- ಕಾನ್ ಬಾನ್ - ನವೆಂಬರ್ 12, 2020
- ನಾಳೆ ಶನಿವಾರ…! - ಸೆಪ್ಟೆಂಬರ್ 18, 2020
- ಭೂಮಿಗೆ ಗಾಯವಾದೀತು - ಸೆಪ್ಟೆಂಬರ್ 5, 2020
ಭಾಗ-1
“ನಾವು ಯಾವತ್ತು ಅಲ್ಪ ಸಂಖ್ಯಾರಾಗಿಯೆ ಇರುತ್ತೇವೆ.ಈ ಬಹು ಸಂಖ್ಯಾತ
ಜನಾಂಗದ ಮಧ್ಯೆ ನಾವೇನಾದರು ಹಾಗೆಯೆ ನಮ್ಮ ಧ್ವನಿ ಎತ್ತದೇನೆ ಉಳಿದೆವೆಂದು ಕೊಂಡರೆ ಮುಂದಿನ ನಮ್ಮ ಪೀಳಿಗೆ
ನಮ್ಮ ಈ ತಪ್ಪಿಗೆ ಎಂದು ಕ್ಷಮಿಸದು. ನಾವು ಹೀಗೆಯೆ ಬಹುಸಂಖ್ಯಾತ ಜನಾಂಗದಿಂದ ಪ್ರತಿ ಕ್ಷಣವೂ ತುಳಿತಕ್ಕೊಳಗಾಗುತ್ತಾ
ನಮ್ಮ ಅಸ್ತಿತ್ವವನ್ನೆ ಕಳೆದು ಕೊಳ್ಳಬೇಕಾಗುತ್ತೆ. ಈ ಒಂದು ಮರ್ಮಘಾತದಿಂದ ತಪ್ಪಿಸಿಕೊಳ್ಳುವುದಕ್ಕೆ ಇರುವ ಒಂದೇ ಒಂದು
ಉಪಾಯವೆಂದರೆ, ಅದು ನಾವು ಈ ‘ನಲ್ಮಿಯಾ’ ರಾಷ್ಟ್ರದಿಂದ ಹೊರ ಹೋಗಿ ‘ಒಲ್ಮಾ’ವನ್ನು ಸ್ಥಾಪಿಸುವುದು.ಮುಂದೆ
ಹಾಗೇನಾದರು ‘ಒಲ್ಮಾ’ ರಚನೆಯಾಗಿದ್ದೆಯಾದರೆ, ಎಲ್ಲವೂ ನಮ್ಮ ಕೈಯಲ್ಲಿಯೆ ಇರುತ್ತದೆ.ರಾಷ್ಟ್ರದ
ಸಂವಿಧಾನ,ಕಾನೂನುಗಳು ಮತ್ತು ಧಾರ್ಮಿಕ ಕಟ್ಟಳೆಗಳನ್ನು ನಾವು ನಮಗೆ ತಕ್ಕಂತೆ ರಚಿಸಿಕೊಳ್ಳ ಬಹುದು.” ಎಂದು ಆ ಕಕ್ಕಿರಿದು ತುಂಬಿದ್ದ ಸಭೆಯಲ್ಲಿ
ಒಲ್ಮಾ ತನ್ನ ಗಂಟಲಿನ ನರಗಳು ಕಿತ್ತು ಹೋಗುವಂತೆ ಭಾಷಣ ಮಾಡುತ್ತಿದ್ದನು.ಆ ಸಭೆಯ ಬಹುತೇಕರು ಒಲ್ಮಾ
ಭಾಷಣದಿಂದ ಸಮ್ಮೋಹನಕ್ಕೆ ಒಳಗಾದವರಂತೆ ಒಲ್ಮಾಗೆ ಜಯಕಾರ ಹಾಕತ್ತಿದ್ದರು.ಅಲ್ಲದೆ ಇನ್ನು ಆಕಾರವನ್ನೆ ಪಡೆಯದ
