದೆ; ಜನಗಳ ಅಭಿಪ್ರಾಯ ಕೂಡ.

ಯಾವಾಗ ಇದು ಸಾಧ್ಯ ಆಯಿತು ಸಹಜವಾಗಿ ಆಂತರಿಕವಾಗಿ ಕೂಡ ಮೌನಿ ಆದೆ. ಇನ್ನೊಂದೆಡೆ ಮನವು ಹಿಂದೆಂದಿಗಿಂತಲೂ ಹೆಚ್ಚು ಶಾಂತವಾಗತೊಡಗಿತು. ಒಮ್ಮೆ ಇದು ಪ್ರಾರಂಭವಾದ ಮೇಲೆ, ಒಂದು ನಿಮಿಷದಲ್ಲಿ ಉಸಿರಾಟ ೧೧ ಬಾರಿ ಆಗತೊಡಗಿತು.

ದೇಹದಲ್ಲಿ ಆಗಬಹುದಾದ ಸಣ್ಣ ವ್ಯತ್ಯಾಸಗಳು ಸೂಕ್ಷ್ಮವಾಗಿ ದೇಹ ತಿಳಿಸುವುದು ತಿಳಿಯತೊಡಗಿತು.

ಬೆಳಗ್ಗೆ ವೃತ್ತಿ ಇರುವುದರಿಂದ ಶಶಿಯ ಒಳಮುಖನಾಗುವ ಕ್ರಿಯೆ ನಡೆಯುವುದು ಸಂಜೆ ಹಾಗೂ ರಾತ್ರಿ. ಯಾವಾಗ ಮೇಲೆ ಹೇಳಿದಂತೆ ದೇಹ ಸೂಕ್ಷ್ಮ ಆಗತೊಡಗಿತು… ಆಗ ದೇಹದ ಭಾಷೆ ಅರಿವಿಗೆ ಬರತೊಡಗಿತು.

ಇನ್ನೊಂದೆಡೆ ರಾತ್ರಿ ಕಣ್ಣು ಮುಚ್ಚಿಕೊಂಡು ಕುಳಿತಾಗ ಕೊಠಡಿಯ ಬಾಗಿಲು ಗೋಡೆಗಳು ಬಾಹ್ಯ ಕಣ್ಣಿಗೆ ಕಾಣುವಂತೆ ಕಾಣುತಿತ್ತು. ಒಂದು ರಾತ್ರಿ ಇದಕ್ಕಿದ್ದಂತೆ ಕುಳಿತಿದ್ದ ಕೋಣೆ ಮತ್ತು ಇವನು ಒಂದೇ ಆಗಿದ್ದವು. ಇದು ಅಂದುಕೊಂಡೆ ಕೇವಲ ಒಂದು ಕ್ಷಣ ಆಗಿರಬಹುದು ಎಂದು. ಆದರೆ ಧ್ಯಾನ ಮಾಡುತ್ತಿದ್ದ ಮನಸ್ಥಿತಿಗೆ ಬಂದಾಗ ಹತ್ತು ನಿಮಿಷಗಳು ದಾಟಿ ಹೋಗಿತ್ತು ಸಮಯ.

ಹೀಗೆ ಇನ್ನೊಂದು ರಾತ್ರಿ ಕಲ್ಲು ನೀರು ಕರಗುವ ಸಮಯದಲ್ಲಿ (Zero hour) ಮತ್ತೆ ಸದ್ಗುರು ಕಾಣಿಸಿದರು. ಈ ಬಾರಿ ಪೂರ್ಣ ದೇಹ ಇತ್ತು ಹಾಗೆ ಮುಂದಕ್ಕೆ ನಡೆಯತೊಡಗಿದರು. ಎಲ್ಲಿಗೆ ಹೋಗುತ್ತಿದ್ದಾರೆ ಗೊತ್ತಿಲ್ಲ. ಸುಮ್ಮನೆ ಹಿಂಬಾಲಿಸಿ ನಡೆಯುತ್ತಾ ಸಾಗಿದೆ ಅವರನ್ನು.
ಸ್ವಲ್ಪ ದೂರ ಸಾಗಿದ ನಂತರ ಗುರುಗಳು ಅದೃಶ್ಯವಾದರು, ಆ ಸ್ಥಳದಿಂದ ಪ್ರಕರ ಬೆಳಕು ಇವನ ಎದುರಿಗೆ ಮೂಡಿಬಂದು, ಏರುತ್ತಲೇ… ಏರುತ್ತಲೇ… ಇನ್ನು ಎತ್ತರಕ್ಕೆ ಏರುತ್ತಾ ಸಾಗಿತ್ತು.

ಅಂತರಾಳದಲಿ ಆಂತರಿಕವಾಗಿ ಇಳಿದೆ ಇನ್ನು ಆಳಕ್ಕೆ ಅಂದು
ಎದುರಿಗೆ ಕಂಡ ಬೆಟ್ಟ ಏರಿದೆ ಅಂದು,
ಮೂಡಿ ಬಂತು ಬೆಳಕಿನ ಚೇತನವೊಂದು ಎದುರಿಗಿದ್ದ ಪರ್ವತದಿಂದ,
ಇವನು ಅದನ್ನು ಹುಡುಕಲಿಲ್ಲ
ಅದು ಇವನ ಬಳಿಗೆ ಬಾರದೆ ಇರಲಿಲ್ಲ…
ಬಂದಿದ್ದನ್ನು ಇವ ಅಪ್ಪಿದ್ದ…
ಅಪ್ಪಿದ್ದ ಇವನನ್ನು ಅದು ಒಪ್ಪಿತ್ತು.

ಅಂದೆ ಆದೆ ನಿನಗೆ ದಾಸ,

ಬೆಳಕಂದಿತು ಗೌರವ ನೀಡಿದರೆ.. ಮರಳಿ ಗೌರವ ದೊರೆಯುವಂತೆ, ನೀ ಎನಗೆ ದಾಸನಾದರೆ, ಆದೆ ನಾ ಕೂಡ ನಿನಗೆ ಅಧೀನ ಎಂದು.

ಶಶಿಯ ಒಳಗೆ ಸದ್ಗುರು ಮೂಲಕವಾಗಿ ಪ್ರಕಟಗೊಂಡ ಆ ಬೆಳಕು ಕೇವಲ ಬೆಳಕು ಅಲ್ಲ ಬದಲಾಗಿ,
ಗಂಗೆಯನ್ನು ತಲೆ ಮೇಲೆ ಹೊತ್ತು, ವಿಷ ಕುಡಿದು, ಸ್ಮಶಾನದಲ್ಲಿ ವಾಸಿಸುವ, ದೇವರ ದೇವನಾಗಿ ಮಹಾದೇವ ಎನಿಸಿದ, ದ್ವೈತ, ಅದ್ವೈತ, ವಿಶಿಷ್ಟಾದ್ವೈತ ಈ ರೀತಿ ಸಿದ್ಧಾಂತಕ್ಕೆ ಬಂದಾಗ ಹರಿ,ಹರ.. ಬೇರೆ, ಬೇರೆಯಾಗಿ ಆದರೆ ಶೂನ್ಯ ಒಂದೇ ಆಗಿರುವ ದೈವದ ಮೂಲ ಸ್ವರೂಪವಾದ ನಿರಾಕಾರ ರೂಪ ಆಗಿತ್ತು.

(ಮುಂದುವರೆಯುವುದು)