ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸ್ಪಂದನ ೮ (ಕುಂಡಲಿನಿ)

ಶಶಿಧರ್ ಕೃಷ್ಣ
ಇತ್ತೀಚಿನ ಬರಹಗಳು: ಶಶಿಧರ್ ಕೃಷ್ಣ (ಎಲ್ಲವನ್ನು ಓದಿ)

ಕಳೆದೆರಡು ಭಾಗಗಳಲ್ಲಿ ಸಪ್ತಚಕ್ರಗಳು, ಪೀನಿಯಲ್ ಗ್ರಂಥಿ, ಗುರು ಚಕ್ರ, ಬ್ರಹ್ಮರಂಧ್ರ ದ ಬಗ್ಗೆ ತಿಳಿದುಕೊಂಡೆವು, ಇಲ್ಲಿ ಹರಿಯುವ ಶಕ್ತಿಯನ್ನು ಕುಂಡಲಿನಿ ಎಂದು ಹೇಳುವರು.

ಕುಂಡಲಿನಿ ಸುಪ್ತಪ್ರಜ್ಞೆಯಲ್ಲಿ ಇರುತ್ತದೆ ಎಂಬುದನ್ನು ಕೇಳಿ ಇರುತ್ತಿರಿ ಹಾಗಾದರೆ ಏನಿದು? ಕುಂಡಲಿನಿ,

ನೀವು ಒಂದು ಕಟ್ಟಡದ ಮೇಲಿನಿಂದ ಜೀಗಿದು, ಕೆಳಗೆ ಬಿದ್ದಾಗ…, ನೆಲ ಅದಕ್ಕೆ ತಕ್ಕಂತೆ ಫಲ ನೀಡುತ್ತದೆ. ನಿಮ್ಮನ್ನು ಕೆಳಗೆ ಎಳೆಯುವ ಗುರುತ್ವಾಕರ್ಷಣ ಶಕ್ತಿ, ಅದು ಕುಂಡಲಿನಿ.
ಅದೇ ನೀವು ನೆಲದ ಮೇಲೆ ನಿಮ್ಮ ಬೇರು ಬಿಟ್ಟರೆ, ಹುಟ್ಟಿದಾಗ ನಾವು ಇದ್ದ ದೈಹಿಕ ಗಾತ್ರಕ್ಕೆ, ಈಗಿರುವ ಗಾತ್ರದಲ್ಲಿ ಬದಲಾವಣೆ ಇರುವುದು ಸಹಜ. ಇಲ್ಲಿ ಗುರುತ್ವಾಕರ್ಷಣ ಶಕ್ತಿಯನ್ನು ಮೀರಿ ನಾವು ಬೆಳೆಯುತ್ತೇವೆ ಇದು ಸಹ ಕುಂಡಲಿನಿ.

ನೀರು ಹರಿಯುತ್ತದೆ ಅದು ಕುಂಡಲಿನಿ,
ಗಾಳಿ ಬೀಸುತ್ತದೆ ಅದು ಕುಂಡಲಿನಿ,
ಭೂಮಿ ಹನ್ನೆರಡು ಗಂಟೆಗೆ ಒಮ್ಮೆ, ಅರ್ಧ ಸುತ್ತು ತಿರುಗಿ.. ಭೂಮಿಯ ಒಂದು ಭಾಗಕ್ಕೆ ಬೆಳಕು, ಇನ್ನೊಂದು ಭಾಗಕ್ಕೆ ಅದರ ನೆರಳು ಬರುವುದು, ಅದು ಕುಂಡಲಿನಿ, ಭೂಮಿ ತಿರುಗುವುದು ಕುಂಡಲಿನಿ.

ಮರಗಳ ಬೇರುಗಳು, ಸತ್ವಯುತ ಭೂಮಿಯ ಮೇಲಿನ ಎರಡು ಅಡಿಗಳಷ್ಟು ಮಣ್ಣನ್ನು ಹಿಡಿದಿಟ್ಟುಕೊಳ್ಳುತ್ತವೆ
ಅದು ಕುಂಡಲಿನಿ ಶಕ್ತಿ.

