- ನನ್ನ ಈ…ಮನೆ - ಜುಲೈ 25, 2022
- ಬದುಕ ಮಧ್ಯ - ಆಗಸ್ಟ್ 22, 2021
- ಒಂದು ಸ್ವಗತ - ಜೂನ್ 30, 2021
ಕರುಣಾಮಯಿ ಯಜಮಾನ,
ನನಗಾಗಿ, ನನ್ನಳತೆಗೆ ಸರಿಯಾಗಿ,
ವಿಶೇಷ ಮುತುವರ್ಜಿವಹಿಸಿ,
ಅಚ್ಚುಕಟ್ಟಾಗಿ ನಿರ್ಮಿಸಿದ
ಸುಂದರ ಮನೆ, ಈ…ನನ್ನರಮನೆ.
ನನ್ನ ಹುಟ್ಟಿನೊಂದಿಗೆ ನನ್ನ ತಾಜಾ-
ಕನಸು, ಮನಸುಗಳೊಟ್ಟಿಗೆ ನಾ..ಇದರಲ್ಲಿ.
ನಾ…ಬೆಳೆದಂತೆ ಅದೂ ಬೆಳೆದು
ದೊಡ್ಡದಾಗುತ್ತಾ ನನಗೆ ತಕ್ಕಂತೆ,
ನನ್ನೆಲ್ಲ ಅಸಲಿಯತ್ತಿಗೆ ತಕ್ಕಂತೆ,
ಸ್ವಚ್ಛ, ನಿಷ್ಕಲ್ಮಷ, ಮುಗ್ಧ, ಮುಂಜಾವು-
ಮಧ್ಯಾಹ್ನಗಳಲ್ಲಿ ನನ್ನೊಡನಾಡಿ,
ಚೈತನ್ಯದ ಸೆಲೆ, ಬದುಕಿಗೊಂದು ನೆಲೆ.
ಈಗೀಗ ದಿನ ಕಳೆದಂತೆ ಸಂಜೆ ಅಸ್ತವ್ಯಸ್ತ.
ಒಳಗೆಲ್ಲಾ ಕಸ, ಕಡ್ಡಿ, ಧೂಳು, ಗಲೀಜು,
ಹಾವು, ಚೇಳು, ಜಿರಳೆಗಳೊಟ್ಟಿಗೆ ಕತ್ತಲಲ್ಲಿ,
ಬೆಳಕೊಂದ ಹಚ್ಚಲು ಕಂಜೂಸು ಆಲಸ್ಯದೊಟ್ಟಿಗೆ
ಮನೆಯ ಬೈಟಕ್ಕು ‘ಹಾಲು’, ಅಡಿಗೆಮನೆ,
ಊಟದ ಹಾಲು, ಮಲಗುವ ಮನೆ,
ಬಚ್ಚಲು, ಶೌಚಾಲಯ, ಅದರೊಟ್ಟಿಗೆ
ದೇವರ ಮನೆ, ಎಲ್ಲೆಲ್ಲೂ “ಗೌವ್”ಎನ್ನುವ ಕತ್ತಲು.
ದೇವರು ಕೂಡ ಕತ್ತಲಲ್ಲಿ ಕುಳಿತಿರುವ
ಮುಗುಳ್ನಗುತ್ತಿರುವ ನನ್ನ ಬೆತ್ತಲ ನೋಡುತ್ತಾ.
ಈ.. ವ್ಯಸ್ತ ನಾನು, ಮತ್ತು ನನ್ನ ಮನಸ್ಥಿತಿ ನೋಡಿ
ಏನಂದುಕೊಳ್ಳುವನೋ ನನ್ನ ಯಜಮಾನ?
ಹರಾಜಿಗಿಟ್ಟಂತಿದೆ ನನ್ನೆಲ್ಲಾ ಮಾನ, ಪ್ರಾಣ,
ಒಳಗೊಳಗೇ ಕಾಡುವ ಆತಂಕ,ತಲ್ಲಣ.
ಕಾರಣವಿಷ್ಟೆ, ಅಸಲಿಗೆ ಈ.. ಮನೆ ಬಾಡಿಗೆಯದ್ದಲ್ಲ.
ಯಜಮಾನನ ಪ್ರೀತಿಯ ‘ಭಕ್ಷೀಸು’ ನನಗೆ.
ಕೋಪಗೊಂಡು ಕಿತ್ತುಕೊಂಡರೆ ಆತ,
ನಾ… .ಅನಾಥ, ನನ್ನ ಬದುಕೇ ಅರ್ಧಾಯು ಗೋತಾ.
ನೋಡ, ನೋಡುತ್ತಿದ್ದಂತೆ ನೆಲೆಯಿಲ್ಲದ
ಪರದೇಶಿ, ಅಂತರ್ಪಿಶಾಚಿ… ಅವಸ್ಥೆ ನನಗೆ.
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