ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಅಂತ:ಸ್ಪಂದನ – ೧೦

ಶಶಿಧರ್ ಕೃಷ್ಣ
ಇತ್ತೀಚಿನ ಬರಹಗಳು: ಶಶಿಧರ್ ಕೃಷ್ಣ (ಎಲ್ಲವನ್ನು ಓದಿ)

ಹಿಂದಿನ ಬರಹದಲ್ಲಿ, ಚಕ್ರದಲ್ಲಿ ಶಕ್ತಿ ಹರಿಯುವ ಬಗ್ಗೆ ನೋಡಿದ್ದೇವೆ, ಅದನ್ನು ಕುಂಡಲಿನಿ ಶಕ್ತಿ , ಕುಂಡಲಿನಿ ಕಾಸ್ಮಿಕ್ ಶಕ್ತಿ ಅಥವಾ ಕುಲಕುಂಡಲನಿ ಎನ್ನುವರು. ಇದೆಲ್ಲದರ ಹೊರತಾಗಿ ಇರುವ ಇನ್ನೊಂದು ಹೆಸರು ‘ಶಿವಚಕ್ರ’ ಎಂಬುದು.

ಯೋಗದಲ್ಲಿ ಐದು ರೀತಿಯಲ್ಲಿ ಶರೀರಗಳು ಇರುತ್ತವೆ ಎಂದು ಹೇಳುತ್ತಾರೆ. ಮೊದಲಿಗೆ ಸ್ಥೂಲ ಶರೀರ/ ಅನ್ನಮಯ ಕೋಶ, ಇದರ ಜೊತೆಗೆ ಇರುವುದು ಮನೋಮಯ ಕೋಶ, ಮೂರನೆಯದ್ದು ಪ್ರಾಣಮಯ ಕೋಶ, ನಾಲ್ಕನೇಯ ದಾಗಿ ವಿಜ್ಞಾನ/ ಜ್ಞಾನ ಮಯ ಕೋಶ, ಐದನೆಯ ದೇಹ ಆನಂದಮಯ ಕೋಶ.

ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಸ್ಥೂಲ ಶರೀರವು ದೈಹಿಕ ಹಾಗೂ ಪ್ರಾಣಮಯ ಎಂಬುದು ಸೂಕ್ಷ್ಮ ಶರೀರ ಆಗಿದ್ದು ಮತ್ತು ಇರುವ ಇನ್ನೊಂದು ಅದು ಕಾರಣಿ ಭೂತ ಶರೀರ.

ಇವೆಲ್ಲವೂ ನಿಮಗೆ ತಿಳಿಯುವುದು ಅಂತಃಪ್ರಜ್ಞೆ ಯಲ್ಲಿ, ಆದರೆ ಇಲ್ಲಿ ಹೇಳ ಹೊರಟಿರುವುದು ಇದನಲ್ಲ, ಬದಲಾಗಿ ಸ್ಥೂಲ ದೇಹದ ಜೊತೆಗೆ ಇರುವ ಇನ್ನು ಏಳು ರೀತಿಯ ದೇಹಗಳ ಬಗ್ಗೆ.

ದೇಹಕ್ಕೆ ಅತಿ ಸಮೀಪವಾಗಿ ಇರುವ ದೇಹ ಕೆಂಪು ಬಣ್ಣದ ದೇಹ, ಹೇಗೆ ಏಳು ಚಕ್ರಗಳು ಇರುತ್ತವೆ ಅದೆ ರೀತಿ, ಅದೇ ಬಣ್ಣದಲ್ಲಿ ಇವು ಇರುತ್ತವೆ (ಚಿತ್ರ ನೋಡಿ). ನಮ್ಮ ದೇಹದಸುತ್ತ ಎರಡು ಅಡಿಗಳಷ್ಟರಲ್ಲಿ ಇವು ಇರುತ್ತವೆ, ಇದನ್ನು ನಮ್ಮ ಪ್ರಭಾವಳಿ ( Aura) ಅಂತಲೂ ಕರೆಯುತ್ತಾರೆ.

