- ಗುಂಪಿನಲ್ಲಿ ಗಾಂಪರಾಗುವ ಮನಸ್ಥಿತಿ - ಅಕ್ಟೋಬರ್ 30, 2024
- ಕಾನ್ ಬಾನ್ - ನವೆಂಬರ್ 12, 2020
- ನಾಳೆ ಶನಿವಾರ…! - ಸೆಪ್ಟೆಂಬರ್ 18, 2020
ಯಾವುದೊ ಒಂದು ಕೆಲಸಕ್ಕೆ ತೊಡಗಿದಾಗ ಅಂತರ್ಯದೊಳಿಗಿಂದ ಒಂದು ತರಹದ ಹಿಂಜರಿಕೆ ಶುರುವಾಗಿರುತ್ತೆ. ಕೆಲಸದ ಸಾಧ್ಯತೆಯ ವಿಚಾರ ದೂರಕ್ಕಿರಲಿ ಆದರೆ ಕೆಲಸ ಶುರುವಾಗುತ್ತೊ ಇಲ್ಲವೊ ಅನ್ನುವುದೆ ಅನುಮಾನವಾಗಿ ಕಾಡುತ್ತೆ .ನಮಗಿರುವ ಲಭ್ಯ ಮೂಲಗಳಿಂದ ಮಾಹಿತಿ ಕಲೆಹಾಕಿ ಏನೇನೊ ಲೆಕ್ಕಚಾರ ಹಾಕಿ ಕೆಲಸಕ್ಕೆ ಶುರುವಾದೆವೆಂದು ಕೊಂಡರು ಏನೊ ಒಂದು ಗೊತ್ತಿಲ್ಲದ ಅಲೋಚನೆ ನಮ್ಮನ್ನೆಳೆದು ಹಿಂದಕ್ಕೆ ಹಾಕಿ ಬಿಡುತ್ತದೆ .ಈ ಒಂದು ಪ್ರಕ್ರಿಯೆಯನ್ನೆ ‘ಋಣಾತ್ಮಕ ಅಲೋಚನೆ’ ಎಂದು ಕರೆಯ ಬಹುದು ಋಣಾತ್ಮಕ ಅಲೋಚನೆಯು ದಿನದ ಯಾವ ಘಳಿಗೆಯಲ್ಲಾದರೂ ಯಾವ ಸ್ಥಳದಲ್ಲಿಯಾದಾರೂ ಅವರಿಸ ಬಿಡಬಹುದು ಇದಕ್ಕೆ ಇಂತಹದ್ದೆ ಕಾರಣ ಮತ್ತು ತರ್ಕ ಎನ್ನುವುದಿಲ್ಲ .
ಕೆಲವು ದಿನ ನಿತ್ಯದ ಋಣಾತ್ಮಕ ಅಲೋಚನೆಗಳು ಗಮನಿಸಿ :-
- ಎಷ್ಟೇ ಲೆಕ್ಕಾಚಾರ ಹಾಕಿ ಕೆಲಸಕ್ಕೆ ಕೈ ಹಾಕಿದ್ದರು ಯಾವುದೊ ಒಂದು ಅಗೋಚರವಾದ ಕಾರಣದಿಂದ ಕೆಲಸ ಮುಂದುವರೆಯುವುದಿಲ್ಲ ಎನ್ನುವ ಭಾವನೆ.
- ನಮ್ಮ ನೆಂಟರಿಷ್ಟರೆಲ್ಲರೂ ಒಳ್ಳೆಯವರೆ ಆದರೂ ಕೆಲವರು ನಮ್ಮನ್ನು ಸರಿಯಾಗಿ ಉಪಚರಿಸುತ್ತಿಲ್ಲ(ನಿಜವಾದ ಅರ್ಥದಲ್ಲಿ ಹಾಗೆ ಇರುವುದಿಲ್ಲ)
- ಪರೀಕ್ಷೆಗೆ ಶ್ರದ್ಧೆಯಿಂದ ಸಿದ್ಧತೆ ನಡೆಸಿದ್ದರು ಯಾವುದೊ ಒಂದು ಅನಾಮಿಕ ವಿಷಯದಿಂದ ನರಳುವ ಪರಿಸ್ಥಿತಿ .
- ನೆನಪಿಡಿ ಮೇಲೆ ಉಲ್ಲೇಖಿಸಿರುವವು ಕೇವಲ ಉದಾಹರಣೆಗಳು ಮಾತ್ರ .ಆದರೆ ಮೇಲಿನ ಒಂದೊಂದೊಂದು ಉದಾಹರಣೆಯಿಂದಲೂ ನಮಗೆ ಒಂದೊಂದು ಪಾಠ ಸಿಗುತ್ತದೆ .