ರಾಷ್ಟ್ರದ ಕನಸನ್ನು ಸಾಕಾರವಾಯಿತೆನ್ನುವಂತೆ ಭಾವೋದ್ಗೇಕ್ಕೆ ಒಳಗಾಗಿ ಒಲ್ಮಾನ ಭಾಷಣದಲ್ಲಿ ಒಂದಾಗಿದ್ದರು.ಒಲ್ಮಾ ಹಾಗೆ
ಆವೇಶ ಭರಿತವಾಗಿ ಭಾಷಣ ಮಾಡುತ್ತಿದ್ದರೆ, ಆ ಜನ ಸಂದಣಿಯಿಂದ ಇಣುಕಲು ಹರ ಸಾಹಸ ಪಡುತ್ತಲಿದ್ದ ಬೆಕ್ಕಿನ
ಕಣ್ಣುಗಳಂತೆ ಮಿಂಚುತ್ತಲಿದ್ದ ಕಣ್ಣುಗಳ ಕಡೆಗೆ ಒಲ್ಮಾನ ಗಮನ ಹರಿಯಿತು.ಆ ಬೆಕ್ಕಿನ ಕಣ್ಣುಗಳನ್ನು ಇದೆ ಮೊದಲಲ್ಲ, ಹೀಗೆಯೆ
ಹಿಂದೆ ನಡೆದ ಸಭೆಗಳಲ್ಲಿಯೂ ಸಹಾ ಗಮನಿಸಿದ್ದನು, ಒಲ್ಮಾ. ಅಲ್ಲದೆ ಇನ್ನೊಂದು ಸ್ವಾರಸ್ಯಕರವಾದ ವಿಚಾರ ಒಲ್ಮಾ
ಗಮನಕ್ಕೆ ಬಂದದ್ದೆಂದರೆ ಎಲ್ಲಿಯೆ ಒಲ್ಮಾ ಭಾಷಣವಿರಲಿ ಆ ಕಣ್ಣುಗಳು ಒಲ್ಮಾನನ್ನು ಹಿಂಬಾಲಿಸುತ್ತಿದ್ದವು.
ಮುಂದಿನ ದಿನಗಳಲ್ಲಿ ನಡೆದ ಸಭೆಗಳಲ್ಲಿಯೂ ಒಲ್ಮಾನನ್ನು ಆ ಕಣ್ಣುಗಳು ಹಿಂಬಾಲಿಸಿದ್ದವು.ಮೊದಲಿನ ಸಭೆಗಳಲ್ಲಿ ಒಲ್ಮಾ
ಆ ಕಣ್ಣುಗಳನ್ನು ಗಮನಿಸಿದಾಗ ಅಷ್ಟೇನು ವಿಶೇಷವೆನ್ನಿಸಲಿಲ್ಲ.ಆದರೆ ನಂತರದ ಸಭೆಗಳಲ್ಲಿಯೂ ಅದೇ ಕಣ್ಣುಗಳನ್ನು
ನೋಡಿದಾಗ ಆ ಕಣ್ಣುಗಳು ಆಕರ್ಷಿಕವಾಗಿ ಕಾಣಿಸಿದವು ಅಲ್ಲದೆ ನಿಧಾನವಾಗಿ ಆ ಕಣ್ಣುಗಳೆಡೆಗೆ ಒಲ್ಮಾ
ಆಕರ್ಷಿತರಾದನು.ಒಲ್ಮಾನ ಗಮನ ಆ ಕಣ್ಣುಗಳ ಕಡೆ ಹರಿದಾಗ ತನ್ನ ಆವೇಶ ಭರಿತವಾಧ ಭಾಷಣದ ಕೊಂಡಿಗಳು ತಪ್ಪಿ
ಹೋಗುತ್ತಿದ್ದವು ಮತ್ತು ಯಾವುದೆ ಕಾರಣವಿಲ್ಲದೆ ಆಕಸ್ಮಿಕವಾಗಿ ವಿಷಯಾಂತರವಾಗುತ್ತಿತ್ತು.