ನಿಮ್ಮ ಹಿಂದೆ ಯಾರಾದರೂ ಬಂದು ನಿಂತಾಗ, ನೀವು ಹಿಂತಿರುಗಿ ನೋಡದೆ ಯಾರೋ ಒಬ್ಬರು ಬಂದಿದ್ದಾರೆ, ಎಂಬುದು ನಿಮಗೆ ತಿಳಿಯುತ್ತದೆ, ಅದು ಪ್ರಭಾವಳಿ ಮಾಡುವ ಕೆಲಸ.

ಇವುಗಳಲ್ಲಿ ಒಂದೊಂದು ದೇಹಗಳು ಒಂದೊಂದು ರೀತಿಯ ನೆನಪು ಹೊಂದಿರುತ್ತವೆ, ಆಯಾ ದೇಹಕ್ಕೆ ಕ್ರಮವಾಗಿ (ಜೀವನ, ಸಂಸಾರ, ಅವರ ವೃತ್ತಿ, ಪ್ರವೃತ್ತಿ ಇತ್ಯಾದಿ) ಇವೆಲ್ಲವೂ ಸೂಕ್ಷ್ಮ ದೇಹದೊಟ್ಟಿಗೆ ಸಂಪರ್ಕ ಹೊಂದಿರುತ್ತವೆ, ಮತ್ತು ಅವು ಅದನ್ನು ಸೂಕ್ಷ ದೇಹಕ್ಕೆ ರವಾನಿಸಿ ಅದು ಜ್ಞಾನಮಯ ಕೋಶದಲ್ಲಿ ಸಂಗ್ರಹಗೊಳ್ಳುತ್ತವೆ (ಹಲವು ಜನ್ಮಗಳ ನೆನಪುಗಳ ಸಂಗ್ರಹ ಇಲ್ಲಿ ಇರುತ್ತವೆ).

ನಮ್ಮ ದೇಹದಲ್ಲಿ ಅನುದಿನವೂ ಸಾವಿರಾರು ಕಣಗಳು ಸತ್ತು ಅಷ್ಟೆ ಕಣಗಳು ಹುಟ್ಟುತ್ತಿರುತ್ತವೆ*. ಸ್ನಾನ ಮಾಡುವಾಗ ಕೊಳೆಯ ರೂಪದಲ್ಲಿ ಬರುವವು. ಹೀಗೆ ನಡೆಯುವ ಕಣಗಳ… ಹುಟ್ಟು, ಸಾವಿನ ಕ್ರಿಯೆ ಕಾಲಾನಂತರದಲ್ಲಿ, ಒಮ್ಮೆ ಕಣಗಳು ಹುಟ್ಟುವುದು ನಿಂತು, ಕ್ರಮೇಣವಾಗಿ ಕಣಗಳು ಸಾಯುತ್ತಾ ಸಾಗಿ, ಕೊನೆಗೆ ಒಂದು ಕ್ಷಣದಲ್ಲಿ ಪ್ರಾಣ ಸಂಪೂರ್ಣ ಹೋಗುತ್ತದೆ, ಇಲ್ಲಿ ಪ್ರಾಣ ಎಂದರೆ ಪ್ರಾಣವಾಯು ಮೊದಲು ಹೋಗುವುದು, ನಂತರ ಇನ್ನುಳಿದ ಅಪಾನ,ಉದಾನ,ವ್ಯಾನ,ಸಮಾನ ಇವುಗಳು ಪ್ರಾಣವಾಯುವಿನ ಜೊತೆಗೆ ಹೋದರು, ಇದರ ಕೆಲಸಗಳು ಅರ್ಥಾತ್ ಒಂದು ರೀತಿಯ ಘರ್ಷಣೆ, ನಿಲ್ಲಲು ಕೆಲವು ಘಂಟೆಗಳು, ಕೆಲವೊಮ್ಮೆ ದಿನಗಳು ಹಿಡಿಯಬಹದು, ದೇಹ ಸತ್ತು ಅಂತ್ಯಕ್ರಿಯೆ ಆದಮೇಲೆ ಕೂಡ ಇವು ನಡೆಯುತ್ತವೆ. ಇದು ಸಹಜವಾಗಿ ಆಯಸ್ಸು ಅಂತ್ಯವಾಗಿ ದೇಹ ಸಾಯುವ ವಿಧಾನ.

