- ಕೆಟ್ಟಿದ್ದು ಕಾಲವಲ್ಲ ಮತ್ತು ಒಡಲ ನುಡಿಗಳು - ಮಾರ್ಚ್ 25, 2023
- ಕಲಿಕೆಯ ಮಾಧ್ಯಮವಾಗಿ ಕನ್ನಡ - ನವೆಂಬರ್ 27, 2022
- ಮನೆಯೊಳಗೆ ಮನೆಯೊಡೆಯರಿಲ್ಲ - ಅಕ್ಟೋಬರ್ 23, 2022
ಬುಧವಾರ ಕುಮಟೆಲಿ ಸಂತೆ -ತರ
ತರದ ತರಕಾರಿ ತರಬಹುದಂತೆ
ಕತಗಾಲ ಹೆಗಡೆ ಕೂಜಳ್ಳಿ-ಮತ್ತೆ
ಹತ್ತಿರದ ಎಷ್ಟೊಂದು ಊರುಗಳು ಹಳ್ಳಿI
ಬೆಳ ಬೆಳಗೇ ಹಳ್ಳಿಗರು ಬಂದು-ವಿಧ
ವಿಧದ ತರಕಾರಿಗಳ ಹೊತ್ತು ತಂದು
ಕೂಗಿ ಮಾರುವರಕ್ಕ ಬನ್ನಿ-ಒಳ್ಳೆ
ತರಕಾರಿಗಳ ಕೊಂಡು ತಿನ್ನಿ
ಹೀರೇಕಾಯ್ ಬದನೆಕಾಯ್ ಬೆಂಡೆ- ಮತ್ತೆ
‘ಬಸಳೆಯೂ’ ಗಿಡಬಸಳೆ ಕೆಂಪ್ ಹರಗೆ ತೊಂಡೆ
ಕೂಗಿ ಮಾರುವರಣ್ಣ ಬನ್ನಿ-ಒಳ್ಳೆ
ತರಕಾರಿಗಳ ಕೊಂಡು ತಿನ್ನಿ
ಬಯಲುಸೀಮೆಯ ಮಂದಿ ಬಂದು- ವಿಧ
ವಿಧದ ಸೊಪ್ಪು ಧಾನ್ಯಗಳ ತಂದು
ಕೂಗುವರು ಬಾರವ್ವ ಅಕ್ಕಾ-ಒಳ್ಳೆ
ಸೊಪ್ಪು ಕಾಳು ಬೇಳೆ – ಬೇರೆಲ್ಲೂ ಸಿಕ್ಕಾ
ಕೊಳ್ಳಿರಿ ಇನ್ನೀಟು ಅಕ್ಕಾ- ಎಲ್ಲಾ
ತಾಜಾ ಅದಾವು ಗ್ಯಾರಂಟಿ ಪಕ್ಕಾ
ಗುಲಾಬಿ ಗೊಂಡೆ ಸೇವಂತಿ- ನೋಡಿ
ಮೂಸಿದರೆ ಈಗಲೇ ಕೊಳ್ಳಬೇಕಂತಿ
ಸಂತೇಲಿ ಜನರು ಭರಪೂರಾ- ಅಬ್ಬಾ
ಕೊಳ್ಳುವರು ಹಣ್ಣು ತರಕಾರಿಗಳ ಪೂರಾ
ಕಾಲೇಜು ಬ್ಯಾಂಕು ಎಲ್ಲೈಸಿ-ಮತ್ತೆ
ಬಿಯೆಸ್ಸೆನ್ನೆಲ್ಲು – ಕೆಲಸ ಪೂರೈಸಿ
ಕೊಳ್ಳುವರು ಸೊಪ್ಪು ಕಾಳುಗಳ- ಓಹೋ
ಜನರಿಂದು ಬಂದಿಹರು ಬಹಳ
ಸಂತೆ ಮಾಡುವರೆಲ್ಲ ಭಾರಿ – ಮತ್ತೆ
ಹೇಳುವರು ಯಾಕೋ ರೇಟೇ ದುಬಾರಿ
ಭಾರೀ ಮಜ ಬಂದಿದೆ ಸಂತೆಗೆ- ಹೋಯ್
ಮಳೆ ಬರುವ ಹಾಂಗೀದು ಈ ಸಂಜೆ ಸಂತಿಗೆ
ಆದರೂ ವ್ಯಾಪಾರ ಜೋರು- ತಾಜಾ
ತರಕಾರಿ ಯಾರು ಬೇಡ ಅಂದಾರು?
ಎಲ್ಲಾ ಸಾಮಾನೂ ಖಾಲಿ-ಆಹಾ
ಮುಗಿಯಿತು ಇವತ್ತು ಸಂತೆಯ ಪಾಳಿ
ಬರುವುದು ಮತ್ತೆ ಬುಧವಾರ- ನಾವು
ಕಾಯುವೆವು ಮತ್ತೆ ಬಿರುಸು ವ್ಯಾಪಾರ..
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