ಇತ್ತೀಚಿನ ಬರಹಗಳು: ರಮ್ಯಾ ವಿನಯ್ (ಎಲ್ಲವನ್ನು ಓದಿ)
- (ಹುಸಿ)ನಿರೀಕ್ಷೆ - ಜನವರಿ 22, 2022
- ಇನ್ನೇನು ಬೇಕಿದೆ…? - ಏಪ್ರಿಲ್ 6, 2021
- ರಮ್ಯ- ಬಿಂದು - ಜನವರಿ 21, 2021
ನಿನ್ನ ಚಿತ್ರವೇ ತುಂಬಿರುವ
ಕನಸ ಕಣ್ಣುಗಳಿಗೆ
ಕಪ್ಪನೆಯ ಕನ್ನಡಕವೊಂದನು
ತೊಡಿಸಿ
ಪರರಿಂದ ನೋಟವನೇ
ಮರೆಮಾಚಬೇಕಿದೆ..
ಜನಜಂಗುಳಿಯ ನಡುವೆಯೂ
ನುಗ್ಗಿಬರುವ ನಿನ್ನ
ನೆನಪುಗಳನ್ನೆಲ್ಲಾ ಬದಿಗೊತ್ತಿ
ಮುನ್ನಡೆಯುವ ಶಕ್ತಿ
ಈ ಪುಟ್ಟ ಹೃದಯಕ್ಕೆ ನೀಡಬೇಕಿದೆ..
ಬೆಚ್ಚನೆಯ ತೋಳನ್ನು
ಬಯಸಿದ್ದ ಹಸಿಮನವ
ಹುಸಿ ಭರವಸೆಯ
ರಜಾಯಿ ಹೊದ್ದಿಸಿ,
ತುಸು ರಮಿಸಲು
ಸಮಯವು ಇನ್ನೂ ಬೇಕಿದೆ..
ಪಡುವಣದಂಚಿನಲಿ
ಕರಗಲೆಂದೇ ಹೊರಟ
ದಿನಮಣಿಯಂತೆ
ಕತ್ತಲ ಬಯಲನೇ
ಬಯಸಿದ ನಿನಗೆ
ವಿದಾಯದ ಹೊರತು
ಇನ್ನೇನು ಬೇಕಿದೆ?
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