ಆದರೇ…. ಯಾವುದಾದರು ಒಂದು ಅವಘಡಗಳಿಂದ ಒಬ್ಬರ ದೇಹ ಅಕಾಲದಲ್ಲಿ ಮರಣ ಹೊಂದಿದರೆ, ಇವು ಹಾಗೂ ಸೂಕ್ಷ ಶರೀರ ಅಂತ್ಯ ಆಗುವುದಿಲ್ಲ.( ಎಲ್ಲ ಸಂದರ್ಭಗಳಲ್ಲಿ ಹೀಗೆ ಆಗುತ್ತದೆ ಎಂದುಕೊಳ್ಳಬಾರದು ನೀವು)

ಒಬ್ಬರ ಪ್ರಭಾವಳಿ ಕಾರಣಾಂತರಗಳಿಂದ ಸಮರ್ಥವಾಗಿಲ್ಲ ಎಂದುಕೊಳ್ಳಿ, ಆಗ ಇಂತಹವರು ಅವರ ಯಾವ ಪ್ರಭಾವಲಯದಲ್ಲಿ ಬರುವರು ಅಲ್ಲಿ ತೊಂದರೆ ಆಗಲು ಶುರುವಾಗುತ್ತದೆ. ಅಂತಹವರನ್ನು ನೋಡಿ ಲೋಕಾರುಡಿಯಲ್ಲಿ ಗಾಳಿ ಬಡಿತು, ರಾವು ಹಿಡಿಯಿತು, ದೆವ್ವದ ಕಾಟ, ಪ್ರೇತಭಾದೆ ಎನ್ನುವುದು.

ದಿನವು ನೀವು ನೀರಿನಿಂದ ಸ್ನಾನ ಮಾಡಿದಾಗ ಪ್ರಭಾವಳಿಯಲ್ಲಿ ಇರಬಹುದಾದ ಒಂದಷ್ಟು ಋಣಾತ್ಮಕ ಅಂಶಗಳು ಹೋಗುತ್ತವೆ.

ಕೆಲವೊಮ್ಮೆ ನೀವು ಹೊರಹೋಗಿ ಬಂದಾಗ, ಮನೆಯಲ್ಲಿ ದೃಷ್ಟಿ ತೆಗೆಯುವ ಪದ್ಧತಿ ಇರುತ್ತದೆ, ಯೋಗದಲ್ಲಿ ಇದನ್ನು ‘ಅಗ್ನಿ ಸ್ನಾನ ಎನ್ನುವರು ಇದರಿಂದ ನಮ್ಮ ಪ್ರಭಾವಳಿಯಲ್ಲಿ ಕೂತಿರಬಹುದಾದ ಇನ್ನಷ್ಟು ಋಣಾತ್ಮಕ ಅಂಶಗಳು ಹೋಗುತ್ತವೆ.

ನೀವು ಬೆಟ್ಟಗಳ, ಪರ್ವತಗಳ.. ಮೇಲೆ ಎರಡು ಕೈಗಳನ್ನು ಮೇಲೆತ್ತಿ ಹಿಡಿದಾಗ, ನಿಮ್ಮ ಮೂಲಕ ಸಾಗುವ ತಾಜ ಗಾಳಿಯಿಂದ, ಪ್ರಭಾವಲಯದಲ್ಲಿರುವ ಇನ್ನಷ್ಟು ಋಣಾತ್ಮಕ ಹೋಗುತ್ತವೆ,ಇದನ್ನು ‘ಗಾಳಿಸ್ನಾನ’ ಎನ್ನುವರು. ಹಾಗೆ ಮನುಷ್ಯ ದೇಹದಲ್ಲಿ ಋಣಾತ್ಮಕ ಅಂಶಗಳು ಕೂರುವ ಜಾಗ ಎಂದರೆ ಅದು ಅವರ ಕೂದಲುಗಳು.

