ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಮುಗಿಲು

ಪುನೀತ್ ಕುಮಾರ್ ವಿ

ಮುಗಿಲು ನಾಚಿಕೊಂಡರೆ ಅದರ ಮೋರೆ ಕೆಂಪು
ಮುದಗೊಂಡಾಗ ತಿಳಿನೀಲಿ, ಬಿಳುಪು
ದುಃಖ ಭಾವದ ಬಣ್ಣ-ನಸುಕಪ್ಪು

ಮುಗಿಲು ನಕ್ಕರೆ, ಇಳೆಗೆ ತುಂತುರು ಮಳೆ
ಮುಗಿಲು ಅತ್ತರೆ ಭಾರಿಮಳೆ
ಚಂಡಿ ಹಿಡಿಯೆ, ಬಿಡದ ಜಡಿ ಮಳೆ
ಬೇಸರಗೊಂಡಾಗ ಎತ್ತೆತ್ತಲೊ ಹಾರುವ ಹುಡಿಮಳೆ
ಮುಗಿಲು ಮುನಿದರೆ ಗುಡುಗು ಸಹಿತ;
ಅತಿರೌದ್ರ ತಾಳಿದರೆ ಚಂಡಮಾರುತ

ಮುಗಿಲ ಮನಸರಳಲು ಇಳೆಗೆ ಹೂಮಳೆ
ಮುಗಿಲ ಮನಕುಣಿಯಲಿ ಸಂಭ್ರಮದ ಹೊಳೆ

ಈ ಮುಗಿಲೊಂದು ಭಾವಗಳ ಸಂಕಲನ
ಮುಗಿಲನದು ಮೌನ ಸಂಚಲನ, ಆರ್ದ್ರ ಸಂವಹನ.