೧.ಎಷ್ಟೇ ಲೆಕ್ಕಾಚಾರ ಹಾಕಿ ಕೆಲಸಕ್ಕೆ ಕೈ ಹಾಕಿದ್ದರು ಯಾವುದೊ ಒಂದು ಅಗೋಚರವಾದ ಕಾರಣದಿಂದ ಕೆಲಸ ಮುಂದುವರೆಯುದಿಲ್ಲ ಎನ್ನುವುದು .
ಈ ಒಂದು ಉದಾಹರಣೆಯನ್ನು ಗಮನಿಸಿದಾಗ ಮನುಷ್ಯ ಪ್ರಯತ್ನವನ್ನು ಮಿರಿದ್ದು ಒಂದು ಇದೆ .ಅದು ಯಾರ ಕೈಯಲ್ಲಿಯೂ ಇಲ್ಲ .ಹಾಗಾಗಿ ನಮಗೆ ದೊರೆಯುವ ಮೊದಲ ಪಾಠ – ‘ನಮಗಿರುವ ಮಿತಿ’(Our Limitations) .
೨.ನಮ್ಮ ನೆಂಟರಿಷ್ಟರೆಲ್ಲರೂ ಒಳ್ಳೆಯವರೇ ಆದರೂ ಕೆಲವರು ನಮ್ಮನ್ನು ಸರಿಯಾಗಿ ಉಪಚರಿಸುತ್ತಿಲ್ಲ( ನಿಜವಾದ ಅರ್ಥದಲ್ಲಿ ಹಾಗೆ ಇರುವುದಿಲ್ಲ)
ಈ ಒಂದು ಉದಾಹರಣೆಯನ್ನು ಗಮನಿಸಿದಾಗ ಮನುಷ್ಯ ಮನುಷ್ಯರ ಸಂಬಂಧವನ್ನು ಎತ್ತಿ ತೋರಿಸುತ್ತದೆ .ನಾವು ಎಷ್ಟೇ ಲೆಕ್ಕಾಚಾರ ಹಾಕಿ ಮನುಷ್ಯರನ್ನು ಅಳೆದಿದ್ದರು ಕೆಲವ್ರು ನಮ್ಮ ಲೆಕ್ಕಾಚಾರಕ್ಕೆ ಸಿಗದಂತೆ ಇರಬಹುದು .ಹಾಗಾಗಿ ನಮಗೆ ಸಿಗುವ ಎರಡೆನೆಯ ಪಾಠ ‘ನಮ್ಮ ನಿರೀಕ್ಷೆಗಳ ಮಿತಿ’ (Lowering our Expectations)
೩. ಪರೀಕ್ಷೆಗೆ ಶ್ರದ್ಧೆಯಿಂದ ಸಿದ್ಧತೆ ನಡೆಸಿದ್ದರು ಯಾವುದೊ ಒಂದು ಅನಾಮಿಕ ವಿಷಯದಿಂದ ನರಳುವ ಪರಿಸ್ಥಿತಿ .
ನಾವು ಶ್ರದ್ಧೆಯಿಂದ ಪರೀಕ್ಷೆಗೆ ಸಿದ್ಧತೆ ನಡೆಸಿರುತ್ತೇವೆ . ಕೂಲಂಕುಷವಾಗಿ ಎಲ್ಲವನ್ನು ಅಳೆದು ತೂಗಿ ಓದಿಕೊಂಡಿರುತ್ತೇವೆ ಆದರೂ ಎಲ್ಲೊ ಒಂದು ಕಡೆ ಬಂದೊದಗ ಬಹುದಾದ ಅಪಾಯವನ್ನು ಲೆಕ್ಕಾಚಾರ ಹಾಕುತ್ತಿದ್ದೇವೆ .ಇದರಿನಿಂದ ನಮಗೆ ‘ಅಪಾಯದ ಸರಿಯಾದ ಅಧ್ಯಯನ’ (Accurate Risk assesment)
ಅಂದರೆ ಋಣಾತ್ಮಾಕ ಅಲೋಚನೆಗಳನ್ನು ಸರಿಯಾಗಿ ಬಳಸಿಕೊಂಡದ್ದೆ ಆದರೆ ನಮಗೆ ಈ ಕೆಳಗಿನ ಕೆಲವು ಪಾಠಗಳು ದೊರಯುತ್ತವೆ.
