ಇತ್ತೀಚಿನ ಬರಹಗಳು: ಮಂಜುಳಾ ಡಿ. (ಎಲ್ಲವನ್ನು ಓದಿ)
- ನೀಲಿ ಅಗಾಧತೆ… - ಏಪ್ರಿಲ್ 11, 2021
- ಸಜೀವ ಹಿನ್ನೆಲೆಯೊಂದು… - ಏಪ್ರಿಲ್ 4, 2021
- ದೀಪಕ್ ಬಗೈರ್ ಕೈಸೇ, ಪರವಾನೆ ಜಲ್ ರಹೀ ಹೈ… - ಮಾರ್ಚ್ 21, 2021
ನೀ ಪಿಸು ಮಾತಲಿ ಏನೋ ಹೇಳಿದಂತೆ..
ಇಲ್ಲೇ ನನ್ನ ಕೂಗಿದಂತೆ…
ಚಿಕ್ಕ ಸುರುಳಿಗಳಲ್ಲಿ ಸುತ್ತುವ ಹರ್ಷಗೀತ..
ಚಿಕ್ಕ ಆಸೆ ಕನವರಿಕೆಗಳ ಪ್ರಪಾತ..
ಮುಗಿಲ ಹಾಸಿದ ಮಬ್ಬಿನ ನೆಮ್ಮದಿಯ ಮಂದಸ್ಮಿತ
ಮಸಕು ನಲಿವಿನ ನೆರಳಿನಲ್ಲಿ ಬೆರೆತ ಸಂಗೀತ..
ಮತ್ತೆ ಮತ್ತೆ ನಿನ್ನೆಡೆಗೆ ಮರಳುವ ಮನದ ಅಲೆಗಳು
ನೀ ಪಿಸು ಮಾತಲಿ ಏನೋ ಹೇಳಿದಂತೆ…
ಇಲ್ಲೇ ನನ್ನ ಕೂಗಿದಂತೆ…
ತಣ್ಣಗಿನ ನಿನ್ನ ಮೌನ
ನಿನ್ನೆಡೆಗಿನ ನನ್ನ ಪದಗಳಾಗದ ಕವನ..
ಅರೆಗಳಿಗೆ ಏರಿ ಇಳಿಯುವ ನಿನ್ನ ಕೋಪ
ದಣಿವಿಲ್ಲದ ನನ್ನ ತಪನ ತವಕದ ತಾಪ…
ಮತ್ತೆ ಮತ್ತೆ ನಿನ್ನೆಡೆಗೆ ಮರಳುವ ಮನದ ಅಲೆಗಳು
ಅದೋ ದೂರದ ಮುಗಿಲು ನೀ
ಈ ಅಂಚಿನ ಇಳೆಯು ನಾ..
ಏಳು ಬೀಳು ಅಸಾಧ್ಯದ ಸಾರ
ಈ ಬಂಧ ಕಲೆತರೆ ನಕ್ಷತ್ರಗಳ ಹಾರ..
ಮತ್ತೆ ಮತ್ತೆ ನಿನ್ನೆಡೆಗೆ ಮರಳುವ ಮನದ ಅಲೆಗಳು
ನೀ ಪಿಸು ಮಾತಲಿ ಏನೋ ಹೇಳಿದಂತೆ..
ಇಲ್ಲೇ ನನ್ನ ಕೂಗಿದಂತೆ..


ಹೆಚ್ಚಿನ ಬರಹಗಳಿಗಾಗಿ
ಸಂಕ್ರಾಂತಿ
ಹುಣ್ಣಿಮೆ ರಾತ್ರಿ ದೇವರಾಡುವನು
ಮಹಾಸಾಗರವಾದಳು