- ಜುಗಲ್ ಬಂಧಿ - ಆಗಸ್ಟ್ 1, 2021
- ಪಂದ್ಯ - ಜೂನ್ 8, 2021
- ಕೆಲವು ಚುಟುಕುಗಳು - ಮೇ 18, 2021
೧.
ಇಳಿಸಂಜೆಯಲಿ ನೀ
ಬಂದು ನಿಂತೆ.
ಮನದಲಿ ಉಳಿದು ಬಿಟ್ಟೆ.
ನಾ ಕರಗಿ ಹೋದೆ.
೨.
ಒದ್ದೆ ಕೂದಲ ಕೊಡವಿ
ಮುಂಗುರುಳ ಸರಿಸಿ
ಆಗಷ್ಟೇ ಅರಳಿದ
ಮಲ್ಲಿಗೆ ಮುಡಿಯೇರಿದೆ
ಪರಿಮಳದ ಜೊತೆಗೆ
ನಿನ್ನ ನೆನಪು ಸೇರಿದೆ.
೩.
ಏನನ್ನೂ ಧ್ಯಾನಿಸಲು
ಆಗುತ್ತಿಲ್ಲ….
ಮೌನದಲಿ ನೀ ಜೊತೆಗಿರಲು
ಶಬ್ದಗಳ ನೂಕುನುಗ್ಗಲು….
ತುಟಿಯಂಚಲಿ ಕಿರುನಗೆ.
೪.
ಒಮ್ಮೊಮ್ಮೆ …
ಕಣ್ಣು ಕಣ್ಣು ಮಾತಾಡುವುದ
ಮರೆತಿದ್ದರೂ
ನಾವೆಷ್ಟೇ ದೂರ ಇದ್ದರೂ
ನೆನಪು ಹಾಜರಾಗಿ
ನಿನ್ನೊಳಗೆ ನಾನಿರುವೆ ಎಂದಿದೆ.
೫.
ಎಂಥಾ ಹುಚ್ಚಾಟ!
ಹರವಿದ ಮುಂಗುರುಳಲಿ
ಅಡಗಿದೆ ಕಿವಿಯೋಲೆ
ಆಗಾಗ ಕೆನ್ನೆ ಸವರಿ
ನಡುವೆ ಉಳಿದ
ನೆನಪ ಹಂಚಿದೆ.
೬.
ಅದೆಷ್ಟೋ ದಿನಗಳಿಂದ
ಕಾಪಿಟ್ಟುಕೊಂಡ ಒಲವು.
ಇಂಚಿಂಚಾಗಿ ನೆನಪಿಗಿಳಿಸಿ
ಕಣ್ಣ್ ರೆಪ್ಪೆಯ ಬಾಚಿ ತಬ್ಬಿದೆ.
೭.
ಸಖ,
ತುಟಿಯಂಚಿನ ಸವಿಮಾತು
ಎದೆ ಬಡಿತ ಹೆಚ್ಚಿಸಿದೆ.
ಒಲವ ಕುರಿತು
ಗುರುತು ನೀಡಿ…
ಎದೆ ಎದೆಗೆ ಹಂಚಿವೆ.
೮.
ನಾಜೂಕಾಗಿ ಉಟ್ಟ ಸೀರೆ
ಸೆರಗು ಗಾಳಿಗುಂಟ
ಮುಗಿಲ ಚುಂಬಿಸಿ…
ಹರಡಿ ನಿಂತ ಮೋಡಗಳಿಗೆ
ಬಣ್ಣ ಬಳಿದಿದೆ
ರಂಗು ಹೀರಿ ಮೋಡಗಟ್ಟಿ
ನಿನ್ನೂರಿಗೆ ಮಳೆ ಸುರಿದಿದೆ.
ಸಣ್ಣ ಆತಂಕ
ಮತ್ತೆ ಒಲವಾದೀತು ಜೋಕೆ!
೯.
ಗದ್ದಲದ ನಡುವೆ
ಅವಳ,
ಹೆಜ್ಜೆ ಗೆಜ್ಜೆ ಸದ್ದು..
ಎದೆ ಇರಿದು ಕೊಲ್ಲಲು
ಇಷ್ಟು ಸಾಕು
ಅಲ್ಲವೇ ?
ಹೆಚ್ಚಿನ ಬರಹಗಳಿಗಾಗಿ
ಪತ್ತಂಗಿ ಎಸ್ ಮುರಳಿ ಆಯ್ದ ೧೦ ಚುಟುಕುಗಳು
ಪ್ರೀತಿ
ಬಾ ವರ್ಷಧಾರೆ…