ಇತ್ತೀಚಿನ ಬರಹಗಳು: ಡಾ. ಗೋವಿಂದ್ ಹೆಗಡೆ (ಎಲ್ಲವನ್ನು ಓದಿ)
- ಗಜಲ್ - ಫೆಬ್ರುವರಿ 27, 2024
- ಗಜಲ್ - ಜನವರಿ 19, 2023
- ಬನ್ನಿ,ಮತ್ತೆ ಬನ್ನಿ-ರೂಮಿ ಕವಿತೆಗಳು - ಸೆಪ್ಟೆಂಬರ್ 17, 2022
‘ಬರೀ ಬೇರು ಸಾಲದೆಂದೇ ಜಂಗಮನಾದೆ’ ಎಂದು ಬರೆಯುವ ಡಾ.ಗೋವಿಂದ್ ಹೆಗಡೆಯವರು ಈ ಗಜ಼ಲ್ ನಲ್ಲಿ ಜಂಗಮನಾಗುವ ಹಲವು ವಿಧ್ಯಮಾನಗಳನ್ನು ಸುಂದರವಾಗಿ ಚಿತ್ರಿಸಿದ್ದಾರೆ.
ಸಂಪಾದಕ
ಬರೀ ಬೇರು ಸಾಲದೆಂದೇ ಜಂಗಮನಾದೆ..
ರೆಕ್ಕೆ ತೊಟ್ಟು ಹಾರಲೆಂದೇ ಜಂಗಮನಾದೆ..
ಮಧುಶಾಲೆ ಕೈಬೀಸಿ ಕರೆದಿದೆ ನೋಡಲ್ಲಿ..
ಮನದಣಿಯೆ ಹೀರಲೆಂದೇ ಜಂಗಮನಾದೆ..
ನಡೆದಷ್ಟು ದಾರಿ ಬಿಚ್ಚಿಕೊಳ್ಳುತ್ತದೆ ಸಖ..
ನಡಿಗೆಯ ಖುಷಿಗೆಂದೇ ಜಂಗಮನಾದೆ..
ಹಲವು ತೋಟಗಳಲ್ಲಿ ಹೂವು ಅರಳಿವೆ…
ನನಗೆ ಮೂಗಿದೆಯೆಂದೇ ಜಂಗಮನಾದೆ..
ಹಲವು ಹೂಗಳಿಂದ ಶೇಖರಿಸುತ್ತದೆ ಜೇನು…
ಮಧುಕರ ವೃತ್ತಿಗೆಂದೇ ಜಂಗಮನಾದೆ…
‘ಜಂಗಮ’ನ ಸುಖ-ದುಃಖ ಯಾರು ಬಲ್ಲರು..
ಎಲ್ಲ ಮೀರಿ ಸಾಗಲೆಂದೇ ಜಂಗಮನಾದೆ..
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