ತಾಯಿಯ ಗರ್ಭದಿಂದ ಹೊರಬಂದ ಬಳಿಕ ಮಗು
ವಿಗೆ ಎರಡು ವರುಷಗಳ ಒಳಗೆ ಚೌಲಕರ್ಮ. ಎಂದು ಮಾಡುವುದು ತಾಯಿ ಹೊಟ್ಟೆಯಲ್ಲಿ ಮಗು ಇದ್ದಾಗ, ರಕ್ತದ ಕಣಗಳು ಕೂದಲಲ್ಲಿ ಕುಳಿತು ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ, ಎನ್ನುವ ಕಾರಣ.

ಇನ್ನು ಬಹುತೇಕ ದೇವಾಲಯದಲ್ಲಿ ಇರುವ ಮೂರ್ತಿಗಳಲ್ಲಿ, ಮನುಷ್ಯರ ಈ ಪ್ರಭಾವಳಿ ಹಾಗೂ ಕೆಳಗಿನ ಮೂರು ಚಕ್ರಗಳು ಮತ್ತು ಅನಾಹತ ಚಕ್ರವನ್ನು ಜಾಗರೂಕ ಮಾಡುವಂತೆ, ಅಥವಾ ದೋಷಗಳನ್ನು ನಿವಾರಣೆ ಮಾಡುವಂತೆ ಪ್ರಾಣ ಪ್ರತಿಷ್ಠಾಪನೆ ಮಾಡಿರುತ್ತಾರೆ, ಮತ್ತು ದೇವಾಲಯಗಳಲ್ಲಿ ಸಾಮಾನ್ಯವಾಗಿ ನೀವು ನೋಡಬಹುದಾದ ಒಂದು ಸೇವೆ ಎಂದರೆ ತಲೆಮುಡಿ ತೆಗೆಯುವುದು. (ಕೂದಲಿನ ಕೆಲವು ಭಾಗ ಅಥವಾ ಪೂರ್ಣ ಕೂದಲು ತೆಗೆಯುವುದು) ಇದಕ್ಕೆ ಕಾರಣ ನಮ್ಮಲ್ಲಿನ ಜಲ ಸರಿಯಾಗಿಸಲು ಇದು ಸಹಕಾರಿ ಆಗುತ್ತದೆ. ಮತ್ತು ಮೇಲೆ ಹೇಳಿದಂತೆ ಮೂರ್ತಿಗಳ ಆಲಯದ ಪ್ರಭಾವನ್ನು ಆ ರೀತಿಯಲ್ಲಿ ಶಕ್ತಿ ತುಂಬಿರುತ್ತಾರೆ, ಹಾಗಾಗಿ ದೇವಲಾಯಗಳಲ್ಲಿ ಅದನ್ನು ಕೇಶಮುಂಡನ ಎನ್ನದೆ ಮುಡಿಸೇವೆ, ಅಂದರೆ ದೇವರಿಗೆ ನೀವು ನಿಮ್ಮ ಅಂಹಕಾರವನ್ನು ತೊರೆದು, ಶರಣು ಹೋಗಿ ಈ ಮೂಲಕ ಮಾಡುವ ಒಂದು ಸೇವೆ ಎನ್ನುವರು, ಇದು ಸವಿಕಲ್ಪದ ಒಂದು ಮಾರ್ಗ, ಇದು ಕೂಡ ಸರಿ.

