ಇತ್ತೀಚಿನ ಬರಹಗಳು: ನಾಗರತ್ನ ಎಂ ಜಿ. (ಎಲ್ಲವನ್ನು ಓದಿ)
- ಅಯ್ಯೋ ರಾಮ..!! - ಮಾರ್ಚ್ 31, 2023
- ನೀನೇ ಅಪ್ಪ.. - ಜೂನ್ 19, 2022
- ಶಿಕ್ಷೆ - ನವೆಂಬರ್ 21, 2021
ಕಣ್ಣ್ಬಿಟ್ಟ ಕೂಡಲೇ
ಕಂಡವಳು ಅಮ್ಮ
ಕಣ್ಣ್ಬಿಡಲು ಕಾರಣ
ನೀನೇ ಅಪ್ಪ
ಭುವಿಗೆ ತರಲು
ನೋವು ತಿಂದವಳು ಅಮ್ಮ
ನೋವ ಹಂಚಿಕೊಳ್ಳಲಾಗದೇ
ನೊಂದವನು ನೀನೇ ಅಪ್ಪ
ಎದೆ ಹಾಲು
ಕೊಟ್ಟವಳು ಅಮ್ಮ
ಜೇನಾಗಿ ಬೆರೆತವನು
ನೀನೇ ಅಪ್ಪ
ನೆತ್ತರನ್ನು ತುತ್ತಾಗಿಸಿದಳು
ಅಮ್ಮ
ತುತ್ತಿನ ಚೀಲ
ತುಂಬಿಸುವನು
ನೀನೇ ಅಪ್ಪ
ಅಡಿಗೆ ಮನೆಯಲ್ಲಿ
ಬೇಯುವಳು ಅಮ್ಮ
ಬಿಸಿಲ ಬೇಗೆಯಲ್ಲಿ ಬೆಂದು
ನೆರಳಾದವನು
ನೀನೇ ಅಪ್ಪ
ಎಡವಿದಾಗ
ಕೈ ಹಿಡಿವಳು ಅಮ್ಮ
ಎಡವದಂತೆ ನಡೆಸುವೆ
ನೀನು ಅಪ್ಪ
ಮೃದು ಮಾತಿನ
ಸಿಂಚನದಲಿ ತೋಯಿಸುವಳು
ಅಮ್ಮ
ಗಡುಸಾದರೂ ಜೀವನ
ಪಾಠ ಕಲಿಸಿದವನು
ನೀನೇ ಅಪ್ಪ
ಹೆರುವಳು ಅಮ್ಮ
ಪೊರೆವುದು ನೀನಲ್ಲವೇ
ಅಪ್ಪ…?
ಜಗವ ಕಾಯುವ
ಜನನಿ ಅಮ್ಮ
ಜನನಿಯ ಕಾಯುವ
ರಕ್ಷಕ ನೀನೇ ಅಪ್ಪ
![Security - Safe in Our Father's Hands - Never Lost - Maryann Ward](https://i0.wp.com/maward.ca/wp-content/uploads/2019/06/people-3120717_1280.jpg?resize=475%2C317&ssl=1)
![Security - Safe in Our Father's Hands - Never Lost - Maryann Ward](https://i0.wp.com/maward.ca/wp-content/uploads/2019/06/people-3120717_1280.jpg?resize=475%2C317&ssl=1)
ಹೆಚ್ಚಿನ ಬರಹಗಳಿಗಾಗಿ
ಸಂಕ್ರಾಂತಿ
ಹುಣ್ಣಿಮೆ ರಾತ್ರಿ ದೇವರಾಡುವನು
ಮಹಾಸಾಗರವಾದಳು