ಡಾ. ಗೋವಿಂದ್ ಹೆಗಡೆ
ವೃತ್ತಿಯಲ್ಲಿ ವೈದ್ಯರಾಗಿ, ಕಾವ್ಯ,ಸಾಹಿತ್ಯಗಳಲ್ಲಿ ಅಪಾರ ಆಸಕ್ತಿ ಹೊಂದಿರುವ ಗೋವಿಂದ ಹೆಗಡೆ, ಕಥೆ, ಕವಿತೆ, ಅಂಕಣ ಬರಹ, ಲೇಖನ, ಅನುವಾದ ಇತ್ಯಾದಿ ಪ್ರಕಾರಗಳಲ್ಲಿ ವ್ಯವಸಾಯ ಮಾಡಿದ್ದಾರೆ. ಮೈಸೂರು ದಸರಾ ಕವಿಗೋಷ್ಠಿ, ಧಾರವಾಡ ಸಾಹಿತ್ಯ ಉತ್ಸವಗಳಲ್ಲಿ ತಮ್ಮ ಕವಿತೆಗಳನ್ನು ಪ್ರಸ್ತುತಪಡಿಸಿದ್ದಾರೆ. ಪ್ರಾಚಾರ್ಯ ಎಚ್ಚೆಸ್ಕೆ ಜನ್ಮಶತಮಾನೋತ್ಸವ *'ಎಚ್ಚೆಸ್ಕೆ ಬೆಳಕು'* ಕಾರ್ಯಕ್ರಮದಲ್ಲಿ *ಕವಿಗೋಷ್ಠಿಯ ಅಧ್ಯಕ್ಷತೆ* ವಹಿಸಿದ ಗೌರವ ಇವರದು. ಕನ್ನಡ ಪುಸ್ತಕ ಪ್ರಾಧಿಕಾರದ ಯುವ ಬರಹಗಾರ ಪ್ರಶಸ್ತಿ ಪುರಸ್ಕೃತರು. 'ಕನಸು ಕೋಳಿಯ ಕತ್ತು' ಮತ್ತು 'ಪೇಟೆ ಬೀದಿಯ ತೇರು' ಎಂಬ ಎರಡು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಇವರ ಬರಹಗಳು ಅನೇಕ ಪತ್ರಿಕೆಗಳಲ್ಲಿ ಹಾಗೂ ಆಕಾಶವಾಣಿ ಕೇಂದ್ರಗಳಿಂದ ಪ್ರಕಟ ಹಾಗೂ ಪ್ರಸಾರವಾಗಿವೆ.