ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಬೆಳಕಿನ ಹಬ್ಬ ದೀಪಾವಳಿ.

ರಾಜೇಶ್ವರಿ ವಿಶ್ವನಾಥ್
ಇತ್ತೀಚಿನ ಬರಹಗಳು: ರಾಜೇಶ್ವರಿ ವಿಶ್ವನಾಥ್ (ಎಲ್ಲವನ್ನು ಓದಿ)

ದೀಪ ದರ್ಶನ.
ಶುಭಂ ಕರೋತಿ ಕಲ್ಯಾಣಂ ಆರೋಗ್ಯಂ ಧನ ಸಂಪದಾ,ಶತ್ರು ಬುದ್ಧಿ ವಿನಾಶಾಯ ದೀಪ ಜ್ಯೋತಿ ನಮೋಸ್ತುತೆ, ದೀಪ ಜ್ಯೋತಿ ಪರಬ್ರಹ್ಮ ದೀಪಜ್ಯೋತಿ ಜನಾರ್ಧನ,ದೀಪೋ ಹರತು ಮೇ ಪಾಪಂ ದೀಪ ಜ್ಯೋತಿ ನಮೋಸ್ತುತೆ.
    ಈ ಶ್ಲೋಕದಲ್ಲಿ ಹೀಗೆ ವಿವರಿಸಲಾಗಿದೆ,

ಎಲೈ ದೀಪ ಜ್ಯೋತಿಯೇ — ನೀನು ನಮ್ಮ ಶುಭವನ್ನು ಕೋರುವ, ಕಲ್ಯಾಣ ಮಾಡುವ,ಆರೋಗ್ಯ ಮತ್ತು ಧನ ಸಂಪತ್ತು ನೀಡುವ,ವೈರಿ ಬುದ್ಧಿ ಸಂಹರಿಸುವ ದೀಪ ಜ್ಯೋತಿಯೇ ನಿನಗೆ ಪ್ರಣಾಮ.ಹೇ ದೀಪ ಜ್ಯೋತಿಯೇ ನೀನು ಪರಬ್ರಹ್ಮ,ಹಾಗೂ ಜನಾರ್ಧನನಾಗಿರುವೆ.ನೀನು ನಮ್ಮ ಪಾಪ ಕರ್ಮವನ್ನು ಕಳೆಯುವವಳು.ದೀಪ ಜ್ಯೋತಿಯೇ ನಿನಗೆ ನಮಸ್ಕಾರ!.