ಇಲ್ಲಿ ನಿಮಗೆ ಒಂದು ಪ್ರಶ್ನೆ ಮೂಡಬಹುದು, ಅದು… ಹಾಗಾದರೆ, ದೇಹದ ಉಳಿದ ಭಾಗದ ಕೂದಲನ್ನು ತೆಗೆಯುವುದಿಲ್ಲ, ಅಲ್ಲಿ ಋಣಾತ್ಮಕ ಅಂಶ ಇರುತ್ತದೆ ಅಲ್ಲವೇ? ಎಂಬುದು. ಇಲ್ಲಿ ಒಂದು ಗಮನಿಸಬೇಕು ನೀವು, ದೇಹದ ಪ್ರತಿ ಭಾಗದ ಕೂದಲು ಎಷ್ಟು ಇರುತ್ತದೆ, ಬಹುತೇಕ ಅದಕ್ಕಿಂತ ಹೆಚ್ಚಿನ ಕೂದಲುಗಳು ತಲೆಯಲ್ಲಿ ಇರುತ್ತವೆ, ನೀವು ಅಷ್ಟನ್ನು ಪೂರ್ತಿ ತೆಗೆದಾಗ, ಸಹಜವಾಗಿ ದೇಹ ಆ ಕಡೆಯಲ್ಲಿ ತನ್ನ ಗಮನ ನೀಡಿ ಅಲ್ಲಿ ಕೆಲಸಮಾಡಲು ಶುರುಮಾಡುತ್ತದೆ, ಸಹಜವಾಗಿ ಆಧ್ಯಾತ್ಮಿಕ ಸಾಧಕರಿಗೆ ಇದರಿಂದ ಸಹಾಯ ಆಗುತ್ತದೆ, ಇದು ದೇಹ ವಿಜ್ಞಾನದ ಹಲವು ತಂತ್ರಜ್ಞಾನಗಳಲ್ಲಿ ಒಂದು, ನೀವು ದೇವಾಲಯಗಳನ್ನು… ಅಲ್ಲಿ ಪುರಾತನವಾಗಿ ನಡೆದು ಬರುತ್ತಿರುವ ಪ್ರತಿ.. ಕ್ರಿಯೆಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಇಂತಹ ಹಲವು ರಹಸ್ಯಗಳು ತಿಳಿಯುತ್ತವೆ.

ಹುಣ್ಣಿಮೆ, ಅಮಾವಾಸ್ಯೆ, ರಾತ್ರಿಗಳಲ್ಲಿ ಸಮುದ್ರದ ಜಲ ಮೇಲಕ್ಕೆ ಏರಿದಂತೆ, ದೇಹದಲ್ಲಿ ಕೂಡ ಆ ದಿನಗಳಲ್ಲಿ ಜಲ ಮೇಲಕ್ಕೆ ಏರುತ್ತದೆ. ಮೇಲೆ ಹೇಳಿದಂತೆ ಶಕ್ತಿಯನ್ನು ಮೇಲ್ಮಟ್ಟದಲ್ಲಿರಸಲು, ಆಧ್ಯಾತ್ಮಿಕ ಸಾಧಕರು/ವಿದ್ಯಾರ್ಥಿಗಳು, ಕೆಲ ಸಾಧುಗಳು, ಸಂನ್ಯಾಸ ದೀಕ್ಷೆ ಪಡೆದವರು ಪ್ರತಿ ಅಮಾವಾಸ್ಯೆಯ ಹಿಂದಿನ ದಿನ (ಮಾಸ ಶಿವರಾತ್ರಿ ಬೆಳಿಗ್ಗೆ) ತಮ್ಮ ತಲೆ ಕೂದಲನ್ನು ಸಂಪೂರ್ಣ ತೆಗೆಯುವರು. ಮತ್ತು ಆ ಮೂಲಕ ದೇಹವೆಂಬ ಯಂತ್ರವನ್ನು ಹಗುರವಾಗಿ ಇರಿಸಲು, ಇದರಿಂದ ಆಗುವ ಅನುಕೂಲ ನೈಸರ್ಗಿಕವಾಗಿ ಶಕ್ತಿ ಮೇಲ್ಮುಖವಾಗಿ ಹರಿಯುತ್ತದೆ.

ಇನ್ನು ಪ್ರಭಾವಳಿ ಶುದ್ಧ ಮಾಡುವ ವಿಧಾನದಲ್ಲಿ ನೀರು , ಅಗ್ನಿ ಮತ್ತು ವಾಯುವಿನಿಂದ ಆಗುವ ಬಗ್ಗೆ ತಿಳಿದುಕೊಂಡೆವು, ಇನ್ನು ನಾಲ್ಕನೆಯ ರೀತಿ ಎಂದರೆ ಅದು ದೀಪಗಳಿಂದ.

ಹೌದು ‘ದೇವಿ’ ಎಂಬ ದೀಪಕ್ಕೆ, ಎಣ್ಣೆ ಎಂಬ ‘ನಾರಾಯಣ’ನನ್ನು ಹಾಕಿ, ಬತ್ತಿ ಎಂಬ ‘ಬ್ರಹ್ಮ’ನನ್ನು ಇರಿಸಿ, ‘ಶಿವ’ ಎಂಬ ಅಗ್ನಿಯನ್ನು ಹೊತ್ತಿಸಲು, ಮೂಡಿಬರುವುದು
‘ದೈವ’ ಎಂಬ ಪರಂಜ್ಯೋತಿ.

