ಇತ್ತೀಚೆಗೆ ‘ನಸುಕು.ಕಾಮ್’ ನಡೆಸಿದ ಸಮೀಕ್ಷೆ ಪ್ರಕಾರ ನಮ್ಮ ಓದುಗರ ಸ್ಟ್ರೀಮಿಂಗ್ ಮಾಧ್ಯಮ ವೀಕ್ಷಣಾ ವಿಧಾನ ಈ ಕೆಳಗಿನಂತಿದೆ. ಜನ ಯಾವ ಮಾಧ್ಯಮವನ್ನು ಜಾಸ್ತಿ ನೋಡುತ್ತಾರೆ ಎನ್ನುವದರ ಶೇಕಡಾವಾರು ಫಲಿತಾಂಶ ಇಲ್ಲಿದೆ. ಅಮೆಝೋನ್ ಪ್ರೈಮ್-43%, ನೆಟ್ ಫ್ಲಿಕ್ಸ್ -35%, ಹಾಟ್ ಸ್ಟಾರ್-12%,ಇತರೆ-10%
ದಿ ಪ್ರೌಡ್ ರೆಬೆಲ್
The Proud Rebel
ಎಲ್ಲಿಯೂ ಅತಿ ಅನ್ನಿಸದ ಸುಂದರ ಕಥಾನಕ. ಒಂದು ಫೀಲ್ ಗುಡ್ ಹಾಗೂ ಪೂರ್ತಿ ನೋಡಿಸಿಕೊಂಡು ಹೋಗುವ ಈ ಚಿತ್ರವನ್ನು ಅಮೆಜಾನ್ ಪ್ರೈಮ್ ನಲ್ಲಿ ನೋಡಬಹುದು.
ದ ಟರ್ಮಿನಲ್
The Terminal
ಯಾರು ಜಾಸ್ತಿ ಕೇಳಿರದ ಯುದ್ಧ ಪೀಡಿತ,ಒಂದು ಚಿಕ್ಕ ದೇಶದ ನಾಗರಿಕ ವಿದೇಶದ ಏರ್ಪೋರ್ಟಿನಲ್ಲಿ ಇರುವಾಗ ಇದ್ದಕ್ಕಿದ್ದಂತೆ ತನ್ನ ದೇಶದ ಹಾಗೂ ಪಾಸ್ಪೋರ್ಟ್ ನ ಮಾನ್ಯತೆಯನ್ನು ಕಳೆದುಕೊಂಡು ಬಿಕ್ಕಟ್ಟಿನಲ್ಲಿ ಸಿಲುಕಿಸುವ ಪ್ರಸಂಗವನ್ನು ಕಲಾತ್ಮಕವಾಗಿ ಚಿತ್ರಸಲಾಗಿದೆ.
ಮನಿ ಹೈಸ್ಟ್
Money Heist
ತನ್ನನ್ನು ಪ್ರೊಫೆಸರ್ ಎಂದು ಕರೆದುಕೊಳ್ಳುವ ಒಬ್ಬ ಕ್ರಿಮಿನಲ್ ಮಾಸ್ಟರ್ ಮೈಂಡ್ ಒಂದು ದೊಡ್ಡ ಡಕಾಯಿತಿ ಗೆ 8 ಕುಶಲ ವ್ಯಕ್ತಿಗಳನ್ನು ಆಯ್ಕೆ ಮಾಡಿ ಯೋಜನೆಯೊಂದನ್ನು ತಯಾರಿಸುತ್ತಾನೆ.ಇತ್ತೀಚೆಗೆ ತುಂಬಾ ಜನಪ್ರಿಯಗೊಂಡ ವೆಬ್ ಸಿರಿಸ್ ಇದು.
ಟೇಕ್ ಆಫ್
ಸಮೀರಾ ಎಂಬ ಭಾರತೀಯ ನರ್ಸ್ ಒಬ್ಬಳು ಇರಾಕ್ ನಲ್ಲಿ ಕೆಲಸ ಮಾಡುತ್ತಿದ್ದಾಗ ಭಯೋತ್ಪಾದಕರಿಂದ ಅಪಹರಣಕ್ಕೆ ಒಳಗಾಗುತ್ತಾಳೆ. ಮನೋಜ್ ಎಂಬ ಭಾರತೀಯ ರಾಯಭಾರಿ ತನ್ನ ಜಾಣ್ಮೆಯಿಂದ ಈ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತಾನೆ ಎಂಬುದರ ಕತೆ ಇದು.
