ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕೆಲವು ಚುಟುಕುಗಳು

ತ್ರಿವೇಣಿ ಜಿ ಎಚ್
ಇತ್ತೀಚಿನ ಬರಹಗಳು: ತ್ರಿವೇಣಿ ಜಿ ಎಚ್ (ಎಲ್ಲವನ್ನು ಓದಿ)

೧)
ಕಟ್ಟಿ ಹಾಕಿದೆ ಮೆಲು ದನಿಯ ಹಾಡುಗಳು..
ಎದೆಯೊಳಗೆ ಅಡಗಿಸಿ ಬಿಡಬೇಕು ಗುಟ್ಟುಗಳ…

*****

೨)
ಖಾಲಿಯಾಗದ ಮುಗುಳ್ನಗೆಯ
ಲೆಕ್ಕವಿಟ್ಟಿಲ್ಲ ನಾನು..
ನೋವು ಮಡುಗಟ್ಟಿದಾಗ ಪ್ರತ್ಯಕ್ಷ ನೀನು…

*****

೩)
ನೆನೆಯಲೇ ಬಾರದು ನಿತ್ಯ ನಿನ್ನ..
ಆದರೂ,
ಹೀಗೇಕೆ ಕಾಡುವೆ
ನಿತ್ಯವೂ ನನ್ನ.

*****

೪)
ಕಣ್ಣ ಹನಿಗೆ ಕೆನ್ನೆ ಕಲೆಯಾಗಿದೆ
ಚಡಪಡಿಕೆ ಶುರುವಾಗಿದೆ
ವಿರಹದ ಒಡಲಿಗೆ.

*****

೫)
ತುಟಿ ಸವಿಯ ರುಚಿಯನ್ನೇ ಮರೆತಿದೆ
ಅಸಲಿಗೆ ಒಲವೇ ಕಾಣೆಯಾಗಿದೆ.