ಅದೆ ವೃಕ್ಷವನ್ನು ಕಡಿದಾಗ ಮಣ್ಣನ್ನು, ನೀರು ತನ್ನ ಜೊತೆಗೆ ತೆಗೆದುಕೊಂಡು ಹರಿಯುತ್ತದೆ ಅದು ಕುಂಡಲಿನಿ.

ಬೇರುಗಳು ಹಿಡಿಯುವ ಭೂಮಿಯ ಶಕ್ತಿ ಹೆಚ್ಚು, ಜಲದ ಶಕ್ತಿಗಿಂತ, ಇದರ ಅರ್ಥವೆಂದರೆ ಒಂದು ಜೀವಾಣು ಹುಟ್ಟಿದಾಗ, ಭೂಮಿಯ ಅಂದರೆ ಹೆಣ್ಣಿನ ಶಕ್ತಿ ವರ್ಧಕ ಅಂಶ ತೆಗೆದುಕೊಂಡು ಬೆಳೆಯುತ್ತದೆ, ಅದು ಕುಂಡಲಿನಿ.

ಒಂದು ಮೊಳಕೆ ಬೀಜವನ್ನು ಭೂಮಿಯ ಒಳಗೆ ಹಾಕಿದಾಗ, ಅದು ಭೂಮಿಯನ್ನು ಸೀಳಿಕೊಂಡು, ಅಥವಾ ಬಂಡೆಯನ್ನು ಸಹ ಒಡೆದು ಬರುತ್ತವೆ ಅದು ಕುಂಡಲಿನಿ.

ಒಂದು ಸಸ್ಯ ಐದು ವರುಷಕ್ಕೆ, ಪ್ರಬುದ್ಧ ಮರವಾಗುತ್ತದೆ, ಕಾರಣ ಆಗ ಅದರ ವಿಶುದ್ಧ ಚಕ್ರ ಸಂಪೂರ್ಣ ಜಾಗರುಕತೆ ಹೊಂದಿರುವುದಾಗಿದೆ.

ಹಾಗೆಯೆ “ಆಡು ಮುಟ್ಟದ ಸೊಪ್ಪಿಲ್ಲ” ಎನ್ನುವರು, ಆದರೆ ಪ್ರತಿದಿನ ಆಡು ಒಂದೆ ರೀತಿಯ ಸೊಪ್ಪನ್ನು ತಿನ್ನುತ್ತದೆಯೇ…? ಖಂಡಿತ ಇಲ್ಲ, ಒಂದು ಮರದ ಎಲೆಯನ್ನು ಆಡು ತಿನ್ನಲು ಮುಂದಾದಾಗ, ಅದು ಇತರೇ ಮರಗಳಿಗೆ ಸಂದೇಶ ರವಾನಿಸುತ್ತದೆ, “ನನ್ನ ಎಲೆಗಳನ್ನು ಒಂದು ಪಾಣ್ರಿ ತಿನ್ನುತ್ತಿದೆ” ಎಂದು. ತಕ್ಷಣ, ಉಳಿದ ಆ ಜಾತಿಯ ಮರಗಳು ತನ್ನ ಇಡಿ ದೇಹವನ್ನು ವಿಷ ಮಾಡಿಕೊಳ್ಳುತ್ತವೆ, ಹೀಗಾಗಲು ಕಾರಣ ಅದರ ಆಜ್ಞಾ ಚಕ್ರ ಆರನೆಯ ವರುಷದಲ್ಲಿ ಜಾಗರುಕತೆ ಹೊಂದುವುದಾಗಿದೆ.