ಮಾರ್ಕೊ ಪೋಲೊ
(Marco Polo) ಇದೊಂದು ನವರಸಭರಿತ ಮಹಾ ಕಥನ. ಅನೇಕ ತಿರುವುಗಳನ್ನು ಪಡೆದುಕೊಂಡು ಸಾಗುವ ಈ ವೆಬ್ ಸೀರೀಸ್ ಮಂಗೋಲಿಯ ರಾಜಮನೆತನ ಸಂಸ್ಕೃತಿಯ ಪರಿಚಯವನ್ನು ಮಾಡಿಕೊಡುತ್ತದೆ. ಇಲ್ಲಿ ಎಲ್ಲವೂ ಇದೆ. ಚಿಕ್ಕ ಮಹಾಭಾರತ ಇದ್ದ ಹಾಗೆ.
ಹರ ಹರ ಮಹಾದೇವ
ಜನಪ್ರಿಯ ಪೌರಾಣಿಕ ಸೀರಿಸ್ ಹಾಟ್ ಸ್ಟಾರ್ ನಲ್ಲಿ ಪ್ರಸಾರವಾಗ್ತಿದೆ.
ದ ಮೆಂಟಾಲಿಸ್ಟ್
ಅಮೇರಿಕನ್ ಕ್ರೈಮ್ ತನಿಖಾ ಕಥೆಗಳಿಗೆ ಸಂಬಂಧ ಪಟ್ಟಿದ್ದು. ಪಾಟ್ರಿಕ್ ಜೇನ್ ಎಂಬಾತನು ತನ್ನ ಬುದ್ಧಿ ಮತ್ತೆಯಿಂದ ಅಪರಾಧಗಳನ್ನು ಕಂಡುಹಿಡಿಯುವ ಕಥೆಗಳು.
ಮತ್ತು ವದಲರಾ
ತುದಿಗಾಲಲ್ಲಿ ಕುಳಿತು ನೊಡುವಂತಹ ಥ್ರಿಲ್ಲರ್..
ಮಿಸ್ಸಿಂಗ್ ಇನ್ ಆಕ್ಷನ್ (MIA)
ಸಾಹಸಭರಿತ ಚಿತ್ರ, ಯೂಟ್ಯೂಬ್ ನಲ್ಲೂ ಸಿಗುತ್ತವೆ.
ದ ಪರ್ಜ್
The Purge
ಇದು ಹೊರ್ರರ್, ಥ್ರಿಲ್ಲರ್ ಸೀರೀಸ್..
ತುಂಬ್ಬಡ್
ಭಯಾನಕ ಚಿತ್ರಗಳೂ ಕಲಾತ್ಮಕ, ಕೂತೂಹಲಕಾರಿ ಆಗಿ ಕ್ಲಾಸಿಕ್ ನಿರೂಪಣೆಯೊಂದಿಗೆ ಇರಬಹುದೇ ಎನ್ನುವ ಪ್ರಶ್ನೆಗೆ ಉತ್ತರ ತುಂಬ್ಬಡ್.. ಒಂದೇ ಏಟಿಗೆ ನೋಡಬಲ್ಲ, ಉತ್ತಮ ಸಿನೆಮಾಟೊಗ್ರಫಿ ಇರುವ ಚಿತ್ರ ಇದು..
ನಿಮ್ಮ ಮೆಚ್ವಿನ ಚಿತ್ರ, ವೆಬ್ ಸಿರೀಸ್ ಸಲಹೆಗಳನ್ನು ಇಲ್ಲಿ ಸಲ್ಲಿಸಬಹುದು..
ಹೆಚ್ಚಿನ ಬರಹಗಳಿಗಾಗಿ
ಹಿಂದಿ ಹೇರಿಕೆ ಸರಿಯೇ?
ಸ್ವೀಡನ್ ಚುನಾವಣಾ ಸಮರ ೨೦೨೨
ಸ್ವಾತಂತ್ರ್ಯದ ಅಮೃತೋತ್ಸವ – ೭೫ ರ ಭಾರತ