- ಕಪ್ಪಿನ ನಂಬಿಕೆ-ಭಾಮಿನಿ ಷಟ್ಪದಿಯ ಪದ್ಯ - ನವೆಂಬರ್ 23, 2023
- ಕರ್ಮದ ಧರ್ಮ - ಅಕ್ಟೋಬರ್ 24, 2023
- 99099 - ನವೆಂಬರ್ 20, 2022
ಕುರುಕ್ಷೇತ್ರ ಯುದ್ಧವು ಇನ್ನೇನು ಪ್ರಾರಂಭವಾಗುತ್ತದೆ ಎನ್ನುವುದನ್ನು ತಿಳಿದ ವಿಧುರನು ಯುದ್ಧದ ಸಾವು ನೋವುಗಳನ್ನು ಲೆಕ್ಕಿಸಿ ವಿಹ್ವಲನಾಗಿ ಹೇಗಾದರೂ ಮಾಡಿ ಯುದ್ಧವನ್ನು ನಿಲ್ಲಿಸಲೇಬೇಕೆಂದು ನಿರ್ಧರಿಸಿ ದುರ್ಯೋಧನನಲ್ಲಿಗೆ ಬಂದು :” ದುರ್ಯೋಧನಾ ,….ನೀನೇ ಯುದ್ಧದಿಂದ ಹಿಂದಕ್ಕೆ ಸರಿ ಅದೇ ಉಪಾಯ” ಎಂದು ತಿಳಿಹೇಳಿದರೂ “ವಿಧುರ ನೀತಿ ಫಲಿಸಲಿಲ್ಲ ” ತಲೆ ಬರಹದಡಿ ಅಕ್ಷಯ ಕಥಾ ವಿಭಾಗದಲ್ಲಿ ದಿ:೨೬- ೧೦-೨೩ ರರ ವಿ.ಕ.ದಲ್ಲಿ ಮೂಡಿ ಬಂದ ಲೇಖನದ ಹಿನ್ನೆಲೆಯಲ್ಲಿ ಮೂಡಿ ಬಂದ ಕವಿತೆ : ” ಕಪ್ಪಿನ ನಂಬಿಕೆ ….ಭಾಮಿನಿ ಷಟ್ಪದಿಯಲ್ಲಿ
ಕವಿತೆ : ಕಪ್ಪಿನ ನಂಬಿಕೆ
ಉಪ್ಪು ನಂಬಿಕೆ ಗತಿಸಿ ಭವದಲಿ
ಕಪ್ಪು ಕರಕಲು ಸುಟ್ಟು ಮೆರೆದಿದೆ
ತಪ್ಪು ತೊಡುತಾ ಕ್ಷಣಿಕ ಭೋಗಕೆ ತನ್ನ ತಾತೆರೆದೂ
ಒಪ್ಪಿ ಹಾಡಿತು ತನ್ನಯಾಶಯ
ಕಪ್ಪು ಜನನವು ಶೀಘ್ರ ಮತಿಯಲಿ
ಮುಪ್ಪು ಮಾಗದೆ ಜನನ ಕೊಟ್ಟಳು ಕೌರ ಗಾಂಧಾರೀ
ಸಹನೆ ಸಹಿಸದ ವಿದುರನಾಡಿದ
ವಿಹಿತ ನುಡಿಗಳ ಕೇಳದಂದದಿ
ಗಹನ ಬವಣೆಯ ತಂದು ನೀಗದ ಕುಲವ ಕೌರವನೋ……
ಸಹಜ ವ್ರತವದು ಮಣ್ಣು ಹುಡಿಯಲಿ
ದಹನಗೊಂಡಿತು ಸಿರಿಯು ಮಸಣದಿ
ಕುಹುದ ಕಪ್ಪಿನ ದೆಸೆಯ ಕಾರಣ ರುದ್ರ ಭೂಮಿಯಲಿ
ಇತಿಯ ಮಿತಿಯಲಿ ಜೀವ ನಿಂತಿದೆ
ಮತಿಯ ಹೆಕ್ಕುವ ಮನದ ಮೂಲೆಲಿ
ರತಿಯ ರಮಿಸುತ ಸುರುಚಿ ಬಾಚಿಕೊ ನಿನ್ನ ವೀರ್ಯವದೋ
ಸತಿಯು ಸುತರರ್ ಬಂದು ಹೋಗುವ
ಜೊತೆಯ ಮಾರ್ಗ ಕ್ಷಣಿಕ ಕಾಲವು
ಜೊತೆಯ ಜೀವನ ಹುಡುಕಿ ಬಂದರು ನಿಲಲಿ ನಿನ್ಪತಕೇ
ಹುಡುಕಿ ಹೇಳೆಲೊ ಲೋಕ ನೆಲದಲಿ
ಬಿಡದೆ ಬೆಳೆದಿದೆ ….? ಹುರಿದ ಕಾಳೂ……!!
ತಡಕಿ ತದುಕೀ ಹೇಳ ಬೇಡವೊ
ಕಪ್ಪಿನಾನೆಲೆಯಾ
ಸಿಡುಕಿ ಹಿಂದಕೆ ಸರಿಯ ಬೇಡವೊ
ಮಿಡುಕಿ ಮಿಡುಕೀ ಸಾಯು ದ್ಯಾತಕೊ
ಮಡಕೆ ಕಾಳಿನ ತೆರೆದಿ ಕುದುರುವ ಚೆಲುವ ಬಾಚಿಕೊನೀ
ಗತದ ನೆಲದಲಿ ತುಂಬಿ ತುಳುಕಿದೆ
ಜತನ ಪುಷ್ಪವು ಸೌಖ್ಯ ಪರಿಮಳ
ಸತತ ಯತ್ನವು ಸರಳ ದಾರಿಯು ಗೊಂದಲೇತಕವೋ…..!!
ಅತುಳ ಹಾಸ್ಯವು ಹರಡಿ ಹರಿಸಲಿ
ರತುನ ಹರುಷವು ಜನನ ಪಡೆಯಲಿ
ಪೃಥುವಿ ಕರಕಲು ಕರಗಿ ನಶಿಸಲಿ ಬೆಳಕೆ ಶಾಶ್ವತವೋ…
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