          ಮತ್ತೆ ಬಂದಿದೆ ದೀಪಾವಳಿ, ದೀಪಗಳ ಸಾಲು, ದೀಪಗಳ ಹಬ್ಬ. ತಾನೂ ಬೆಳಗಿ ಇತರರಿಗೂ ಪ್ರಕಾಶ ನೀಡುವ ಸಂದೇಶದ ಸಂಕೇತವಾಗಿ ಈ ಹಬ್ಬ ಸಾಮಾಜಿಕ ಅನ್ಯೋನ್ಯತೆಯ ಗುರುತಾಗಿದೆ.ಆದರೆ “ದೀಪ” ಎಷ್ಟೇ ಚಿಕ್ಕದಾಗಿದ್ದರೂ ಅದೊಂದು ಮಹಾಶಕ್ತಿ ದೇವತೆ,ಪರಮ ಪೂಜನೀಯ, ನಮಗೆ ಜ್ಞಾನ, ಶಕ್ತಿ ನೀಡುವ ದೇವತೆ.ಇಂತಹ ಪರಮ ಪವಿತ್ರ ದೀಪಾರಾಧನೆಯಲ್ಲಿ ದೀಪದರ್ಶನ ಕುರಿತು ಒಂದು ಚಿಂತನೆ ನಾವು ಮಾಡಬೇಕಾದ್ದು ಕೂಡ ಅಷ್ಟೇ ಮಹತ್ವದ್ದು.
ಜ್ಞಾನ ರೂಪಿ ದೀಪ.
        ಪ್ರಕಾಶದ ಆಗಮನವಾದಂತೆ ಅಲ್ಲಿಂದ ಅಂಧಕಾರದ ಪಲಾಯನ ಮತ್ತು ಎಲ್ಲಿ ಪ್ರಕಾಶ ಅಲ್ಲಿ ಮಂಗಳದ ಶುಭಾಗಮನ. ಎಲ್ಲಿ  ಶುಭವಾಗಿರುವುದೋ ಅಲ್ಲಿ ಆರೋಗ್ಯ ಮತ್ತು ಧನ ಸಂಪತ್ತು ಇರುವುದು. ಬುದ್ಧಿಯು ಪ್ರಕಾಶಮಾನವಾದಾಗ ಶತ್ರುವಿನ ಬುದ್ಧಿ ಕುಂಠಿತಗೊಳ್ಳುವುದು.ಇದರಿಂದ ಶತ್ರುಗಳು ವಿನಾಶ ನಿಶ್ಚಿತ. ಕಾಮ, ಕ್ರೋಧ, ಲೋಭ,ಮೋಹ, ಮದ, ಮತ್ಸರ,ಈ ಷಡ್ವೈರಿಗಳು ದೇಹದಲ್ಲಿ ನೆಲೆಸಿವೆ. ಜೀವನದಲ್ಲಿ ಪ್ರಕಾಶ ಬೆಳಗಿ ಜ್ಞಾನರೂಪಿ ದೀಪವು ಪ್ರಕಟಗೊಂಡಾಗ ಎಲ್ಲ ವೈರಿಗಳು ಪಲಾಯನ ಗೈಯುವವು.ಮಾನವನ ಪಾಪದ ಕಾರಣ ಅಜ್ಞಾನ, ಹಾಗೇ ಈ ಅಜ್ಞಾನದ ಕತ್ತಲೆಗೆ ದೂರ ಮಾಡುವ ಸಾಧನ ದೀಪ. ನಮ್ಮ ಜೀವನದಲ್ಲಿ ಜ್ಞಾನದ ಪ್ರಕಾಶ ತಂದು ಅಜ್ಞಾನದ ಕುರುಡುತನವನ್ನು ದೂರ ತಳ್ಳುತ್ತದೆ.
ದೀಪ ದರ್ಶನ
       ಪ್ರಸ್ತುತ ಇಂದು ವಿಜ್ಞಾನ ಯುಗದಲ್ಲಿ ಸಮಸ್ತ ವಾತಾವರಣವನ್ನು ವಿದ್ಯುತ್ ಶಕ್ತಿಯು ಬೆಳೆಗುತ್ತದೆ ಅಂಥಾ ವೇಳೆಯಲ್ಲಿ ಆಧುನಿಕ ಮಾವನ ಜ್ಯೋತಿ ಬೆಳಗಿ ಅದಕ್ಕೆ ಒಮ್ಮೆ ನಮಸ್ಕಾರ ಮಾಡುವುದು ಒಂದು ಕರ್ತವವೇ ಸರಿ. ಪುರಾತನ ಕಾಲದಲ್ಲಿ ಯಾವಾಗ ವಿಜಯದ ಅವಶ್ಯಕತೆ ಎಂದು ಕಂಡುಬಂದರೆ ಆಗ ದೀಪವು ನಿರಂತರ ಬೆಳಗಿದರೆ ಮತ್ತು ಪ್ರಾರ್ಥನೆ ಮಾಡಿದರೆ ಸುಯೋಗ ವಾಗುವುದೆಂದು ನಂಬುತ್ತಿದ್ದರು. ಇಲ್ಲದಿದ್ದರೆ ದೀಪ ಶಾಂತವಾದರೆ ಕಾರ್ಯವು ಅಪೂರ್ಣವಾಗುವುದೆಂದು ನಂಬುತ್ತಿದ್ದರು. ಈಗಿನ ಪ್ರಸ್ತುತ ದಿನದ ಪರಿಸ್ಥಿತಿಯಲ್ಲಿ ಕಾಲ ಪರಿವರ್ತನೆ ಆಗಿರುವುದು.

