- ಕೇಳದ ಹುಟ್ಟಿಗೇಕೆ ಶಿಕ್ಷೆ? - ನವೆಂಬರ್ 3, 2021
ನಾ ಕಣ್ಣುಬಿಡುವ ಮೊದಲೇ
ಹೆತ್ತವರಿಂದ ತಿರಸ್ಕಾರವಂತೆ!
ನಡೆದಾಡುವ ಮೊದಲೇ
ನಾ ಹೊರೆಯಾದೆನಂತೆ!
ಮಾತನಾಡುವ ಮೊದಲೇ
ನಾ ಅಪ್ರಯೋಜಕಿಯಂತೆ!
ಅಕ್ಷರ ಕಲಿಯುವ ಮೊದಲೇ
ನಾ ಅಬಲೆಯಂತೆ!
ನಾ ಕೇಳದ ಹುಟ್ಟಿಗೆ
ನಮಗೇಕೆ ಇಂಥಾ ಶಿಕ್ಷೆ?
ಚಾಕರಿಗಾಗಿ ಹೆಣ್ಣಂತೆ
ನೌಕರಿಗಾಗಿ ಗಂಡಂತೆ!
ಕಥೆ ಪುರಾಣಗಳಲಿ
ಹೆಣ್ಣು ಆದಿಶಕ್ತಿಯಂತೆ!
ನೆಲ ಉತ್ತಿಬಿತ್ತಿದರೂ
ಸಂಸಾರದ ನೊಗ ಹೊತ್ತರೂ
ಭೂಮಿ ಮೇಲಿನ ನಾವು
ಕೇವಲ ಗೃಹಿಣಿಯಂತೆ!
ನಾ ಕೇಳದ ಹುಟ್ಟಿಗೆ
ನಮಗೇಕೆ ಇಂಥಾ ಶಿಕ್ಷೆ?
ನಮ್ಮ ಹುಟ್ಟನ್ನೆ
ಹಿಯ್ಯಾಳಿಸಿದವರಿಗೆ
ಕಾಮ ನೀಗಿಸಲು
ನಮ್ಮ ದೇಹ ಬೇಕಂತೆ!
ಹಸುಗೂಸದಾರೆನಂತೆ
ಬಾಲಕಿಯಾದರೆನಂತೆ
ಹುಚ್ಚಿಯಾದರನಂತೆ
ಒಟ್ಟಿನಲಿ ಹೆಣ್ಣಾದರಾಯಿತಂತೆ!
ನಾ ಕೇಳದ ಹುಟ್ಟಿಗೆ
ನಮಗೇಕೆ ಇಂಥಾ ಶಿಕ್ಷೆ?
ನಮ್ಮ ನೋವಿನ ಕಂಬನಿ
ಸೀರೆಯ ಸೆರಗು ಬಲ್ಲದು
ಅಡುಗೆಮನೆಯ ಒಲೆ ಬಲ್ಲದು
ಬಚ್ಚಲುಮನೆಯ ಗೋಡೆ ಬಲ್ಲದು
ಮಲಗುವ ದಿಂಬುಗಳು ಬಲ್ಲವು
ಪಕ್ಕದಲ್ಲಿರುವ ನೀವು ಬಲ್ಲದಾದಿರಿ!
ಇದನ್ನು ನೀವು ನಿಮ್ಮ
ಗೆಲುವು ಎಂದು ಬೀಗುವಿರಿ…
ನಾ ಕೇಳದ ಹುಟ್ಟಿಗೆ
ನಮಗೇಕೆ ಇಂಥಾ ಶಿಕ್ಷೆ..?
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