- ಮುಗಿಲ ಮಳೆ …. - ಏಪ್ರಿಲ್ 18, 2021
- ಡಾರ್ಕ್ ಮೋಡ್ - ಏಪ್ರಿಲ್ 4, 2021
- ಸಾಗರದೊಳಗಿನ ಮೌನ - ಅಕ್ಟೋಬರ್ 24, 2020
ಮಧ್ಯಾಹ್ನ ಊಟ ಮುಗಿಸಿ ಇನ್ನೇನು ಮಗನನ್ನು ಮಲಗಿಸುವ ಸಮಯ, ಓಣಿಯಲ್ಲಿ ರಾಗವಾಗಿ ಜಾನಪದ ಹಾಡು ಕೇಳಿತು.ಏನೆಂದು ಬಂದು ನೋಡಲು ಅಲ್ಲಿ ಬಾಯಲ್ಲಿ ಬೆಣ್ಣೆ ಇಟ್ಟುಕೊಂಡ ಜೋಕುಮಾರ ,(ಜೋಕಪ್ಪ )ನ ಆಗಮನವಾಗಿತ್ತು …!
ಗಣೇಶ ಹಬ್ಬ ಮುಗಿದು ಮೂರುದಿನಗಳ ನಂತರ ನಾಲ್ಕನೆಯ ದಿನಕ್ಕೆ ಕಿಳ್ಳೇಕ್ಯಾತ ಹುಟ್ಟಿ ಒಂದು ದಿನ ತರುವಾಯ ಈ ಜೋಕುಮಾರ ಜನನವಾಗುತ್ತಾನೆ .
ಅಂದಿನಿಂದ ಏಳುದಿನಗಳ ಕಾಲ ಇತನ ಮೆರವಣಿಗೆ.
ಬುಟ್ಟಿಯಲ್ಲಿ ಜೋಕುಮಾರನ ಹೊತ್ತು ನಾಲ್ಕು ಮಹಿಳೆಯರು ಮನೆಮನೆಗಳಿಗೆ ತರಳಿ ಹಾಡು ಹೇಳುತ್ತಾ ಜನರಿಂದ ದವಸ ಧಾನ್ಯಗಳನ್ನು ಪಡೆದು ಪೂಜೆ ಮಾಡಿ ಬೇವಿನ ಸೆರಗನ್ನು ನೀಡುತ್ತಾರೆ. ಇದನ್ನು ಅನ್ನದಲ್ಲಿ ಬೆರಸಿ ಹೊಲಗಳಿಗೆ ಹಾಕುತ್ತಾರೆ ರೈತರು .
ಬಾರಿಕ ಸಮುದಾಯದ ಮನೆಯಲ್ಲಿ ಇತನ ಜನನ.ಅನಂತ ಹುಣ್ಣಿಮೆಯ ದಿನ
ಸಜ್ಜೆ ಮಿದಿಕಿ ,ಬೆಲ್ಲದ ಹಾಲು ಮಾಡಿ ಎಲ್ಲರೂ ಪೂಜೆ ಮಾಡಿ ಸಂಭ್ರಮದಿಂದ ಇತನನ್ನು ಕಳುಹಿಸುತ್ತಾರೆ.
ಈತ ಬಂದರೆ ಭೂಮಿಗೆ ವರುಣನ ಆಗಮನ ಅಗುತ್ತದೆ ಎಂಬ ನಂಬಿಕೆ ಗ್ರಾಮೀಣ ರೈತಾಪಿ ಜನರದು ಮತ್ತು ಎಲ್ಲರಲ್ಲೂ ಇದೆ.
ಶಿವನಿಗೆ ಜನರ ಕಷ್ಟ ಕೋಟಲೆಗಳನ್ನು ತಿಳಿಸಿ ಲೋಕಕ್ಕೆ
ಒಳಿತನ್ನು ಮಾಡುತ್ತಾನೆ ಎಂಬ ಮಾತು ಇದೆ.