ಇಂತಿಪ್ಪ ದೀಪವು, ವಾಸಮಾಡುವ ಮನೆಗಳ ಪ್ರಭಾವಳಿಯ ಮೇಲೆ ತನ್ನ ಪ್ರಭಾವ ಬೀರಬಲ್ಲದು. ಹಾಗೂ ನೀವು ವಾಸಿಸುವ ಕೊಣೆಯಲ್ಲಿ ನಿರ್ಧಿಷ್ಟವಾಗಿ ಕೆಲವು ಮಂಡಲಗಳನ್ನು ರಚಿಸಿ, ಅಲ್ಲಿ ಒಂದು ನಂದಾದೀಪ ಇಡುವುದರಿಂದ ಕೂಡ ಅವು ಬಹಳ ಶಕ್ತಿಯುತ್ತವಾಗಿ ನಮ್ಮ ಪ್ರಭಾವಳಿಯನ್ನು ಶುದ್ಧ ಮಾಡಬಲ್ಲದು.
ಇನ್ನು ಉಳಿದಂತೆ ಎಲ್ಲದಕ್ಕೂ ಸ್ವಯಂ ಚಿಕಿತ್ಸೆ ಎಂಬಂತೆ ಧ್ಯಾನವಂತು ಇದ್ದೇ, ಇದೆ.

ಪ್ರಭಾವಳಿ ಕುರಿತು ಮಾತಾನಾಡುತ್ತಿರುವಾಗ ಸಹಜವಾಗಿ ಪಂಚಭೂತಗಳ ಶುದ್ಧಿ ಬಗ್ಗೆ ಚಿಂತನೆ ಬರಬಹುದು. ಅದು ವೈಯಕ್ತಿಕವಾಗಿ ದೇಹದ ರಸಯಾನಶಾಸ್ತ್ರವನ್ನು ನೋಡಿ, ಒಬ್ಬೊಬ್ಬರಿಗೆ ಒಂದೊಂದು ರೀತಿಯ ಮಾರ್ಗ ತಿಳಿಸುವರು ಯೋಗ ಸಾಧಕರು ತಮ್ಮ ಯೋಗಿಕ್ ಶಕ್ತಿಯಿಂದ.

ನೀವು ನಿಮ್ಮದೇ ಕೊಠಡಿಯಿಂದ ಒಂದಷ್ಟು ತಿಂಗಳು ದೂರವಿದ್ದಿರಿ, ಎಂದು ಕೊಳ್ಳಿ.. ಈಗ ಮತ್ತೆ ನೀವು ಆ ಕೊಠಡಿಗೆ ಮರಳಿ ಬಂದಾಗ, ಅಲ್ಲಿ ಬಹಳಷ್ಟು ಕೊಳಕು ಇರುತ್ತದೆ. ಅದನ್ನು ಸ್ವಚ್ಛ ಮಾಡಲು ತೊಡಗಿದಾಗ, ಈ ಕೆಲಸ ಒಂದಷ್ಟು ಸಮಯ ತೆಗೆದುಕೊಳ್ಳುತ್ತದೆ, ನಂತರ ನೀವು ಅದಕ್ಕೆ ಬಣ್ಣ ಬಳಿದರೆ, ಮೊದಲಿಗಿಂತ ಹೊಸ ರಂಗು ಬಂದು.. ಸಮಯ ಕಳೆದಂತೆ ನಿಮಗೆ ಸ್ವಚ್ಛ ಮಾಡುವಾಗಿನ ಆಯಾಸ ಮರೆತು ಹೋಗುತ್ತದೆ, ಅಲ್ಲವೇ?