(೧) ನಮಗಿರುವ ಮಿತಿ(Our Limitations)
(೨) ‘ನಮ್ಮ ನಿರೀಕ್ಷೆಗಳ ಮಿತಿ’ (Lowering our Expectations)
(೩) ʼಅಪಾಯದ ಸರಿಯಾದ ಅಧ್ಯಯನ’ (Accurate Risk assessment)
ಮೇಲಿನ ಒಂದೊಂದು ಅಂಶಗಳನ್ನು ವಿವರವಾಗಿ ಅರ್ಥ ಮಾಡಿಕೊಳ್ಳಲು ಪ್ರಯತ್ಸಿಯೋಣ
ನಮಗಿರುವ ಮಿತಿ:- ( Our Limitations)ನಾವು ಮನುಷ್ಯ ಮಾತ್ರದವರು ಮತ್ತು ನಾವು ಏನೆ ಮಾಡಿದರೂ ನಮಗೆ ಮಿಗಿಲಾಗಿ ಇನ್ನೊಂದು ಅಗೋಚರ ಶಕ್ತಿ ನಮ್ಮನ್ನು ನಿಯಂತ್ರಿಸುತ್ತಿದೆ.ಆದರೆ ನೆನಪಿಡಿ ನಮಗಿರುವ ಮಿತಿ ನಾವು ಪ್ರಯತ್ನವನ್ನು ಯಾವುದೆ ಎರಡನೆ ಮಾತಿರದೆ ಮಾಡ ಬೇಕು ಅದರೆ ನಮಗೆ ಮೀರಿದ್ದು ಅದು ನಮ್ಮ ಕೈಯಲ್ಲಿ ಇಲ್ಲ ಎನ್ನುವುದುನ್ನು ತಿಳಿಸುತ್ತದೆ.
‘ನಮ್ಮ ನಿರೀಕ್ಷೆಗಳ ಮಿತಿ’ (Lowering our Expectations): ಇಲ್ಲಿ ಮೇಲಿನ ಉದಾಹರಣೆಯಿಂದಲೆ ಸ್ಪಷ್ಟವಾದಂತಯೆ ಯಾರು ಎಷ್ಟೇ ಒಳ್ಳೆಯವರಿದ್ದರೂ ಬೇರೆಯವರಿಂದ ನಾವು ಹೆಚ್ಚಿನ ನಿರೀಕ್ಷೆಗಳನ್ನು ಮಾಡುವಂತಿಲ್ಲ.
ʼಅಪಾಯದ ಸರಿಯಾದ ಅಧ್ಯಯನ’ (Accurate Risk assessment):ಕೆಲವೊಮ್ಮೆ ಕೆಲಸಕ್ಕೆ ತೊಡಗುವ ಮೊದಲು ನಮಗೆ ಗೊತ್ತಾಗಿ ಹೋಗಿರುತ್ತದೆ ಯಾವುದೊ ಒಂದು ಕಡೆ ನಮಗೆ ಸರಿಯಾಗಿ ತೊಂದರೆ ಬಂದರೆಗುವ ಮುನ್ಷೊಚನೆ ದೊರಕಿಯಾಗಿರುತ್ತದೆ.ಇದನ್ನೆ ನಾವು ಇನ್ನೊಂದು ಅರ್ಥದಲ್ಲಿ ಅಲೆಕ್ಕಿತ ಅಪಾಯಗಳು ಎಂದು ಹೇಳ ಬಹುದು. ಮತ್ತು ಅಲೆಕ್ಕಿತ ಅಪಾಯಗಳ ಬಗ್ಗೆ ಮುಂದಿನ ಅಧ್ಯಾಯಗಳಲ್ಲಿ ಸುದೀರ್ಘವಾಗಿ ಬರೆಯಲಾಗಿದೆ.
ನಮ್ಮಲ್ಲಿ ಒಂದು ಗಾದೆ ಇದೆ ‘ಅತಿಯಾದರೆ ಅಮೃತವು ವಿಷವಾಗುವುದು’ ಹಾಗೆಯೇ ಈ ಋಣಾತ್ಮಕ ಆಲೋಚನೆಗಳು ಸಹ ಒಂದು ಮಿತಿಲ್ಲಿದ್ದರೆ ನಮಗೆ ಈ ಋಣಾತ್ಮಕ ಆಲೋಚನೆಗಳಿಂದ ಕೆಲವು ರಚನಾತ್ಮಕ ಪಾಠಗಳು ದೊರೆಯುತ್ತವೆ ಇಲ್ಲದೆ ಹೋದರೆ ಈ ಋಣಾತ್ನಕ ಆಲೋಚನೆಗೆಳು ನಮ್ಮನ್ನು ಹೊಸಕಿ ಹಾಕಿ ಬಿಡುವ ಸಾಧ್ಯತೆಗಳಿರುತ್ತವೆ.
ಹೆಚ್ಚಿನ ಬರಹಗಳಿಗಾಗಿ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ
ಬೇಲಿಯೇ ಎದ್ದು…..