- ಕವಿತೆ ಹುಟ್ಟುವುದಕ್ಕೆ ಹೊತ್ತು ಗೊತ್ತಿಲ್ಲ - ಆಗಸ್ಟ್ 6, 2023
- ಇದೇನು ನಾಟಕವಲ್ಲ - ಜನವರಿ 30, 2022
- ಕು.ಸ.ಮಧುಸೂದನರ ಎರಡು ಕವಿತೆಗಳು - ಡಿಸಂಬರ್ 21, 2021
ಬರುವುದು ತಡವಾಯಿತು ನಿಜ,
ಕು.ಸ.ಮಧುಸೂದನ ಅವರ ಕವಿತೆಯಿಂದ…
ಅದರಿಂದ ಒಳಿತಾಯಿತೆ.. ಕೆಡುಕಾಯಿತೆ..?
ತಡವಾಯಿತೇನು
ನಾನು ಬಂದಿದ್ದು
ಬರುವ ದಾರಿಯಲಿ ನೂರಾರು ಅಡೆತಡೆಗಳು
ಕಾಡು ಕಣಿವೆಗಳು
ಸಾವರಿಸಿ ಬರುವಷ್ಟರಲ್ಲಿ ವರ್ಷ ಮುವತ್ತು ಕಳದು
ನನಗೀಗ ಐವತ್ತೆರಡು
ಬಿಡು ನಿಂತ ಸ್ರಾವದ ಕೊನೆಯ ಡೇಟು
ನೆನಪಿಸಿಕೊಳ್ಳಲು ಒದ್ದಾಡಬೇಡ
ಐವತ್ತಾಯಿತು ನಿನಗೂ
ಮಕ್ಕಳು ಮೊಮ್ಮಕ್ಕಳು
ಮದುವೆ ಮುಂಜಿಗಳು ಕಾಯಿಲೆ ಕಸಾಲೆಗಳು
ಎಲ್ಲ ಕಂಡಾಯಿತು.
ಜೋಡಿ ಹಾಸಿಗೆಯ ಹಂಗಿರದ ಬದುಕು
ಬೇಟಿಯಾದೆವು ಬಯಸಿಯೇ ಈಗ
ಬರಿದೆ ಮಾತಾಡಲು
ಸ್ರಾವ ಸ್ಖಲನಗಳ ಹಂಗಿರುವುದಿಲ್ಲ.
ಮಾತಾಡು
ಎಲ್ಲಿದ್ದೆ ಇಷ್ಟುದಿನ
ಹೇಗಿದ್ದೆ ಎಲ್ಲ ಕೇಳಬೇಡ
ನಾನೂ ಕೇಳುವುದಿಲ್ಲ ಗತದ ದಿನಗಳ
ಬಾ ಬಿಡುವಿದ್ದರೆ ಕೂತು ಮಾತಾಡೋಣ ಮೌನದಲಿ
ಬಿಟ್ಟು ಬಂದ ಹಾದಿಯಲಿ ಹೆಜ್ಜೆ ಗುರುತುಗಳೇನು ಉಳಿದಿಲ್ಲ
ಬರುವುದು ತಡವಾಯಿತು ನಿಜ
ಅದರಿಂದ ಒಳಿತಾಯಿತೆ ಕೆಡುಕಾಯಿತೆ
ಹೆಣ ಕೊಯ್ಯವ ಮಾತುಗಳನೇಕೆ ಆಡೋಣ
ಏನು ಮಾತಾಡುವುದು
ಈ ಪ್ರಶ್ನೆ ನಮ್ಮಿಬ್ಬರದು ಮಾತ್ರವೇನಲ್ಲ
ಜಗದೊಳಗಿನಷ್ಟೂ ಅಗಲಿದ ಪ್ರೇಮಿಗಳದು!
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