ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕೊರೋನಾ ಸಂಗೀತ-ಸಂದೇಶ

ಕೋರೊನಾದ ಆರ್ಭಟ ಜೋರಾಗಿಯೇ ಇದೆ..ಐವತ್ತು ಸಾವಿರಕ್ಕೂ ಹೆಚ್ಚು ಸೋಂಕಿತರ ನಡುವಲ್ಲಿ, ಇವತ್ತಿಗೂ ಅನಾವಶ್ಯಕ ಮನೆಯಿಂದ ಹೊರಬರುವುದನ್ನು ಕಮ್ಮಿ ಮಾಡಬೇಕಾದ ಅವಶ್ಯಕತೆ ಇದೆ ಎಂಬ ಸಂದೇಶ ಸಂಗೀತದ ಮೂಲಕ...ಮನೆಯಿಂದಲೇ ಹಾಡಿ ಕಳಿಸಿದವರು ಮಮತಾ ಮನ್ವಾಚಾರ್. ಕೊರೋನಾ ಸಂದೇಶದ ಕ್ರಿಯೇಟಿವ್ ಹಾಡು ಹಾಗೂ ಸಾಹಿತ್ಯ ಮಮತಾ ಅವರದ್ದು. ರಾಗ : ದರ್ಬಾರಿ ಕಾನ್ಹಾಡ ತಾಳ :ಭಜನ್ ಟೇಕ್
ಕೊರೋನಾ ಸಂದೇಶದ ಹಾಡು, ಮಮತಾ ಮನ್ವಾಚಾರ್ ಅವರ ಕಂಠ ಸಿರಿಯಲ್ಲಿ..
ರಾಗ : ದರ್ಬಾರಿ ಕಾನ್ಹಾಡ ತಾಳ :ಭಜನ್ ಟೇಕ್

ಕರೋನ ಬಂದಿದೆ ss
ಮನೆಯಲ್ಲೇ ಇರಿ ||
ನೆಮ್ಮದಿ ಕಳೆದಿದೆ ಈ ವೈರಾಣು
ಹೇಗೆ ಬಂದಿತೋ ಈ ರೋಗ s||

ಬಿಸಿಲಲಿ ಓಡಾಡದೆ
ಬೀದಿಗೆ ಇಳಿಯದೆ s||
ಮನೆಯಲ್ಲೇ ಇರಿ
ಶಾಂತಿಲಿ ss||

ದಿನಸಿ ಸಾಮಗ್ರಿಯ
ತರಲು ಹೋದಾಗ s||
ಸಾಮಾಜಿಕ ಅಂತರ
ಕಾಪಾಡಿರಿ s||

ಅಕ್ಕ ಪಕ್ಕದ s
ಸುತ್ತಾ s ಮುತ್ತಲ s||
ಮರಗಿಡಗಳಾ
ನೀವು ರಕ್ಷಿಸಿ s||

ಹೊರಗೆ ನೀವು s
ಎಲ್ಲಿಗೆ ಹೋ s ದರು ||
ಮಾಸ್ಕನು ಧರಿಸಿಯೆ
ನಡೆಯಿರಿ s||

ಹೊರಗಿಂದ ಬಂದ s
ತಕ್ಷಣವೇ ನೀವು ||
ಕೈಯನು ಸಾಬೂನಿಂದ
ತೊಳೆಯಿರಿ s||

ಅನ್ನ s ನೀರು s
ಇಲ್ಲದ ಜನರಿಗೆ s||
ಕೈಲಾದ ಸಹಾಯವ
ನೀಡಿರಿ s||

ಅವಶ್ಯವಿಲ್ಲದೆ s
ಸುಮ್ಮನೆ ಓಡಾಡಿ s||
ಪೊಲೀಸ್ರ ತಾಳ್ಮೆಯ
ಕೆಣಕದಿರಿ s||

ಸಾಹಿತ್ಯ ರಚನೆ, ಸಂಯೋಜನೆ ಮತ್ತು ಗಾಯನ: ಮಮತಾ ಮನ್ವಾಚಾರ
ಸಂಶೋಧನಾ ವಿದ್ಯಾರ್ಥಿನಿ
ಕನ್ನಡ ವಿಶ್ವವಿದ್ಯಾಲಯ
ಹಂಪಿ.

ಮಮತಾ ಮನ್ವಾಚಾರ