ಈಗಿನ ವಿಜ್ಞಾನ ಮಾನವನ ಬೌದ್ಧಿಕ ವಿಕಾಸದ ಶಿಖರಕ್ಕೆ ತಲುಪಿದೆ. ಅದಕ್ಕೆ ದೀಪದ ಬೆಳಕು ಅನಿರ್ವಾಯವಾಗಿದೆ.  ಬೆರಳಿನಿಂದ ವಿದ್ಯುತ್  ಗುಂಡಿ ಒತ್ತಿದರೆ ದೀಪವು  ಬೆಳಗಲೇಬೇಕು,ಇಂಥ ಸಮಯದಲ್ಲಿ ಜ್ಯೋತಿಗೆ ನಮಸ್ಕಾರ ಮಾಡೋದು ಯಾಕೆ? ನಮ್ಮ ಪೂರ್ವ ಜನರು ಪವಿತ್ರಮಾಯ ದೀಪದರ್ಶನಕ್ಕೆ ಪ್ರಾಧಾನ್ಯ ನೀಡಿದ್ದಾರೆ. ಅದರ ಹಿಂದೆ ಋಣಯುಕ್ತ  ಮತ್ತು ಕೃತಜ್ಞ ಭಾವನೆ ಅಡಗಿದೆ. ದೀಪಕ್ಕೆ ಹಾಕುವ ಎಣ್ಣೆಯು ಬತ್ತದ ಪ್ರೀತಿಯ ಸಂಕೇತ. ಬತ್ತಿ ಕಾಯಕದ ಸಂಕೇತ.ಒಟ್ಟಿನಲ್ಲಿ ತಾನು ಉರಿದು ಇತರರಿಗೂ ಬೆಳಕು ನೀಡುವ ದೀಪವು ನಿಷ್ಕಾಮ ಸೇವೆಯನ್ನು ಮಾಡುತ್ತದೆ. ಈ ದೀಪವು ಬಹುಜನರಿಗೆ ಪ್ರೇರಣೆ ನೀಡುವುದು. ತನ್ನಂತೆ ಇತರರು ಬೆಳಗಲಿ ಎಂಬುದೇ ಇದರ ಸಂದೇಶ.
      ನಿರಂತರವಾಗಿ ಬಳಸುವ ಜ್ಞಾನ ಜ್ಯೋತಿಯ ಬೆಳಕು ನಂದಾದೀಪದಂತೆ ಗರ್ಭಗುಡಿಯಲ್ಲಿ ನಂದಾದೀಪದ ಬೆಳಕಿನಿಂದ ನಾವು ಮೂರ್ತಿಯ ದರ್ಶನ ತೆಗೆದುಕೊಳ್ಳುತ್ತೇವೆ.ಅದೇ ರೀತಿಯಲ್ಲಿ ಅಂಧಕಾರದಲ್ಲಿ ಇರುವ ಜನರಿಗೆ ತಿಳುವಳಿಕೆ ನೀಡಲು ಮಾನವನ ಅಖಂಡವಾದ ಆತ್ಮಜ್ಯೋತಿ ಯಿಂದ ಬೆಳಗಬೇಕು. ಹೀಗೆ ಜೀವನದ ಮಾರ್ಗವನ್ನು ನಮಗೆ ತೋರಿಸುತ್ತದೆ.ಸೂರ್ಯಸ್ತ ವಾಗುತ್ತಲೆ ಎಲ್ಲಾ ಕಡೆಗೂ ಕತ್ತಲೆ ಆವರಿಸುತ್ತದೆ. ಸೂರ್ಯನಿಗೆ ಪರಿಹಾರವಾದ ವ್ಯವಸ್ಥೆ ಯಾವುದಿದೆ ಹೇಳಿ?
ಹಣತೆಗೆ ನಮಸ್ಕಾರ.

           ಚಿಕ್ಕದಾದ ಮಣ್ಣಿನ ಹಣತೆ ಈ ಕೆಲಸ ಮಾಡುತ್ತದೆ. ಅಣತಿಯ ಚಿಕ್ಕದಿರಬಹುದು, ಕಡಿಮೆ ಬೆಲೆಯ ಆಗಿರಬಹುದು ಆದರೆ ಅದು ನೀಡುವ ಪ್ರಕಾಶ ಅನನ್ಯ, ಅಗಮ್ಯವಾದುದು. ಯಥಾಶಕ್ತಿ  ಬೆಳಗುತ್ತಿರುವ ನಮಗೆ ಬೆಳಕನ್ನು ಕೊಟ್ಟು ಜೀವನದ ದಾರಿಯನ್ನು ತೋರಿಸುವ  ಈ ಹಣತೆಯ ಪಾದಕ್ಕೆ ನಮಸ್ಕರಿಸಿ ಬೇಕು.
       ಒಂದು ದೀಪದಿಂದ ನೂರಾರು,ಸಾವಿರಾರು, ದೀಪಗಳನ್ನು ಬೆಳಗಿಸಬಹುದು. ಹಾಗೆಯೇ ಒಬ್ಬ ಜ್ಞಾನಿಯು ನೂರಾರು, ಸಾವಿರಾರು ಅಜ್ಞಾನಿಗಳನ್ನು ಜ್ಞಾನಿ ಗಳನ್ನಾಗಿ ಪರಿವರ್ತಿಸಬಹುದು.
ಶಾಂತಿ ಸಂದೇಶ
.