ಹಾಗೆಯೇ ಒಮ್ಮೆ ನಿಮ್ಮ ಪ್ರಜ್ಞೆಯಲ್ಲಿ, ಕುಂಡಲಿನಿ ಶಕ್ತಿಯ ಹರಿವಿನ ಅರಿವು ಬಂದಲ್ಲಿ, ಅರಿವಿಲ್ಲದೆ ಮಾಡಿದ ಜನ್ಮ ಜನ್ಮಗಳ ಪಾಪ, ಕೆಟ್ಟ ಕರ್ಮಗಳು (ನಿಮ್ಮ ಸಂಚಿತದಲ್ಲಿ ಶೇಖರಣೆ ಆಗಿರುತ್ತವೆ) ಇವು ಆಗಮಿ ಕರ್ಮದಲ್ಲಿ ಬಂದು ಸ್ವಚ್ಛ ಆಗತೊಡಗುತ್ತವೆ. ಅದನ್ನು ನಿಭಾಯಿಸಲು ನಿಮಗೆ ಅವಶ್ಯಕವಾಗಿ ಗುರುವಿನ ಮಾರ್ಗದರ್ಶನ ಬೇಕಾಗುವುದು. ಇಲ್ಲವಾದಲ್ಲಿ ಅಂತಹ ಸಾಧಕರ ಜೀವನ ದುರಂತವಾಗುವುದು. ಗುರುವಿದ್ದಲ್ಲಿ ನಿಮ್ಮ ಎಲ್ಲಾ ಕೆಟ್ಟ ಕರ್ಮ ಕಳೆದು ಕಾಲಾನಂತರದಲ್ಲಿ, ನೀವು ನಿಮ್ಮೊಳಗೆ ಒಂದು ಹೂವಾಗಿ ಅರಳುವಿರಿ.

ಇಷ್ಟೆಲ್ಲಾ ವಿಷಯಗಳು ಈಶ್ವರನಿಂದ ತಿಳಿದು ಬಂದರು, ಈ ತಿಮ್ಮನಿಗೆ ಇದ್ದ ಒಂದು ನ್ಯೂನ್ಯತೆ ಎಂದರೆ ಕಂಡಿದ್ದೆಲ್ಲವನ್ನು ಶಿವ ಎನ್ನುವುದು, ಅದು ಯಾವ ಮಟ್ಟಕ್ಕೆ ಎಂದರೆ ದೇವಿಯನ್ನು ಕೂಡ ‘ಶಿವ’ ಎಂದಿದ್ದು ಉಂಟು… ಅದನ್ನು ನೀಗಿಸಿ, “ನಿನ್ನ ಸ್ಥೂಲ, ಸೂಕ್ಷ, ಕಾರಣಿ ಭೂತ ಶರೀರವೆ ನಾನು” ಬಾ ಕಂದ, ಎಂದು ಎನ್ನ ಎತ್ತಿಕೊಂಡ ಜಗನ್ಮಾತೆ, ತನ್ನ ಮೂಲ ಸ್ವರೂಪದಲ್ಲಿ, ಈ ತಿಮ್ಮನ ಬಳಿಗೆ ಅವಾಳಾಗಿ ಬಂದಿದ್ದು, ಒಂದು ರೋಚಕ ಅನುಭೂತಿ ಅದು, ನ್ಯೂನತೆಯು… ಶೂನ್ಯತೆಯಾಗಿ ಬದಲಾದ ಮಹತ್ವದ ಕ್ಷಣವದು.

ದೈವ ಕೂದಲು ಮತ್ತು ಉಗುರಿನಿಂದ (ಇವುಗಳ ಮೇಲ್ಬಾಗದಲ್ಲಿ ಜೀವ ಇರುವುದಿಲ್ಲ ಆದರೆ ಅವುಗಳ ಬೇರಿನಲ್ಲಿ ಜೀವ ಇರುತ್ತದೆ) ಕೊಡುವ ಸಂಕೇತ ಆಗಿದೆ, ನಮ್ಮ ದೇಹ ಕೂಡ ಇದೇ ರೀತಿ ಸತ್ತ ಕಣಗಳು ಇರುವ ಪ್ರದೇಶ ಎಂದು… ಹಾಗಾಗಿ ನಮ್ಮ ದೇಹವನ್ನು ನಿತ್ಯ ಸ್ಮಶಾನ, ನಿತ್ಯ ದೇಗುಲ ಎಂದು ಕರೆಯುವುದು‌.

ಮುಂದುವರೆಯುವುದು