ಇಂದಿನ ವಿಕಾಸದ ಹಾದಿ ತಾನು ನಡೆದು ಬಂದ ಸಾಂಸ್ಕೃತಿಕ ಸೊಗಡನ್ನು ನೆನಪಿಸಿಕೊಳ್ಳುವದೇ ಅಳಿದು ಹೋಗಿರುವ ಇಂತಹ ಅದಷ್ಟೋ ಜಾನಪದ ,ರೈತಾಪಿ , ಆಚರಣೆಗಳು. ಒಂದು ರೀತಿಯ ಬರಗಾಲವನ್ನೆ ಕಾಲ ಕಳೆದಂತೆ ನಿರ್ಮಾಣ ಮಾಡುತ್ತವೆ ಏನೊ ಎಂಬ ಅವ್ಯಕ್ತ ಭಾವವು ಇದೆ.ಈ ಕಲೆ ಆಚರಣೆ ಪುಸ್ತಕದಲ್ಲಿ ಅಚ್ಚದಾರೆ ಬೆಚ್ಚಗೆ ಉಳಿಯುತ್ತವೆ.
ಆದರೆ ನೋಡುವ ಆಸ್ವಾದಿಸುವ ಕಲೆಯನ್ನು ಪೀಳಿಗೆ ಯಿಂದ ಪೀಳಿಗೆ ಕಾಪಿಡುವದು ಅನಿವಾರ್ಯ ಹಾಗೂ ಅಗತ್ಯವಿದೆ .
ಮಾನವನ ಭಾವ, ಬದುಕು,ನಿಸರ್ಗದ ಜೊತೆಗೆ ಹೆಜ್ಜೆ ಹಾಕುತ್ತ ವಿವಿಧ ಹಾಡು, ಹಸೆ ,ಕಲೆಗಳನ್ನು ತನ್ನಲ್ಲಿ ಅಭಿವ್ಯಕ್ತಿಗೊಳಿಸಿಕೊಂಡು ಆಚರಿಸುತ್ತ ಜೀವನದ ಭಾಗವೇ ಆಗಿದ್ದ ಹಲವು ಆಚರಣೆಯಲ್ಲಿ ಜೋಕಪ್ಪನು
ಒಬ್ಬ ಎಂದರೆ ತಪ್ಪಾಗಲಾರದು.
ಈಗಲೂ ಕೆಲ ಗ್ರಾಮ,ಜಿಲ್ಲೆಗಳಲ್ಲಿ ಜಾನಪದ ಸಂಸ್ಕೃತಿ ಕುರುಹು ಉಳಿದಿದೆ …. ಕಾಲನ ಹಕಡೆತಕ್ಕು ಜಗ್ಗದೆ. ಇದು ಮತ್ತಷ್ಟು ಹೆಚ್ಚಾಗಬೇಕು ತೆರೆ ಸರಿದ ನಶಿಸಿದ ಗ್ರಾಮೀಣ ಕೃಷಿ ಕಲೆಗಳು ಮತ್ತೆ ಮುನ್ನಲೆಗೆ ಬರಬೇಕಿದೆ
ಬಹುಶಃ ನಮ್ಮ ಮುಂದಿನ ತಲೆಮಾರು ಈ ಕಲೆ ಸಂಸ್ಕೃತಿ ಯನ್ನು ಕಾಣುವದೇ ? ಈ ಆಧುನಿಕ ಯುಗದಲ್ಲಿ ಈ ಜೋಕುಮಾರನ ನೆನಪು ಅವನ ಜಾನಪದ ಹಾಡು ಉಳಯುತ್ತವೇ ? ಎಂಬ ಕಳವಳವನ್ನು ದೊಡ್ಡ ಕಣ್ಣುಗಳ,ವಿಶಾಲ ಮುಖದ, ಬೆಣ್ಣೆ ತುಂಬಿದ ಬಾಯಿಯ ಜೋಕುಮಾರ ಮೌನವಾಗಿ ಹೇಳಿದಂತೆ ಭಾಸವಾಯಿತು …!
ನನ್ನ ಮೂರು ವರ್ಷದ ಮಗ ಬೆರಗು ಗಣ್ಣಿಂದ ಜೋಕುಮಾರನನ್ನು ತದೇಕ ಚಿತ್ತದಿಂದ ನೋಡುತ್ತ ನಿಂತ…….
ಹೆಚ್ಚಿನ ಬರಹಗಳಿಗಾಗಿ
ಹಿಂದಿ ಹೇರಿಕೆ ಸರಿಯೇ?
ಸ್ವೀಡನ್ ಚುನಾವಣಾ ಸಮರ ೨೦೨೨
ಸ್ವಾತಂತ್ರ್ಯದ ಅಮೃತೋತ್ಸವ – ೭೫ ರ ಭಾರತ