ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಬದುಕು

ಪ್ರಜ್ಞಾ ಹೆಗಡೆ
ಇತ್ತೀಚಿನ ಬರಹಗಳು: ಪ್ರಜ್ಞಾ ಹೆಗಡೆ (ಎಲ್ಲವನ್ನು ಓದಿ)

ಬದುಕೆನ್ನುವ ಪುಸ್ತಕದ
ಮೊದಲ ಪುಟವ ತೆರೆದ ಅರಿವಿಲ್ಲ,
ಅರಿವು ಬಂದಾಗಿನ ನೆನಪು ಪೂರ್ತಿ ಇಲ್ಲ
ಬಾಲ್ಯದ ದಿನಗಳ ನೆನೆದು
ಮತ್ತೆ ಬಾಲ್ಯಕ್ಕೆ ಮರಳುವ ಹಂಬಲ
ಮರಳಿ ಬರದು ಕಳೆದ ಕಾಲ
ಎನ್ನುವ ಮಾತು ಸುಳ್ಳಲ್ಲ
ಜೀವನದಲ್ಲಿ ಮುಂದೇನು ಎನ್ನುವ ಯೋಚನೆ
ಆದರೆ…..
ಆ ಪುಟಗಳನ್ನು ಇನ್ನೂ ತೆಗೆದಿಲ್ಲ
ಎನ್ನುವ ಸಮಾಧಾನ

ಬದುಕೆನ್ನುವ ಪುಸ್ತಕ ಅರ್ಧದಷ್ಟು ಮುಗಿದಿಲ್ಲ
ಆ ಪಯಣದಲ್ಲಿ ಸಾಗುತ್ತಿರುವ ನನಗೆ
ಹಿಂದೇನಾಗಿದೆ ಎಂಬುದರ ಪ್ರಶ್ನೆ ಇಲ್ಲ
ಈಗೇನು ಎನ್ನುವ ಅರಿವಿಲ್ಲ
ಮುಂದೇನು ಎಂದು ತಿಳಿದಿಲ್ಲ
ತೆರೆಯದ ಖಾಲಿ ಇರುವ ಪುಟಗಳೇ
ನನ್ನ ಮುಂದಿನ ಜೀವನ
ಆ ಪುಟಗಳ ತಿಳಿಯುವ ಕುತೂಹಲ

ಜೀವನವೆಂಬ ಹಾದಿಯು ಸರಾಗವಿಲ್ಲ
ಎಲ್ಲವೂ ನಾವು ನೆನೆದಂತಿಲ್ಲಾ
ಸಿಹಿ ಕಹಿಗಳ ಮಿಶ್ರಣವಿದು
ಕಪ್ಪು ಬಿಳುಪಿನ ಸಂಗಮವಿದು
ಕಲಿಯುವುದಿನ್ನು ಸಾಕಷ್ಟಿದೆ
ಕಲಿಯಲು ಸಮಯ ಕಡಿಮೆ ಇದೆ
ಕಲಿಯುವ ಛಲವಿದೆ
ಕಲಿಸುವ ಕಾಲವಿದೆ
ಹರಿಯುವ ನೀರಿನಂತಿರುವ ಸಮಯ
ಅಶ್ವ ವೇಗದಲ್ಲಿ ಓಡುವ ಕಾಲ
ಹಿಡಿದು ನಿಲ್ಲಿಸುವ ಬಲವಿಲ್ಲ
ಅದರೊಂದಿಗೆ ಸಾಗುವ ಧೈರ್ಯವಿಲ್ಲ

ಸಮುದ್ರದ ಅಲೆಗಳು ದಡ ಸೇರುವಂತೆ
ಜೀವನದ ದಡ ಸೇರುವೇನೋ
ಎಂದೂ ಬಿಡದ ಪ್ರಶ್ನೆ…..