ಇದೆ ರೀತಿ ಸಹಸ್ರಾರ ಚಕ್ರ ವೃಕ್ಷದಲ್ಲಿ ಜಾಗರುಕತೆ ಆದಾಗ ದೂರ ಎಷ್ಟೇ, ಇರಲಿ ಅವು ಇತರೆ ಮರಗಳೊಂದಿಗೆ ಸಂವಹನ ನಡೆಸುತ್ತವೆ, ಮತ್ತು ಸ್ನೇಹಿತರನ್ನು ಮಾಡಿಕೊಳ್ಳುತ್ತವೆ. ನಮಗೆ ಅನ್ಯ ರಾಜ್ಯದಲ್ಲಿ, ಪರದೇಶಗಳಲ್ಲಿ ಪರಿಚಿತರು ಇರುವಂತೆ, ಇದಕ್ಕೆ ನಾವುಗಳು ಅಂದರೆ ಮನುಷ್ಯರು ಒಂದು ರೀತಿಯಲ್ಲಿ ತಂತ್ರಜ್ಞಾನ ಬಳಸಿದರೆ, ವೃಕ್ಷಗಳು ಅವುಗಳದ್ದೇ ಒಂದು ರೀತಿಯ ತಂತ್ರಜ್ಞಾನ ಉಪಯೋಗಿಸುತ್ತವೆ.

ನಾಲ್ಕು ವರ್ಷಗಳ ಮೇಲ್ಪಟ್ಟ ಮರವನ್ನು ನೀವು ಅಪ್ಪಿ, ಅದಕ್ಕೆ ಧನ್ಯವಾದಗಳನ್ನು ಹೇಳಿ, ಒಂದು ಭಾವನೆಯನ್ನು ಅದರೊಟ್ಟಿಗೆ ಬೆಳೆಸಿಕೊಳ್ಳಿ. ಆಗ, ಅವುಗಳ ವರ್ತನೆ ವ್ಯಾಪಾಕವಾಗಿ ಬದಲಾವಣೆ ಹೊಂದುವುದನ್ನು ನೀವು ನೋಡುವಿರಿ, ಅದು ನಿಮಗೆ ಅವುಗಳು ಬಿಡುವ ಫಲದಲ್ಲಿ ಗೋಚರಿಸುತ್ತದೆ. ಅದರಲ್ಲಿನ ಅನಾಹತ ಚಕ್ರದ ಜಾಗರುಕ ಸ್ಥಿತಿ ಇದಕ್ಕೆ ಕಾರಣ, ಅದು ಕುಂಡಲಿನಿ‌.

ಈಗ ಇಲ್ಲಿ ಬರೆಯುತ್ತಿರುವುದು ಕುಂಡಲಿನಿ, ಅದನ್ನು ನೀವು ಓದಿ ಒಂದಷ್ಟು ವಿಷಯ ನಿಮಗೆ ಮನದಟ್ಟು ಆಗುತ್ತಿದೆ.., ಎಂದರೆ ಅದು ಕುಂಡಲಿನಿ.

ಹಾಗೆಯೇ, ನಮ್ಮಲ್ಲಿ ಸಹ ಇದು ಸದಾ ಹರಿಯುತ್ತಲೇ ಇರುತ್ತದೆ, ಅದು ಅ ಯಿಂದ ಳ ಕಾರದವರೆಗೆ ಒಂದೊಂದು ಅಕ್ಷರದ ಉಚ್ಛಾರಣೆ, ಶಕ್ತಿ ಒಂದೊಂದು ಚಕ್ರದಲ್ಲಿ ಹರಿಯಲು ಸಹಾಯ ಮಾಡುತ್ತದೆ, ಅದು ಕುಂಡಲಿನಿ.

ಮೇಲಿನ ಬರಹ ಓದಿದ ಮೇಲೆ ಕುಂಡಲಿನಿ ಶಕ್ತಿ ಸುಪ್ತವಾಗಿ ಅಡಗಿರುತ್ತದೆಯೊ? ಅಥವಾ ಕುಂಡಲಿನಿ ಶಕ್ತಿ ಎಂಬುದು ಸದಾ ಹರಿಯುತ್ತಿದೆ ಎಂಬ ಅರಿವು ನಮ್ಮ ಪ್ರಜ್ಞೆಗೆ ಬಾರದೆ ಸುಪ್ತವಾಗಿ ಇರುವುದೋ? ನಿರ್ಧಾರ ನೀವೆ ಮಾಡಿ.

ಇನ್ನು ಮುಂದಿನ ಬರಹದಲ್ಲಿ ಮಾನವ ದೇಹದಲ್ಲಿ ಇದು ಹರಿಯುವ ಬಗ್ಗೆ ನೋಡೊಣ.

(ಮುಂದುವರಿಯುತ್ತದೆ)