ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಈ ಸಮಾಧಿಗಳು ಎಂದೂ………

ಯಮುನಾ ಕಂಬಾರ
ಇತ್ತೀಚಿನ ಬರಹಗಳು: ಯಮುನಾ ಕಂಬಾರ (ಎಲ್ಲವನ್ನು ಓದಿ)

(ಫೆಬ್ರುವರಿ ೧೪, ಪುಲ್ವಾಮಾ ದಾಳಿಯಲ್ಲಿ ಸತ್ತ ೪೦ ಯೋಧರ ನೆನಪಿನಲ್ಲಿ)

ಈ ಸಮಾಧಿಗಳು ಎಂದೂ
ನರಳುವುದಿಲ್ಲ……!!
ನಗೆ ಬೀರಿ , ದೇಶವಾಸಿಗಳ ಜೀವದಲಿ ಭರವಸೆಯ ಜ್ಯೋತಿಯಾಗಿವೆ…..!!!!

ಈ ಸಮಾಧಿಗಳು ಎಂದೂ….
ಮನದ ಆಸೆಗಳ ಧರಿಸಿ
ಕನಸುಗಳ ಹೊತ್ತಿಸಲಿಲ್ಲ
ದೇಶದ ನಾಗರಿಕರ ಆಸೆಗಳಲ್ಲಿ ಒಂದಾಗಿ ಅವರ ಕನಸುಗಳಲ್ಲಿ ಕಣ್ತೆರೆಯುತ್ತಿವೆ…….!!

ಈ ಸಮಾಧಿಗಳು ಎಂದೂ…….ಸತ್ತೆವೆಂದು ಘೋಷಿಸಿಕೊಂಡಿಲ್ಲ.
ಈ ನೆಲದ ಮೇಲೆ ಜೀವಿ ಇರುವವರೆಗೂ ಅಮರವೆಂದು ಭೋರ್ಗರೆಯುತ್ತಿವೆ…….!!

ಈ ಸಮಾಧಿಗಳು ಎಂದೂ …..
ಅನಾಥವೆಂದು ಅಳುತ್ತಿಲ್ಲ
ನಾಡಿನ ಉದ್ದಗಲಕ್ಕೂ ಹಬ್ಬಿ ತಮ್ಮ ನೆತ್ತರ ನಸೆಯ ಹಬ್ಬದಲ್ಲಿವೆ…….!!

ಈ ಸಮಾಧಿಗಳು ಎಂದೂ …..
ಸೋಲು, ನೋವು , ಗಾಯಗಳ ನೆರಳಿನಲ್ಲಿಲ್ಲ
ಮಣ್ಣಿನ ಗೆಲುವಿನ ಹೋರಾಟದಲ್ಲಿ ಮುನ್ನುಗ್ಗುತ್ತಿವೆ…….!!