      “ಅಸತೋಮಾ ಸದ್ಗಮಯ ತಮಸೋಮಾ ಜ್ಯೋತಿರ್ಗಮಯ ಮೃತ್ಯೋರ್ಮಾ ಅಮೃತಂಗಮಯ”.
        ಮಾನವನ ಯಾತ್ರೆಯು ಅಸತ್ಯದಿಂದ ಸತ್ಯದ ಕಡೆಗೆ, ಕತ್ತಲಿಂದ ಬೆಳಕಿನ ಕಡೆಗೆ ಹಾಗೆಯೇ ಮೃತ್ಯುವಿನಿಂದ ಅಮರತ್ವದವರೆಗೆ ಸಾಗಬೇಕು. ಮಾನವನು ಸಹಜವಾಗಿ ದೀಪದ ರೀತ್ಯಾ ಬೆಳಗುತ್ತಾ ಜೀವನ ಮಾರ್ಗದಲ್ಲಿ ಪ್ರಕಾಶ ಪ್ರಸರಿಸುವ ಮಹಾಪುರುಷನಾಗಬೇಕು. ದಾರ್ಶನಿ ಕನಾಗಿ ಬೆಳಗಬೇಕು. ಬೆಳಕು ನೀಡಿ ಪ್ರಪಂಚಕ್ಕೆ ಪ್ರಕಾಶ ಕೊಡುವ ನಂದಾದೀಪವಾಗಬೇಕು. ಪ್ರೇಮ, ಪ್ರೀತಿ, ಅಂತಃಕರಣ ಹಾಗೂ ಶಾಂತಿ ಉಂಟುಮಾಡುವ ಸಂದೇಶ ಈ ಹಣತೆಯಲ್ಲಿ ಅಡಗಿದೆ. ಕಡೆಗೆ ಅದು ಜೀವನದರ್ಶನ ಮಾಡಿದರೆ ದೀಪ ದರ್ಶನವು ಸಾರ್ಥಕವಾಯಿತೆಂದು  ಬಗೆಯೋಣ.ಅಂಥ ದೀಪಾವಳಿಯ ಸಡಗರ ಸಂಭ್ರಮದಲ್ಲಿ ಕವಿವರ್ಯ ರವೀಂದ್ರನಾಥ ಟ್ಯಾಗೂರ್ ರವರ ಈ ದಿವ್ಯ ಸಂದೇಶ ಅಡಗಿದೆ. “ಸೂರ್ಯನು ಮುಳುಗಿದ್ದಾನೆ. ಕತ್ತಲೆಯು ಆವರಿಸಿದೆ. ಆದರೆ ಮೂಲೆಯಲ್ಲಿ ಕುಳಿತ ಹಣತೆಯು ಚಿಕ್ಕದಾದರೂ ಸೂರ್ಯನಿಗೆ ಪರ್ಯಾಯವಾಗಿ ಕೆಲಸ ಮಾಡುತ್ತದೆ”.

    ಪ್ರತಿಯೊಬ್ಬರೂ ಈ ದೀಪಾವಳಿಯ ಸಮಯದಲ್ಲಿ ದೀಪವನ್ನು ಬೆಳಗಿಸಿ ನಮಸ್ಕರಿಸಿ, ಅಜ್ಞಾನವೆಂಬ ಕತ್ತಲೆ ಓಡಿಸಿ, ಜ್ಞಾನದ ಕಡೆಗೆ ಹೋಗೋಣ.