ಅದೊಂದು ‘ಒಲ್ಮಾ’ ರಾಷ್ಟ್ರದ ವಕಾಲತ್ತು ವಹಿಸುವ ಮತ್ತೊಂದ ಸಭೆ. ಆ ಸಭೆ ತುಂಬಾ ವಿಶಿಷ್ಟವಾದ ಸಭೆ.ಅದು
ಬುಧ್ದಿಜೀವಿಗಳಿರುವ ಸಭೆ. ಒಲ್ಮಾ ಆ ಸಭೆಯಲ್ಲಿ ಯಥಾಪ್ರಕಾರ ‘ಒಲ್ಮಾ’ ಜನಾಂಗವು ‘ನಲ್ಮಿಯಾ’ ರಾಷ್ಠ್ರದಿಂದ ಬೇರೆಯಾದರೆ
ಹೇಗೆ ಒಳಿತಾಗುವುದು ಎಂದು ಎಳೆ ಎಳೆಯಾಗಿ ಬಿಡಿಸಿ ಹೇಳುತ್ತಿದ್ದನು.ಅಷ್ಟೆ ಅಲ್ಲ ಆ ತನ್ನ ಭಾಷಣದ ಪ್ರಕ್ರಿಯೆಲ್ಲಿಯೆ
ಹಿಂದಿನ ಸಭೆಗಳಲ್ಲಿ ತನ್ನನ್ನು ಹಿಂಬಾಲಿಸುತ್ತಿದ್ದ ಆ ಕಣ್ಣುಗಳನ್ನು ಸಹಾ ಹುಡುಕುತ್ತಿದ್ದನು.ಆದರೆ ಆ ಕಣ್ಣುಗಳು ಒಲ್ಮಾಗೆ
ಕಾಣಿಸಲೆ ಇಲ್ಲ.ಸಭೆ ಮುಗಿದು ಹೋಯಿತು.ಅಲ್ಲಿದ್ದ ಸಭೀಕರರಲ್ಲಿನ ಕೆಲವರು ಒಲ್ಮಾ ಹತ್ತಿರಕ್ಕೆ ಬಂದು ಒಲ್ಮಾ ಪ್ರಸ್ತಾಪಿಸಿದ
ವಿಷಯದ ಸತ್ಯಾಸತ್ತತೆ ಮತ್ತು ಇನ್ನಿತರೆ ಅಂಕಿ ಅಂಶಗಳ ಬಗ್ಗೆ ಚರ್ಚೆ ಮಾಡಲು ಪ್ರಾರಂಭಿಸಿದರು.ಈ ಒಂದು ಅನೌಪಚಾರಿಕ
ಮಾತುಕತೆಯ ಮಧ್ಯದಲ್ಲಿಯೆ ಕೆಲವರು ಒಲ್ಮಾ ಹಸ್ತಾಕ್ಷರವನ್ನು ಪಡೆಯಲು ಮುಂದಾದರು.ಥಟ್ ನೇ ಮುಂದಾದ ಒಂದು
ಕೈಯಿಂದ ಸ್ವಲ್ಪ ವಿಚಲಿತನಾದ ಒಲ್ಮಾ ಆ ಕೈಯಲ್ಲಿದ್ದ ಪುಸ್ತಕದ ಮೇಲೆ ಹಸ್ತಾಕ್ಷರ ಮಾಡದೆ ಕೈಯನ್ನೆ ಎಳೆದು ಅಂಗೈ ಮೇಲೆ
ಹಸ್ತಾಕ್ಷರ ಮಾಡಿದನು. ನೆರೆದಿದ್ದ ಜನಸ್ತೋಮ ಸ್ತಬ್ಧವಾಯಿತು.ಅಂಗೈ ಮೇಲೆ ಹಸ್ತಾಕ್ಷರ ಪಡೆದ ಆ ಬೆಕ್ಕಿನ ಕಣ್ಣಿನ ಹುಡುಗಿ
ನಾಚಿ ಓಡಿ ಹೋದಳು.ಒಲ್ಮಾ ನಿಂತಲ್ಲಿಯೆ ತುಂಟ ನಗೆ ಬೀರಿ.ಪತ್ರಕರ್ತರ ಪ್ರಶ್ನೆಗಳಿಗೆ ಈ ಹಸ್ತಾಕ್ಷರದ ಪ್ರಹಸನದ ಬಗ್ಗೆ
ನೇರಾ ನೇರಾ ಉತ್ತರಿಸಲು ಸಿಧ್ಧನಾದನು.
“ಸಾರ್ ಆ ಹುಡುಗಿ ಯಾರೆಂದು ನಿಮಗೆ ಮೊದಲೆ ತಿಳಿದಿತ್ತೆ”
“ಇಲ್ಲ!!!.ಆದರೆ ಆ ಹುಡುಗಿ ನನ್ನನ್ನು ಹಿಂಬಾಲಿಸುತ್ತಿದ್ದಾಳೆ.ನನ್ನ ಮಾತುಗಳನ್ನು ಇಷ್ಟ ಪಡುತ್ತಾಳೆ ಮತ್ತು ನನ್ನನ್ನು
ಸಹಾ.ನಾನೂ ಕೂಡಾ ಅವಳನ್ನು ಇಷ್ಟಪಡುತ್ತೇನೆ”
“ಹಿಂದೆಂದಾದರು ಆ ಹುಡುಗಿಯನ್ನು ಭೆಟ್ಟಿಯಾಗಿದ್ದೀರಾ?”
“ಇಲ್ಲ”
“ಹಾಗಿದ್ದರೆ ನಿಮ್ಮದು ಸ್ವಲ್ಪ ಉಧ್ಧಟವೆನ್ನಿಸಿತಲ್ಲವೆ?”
“ಇಲ್ಲ!! ಉದ್ಥಟತನವಲ್ಲ.ಆ ಬೆಕ್ಕಿನ ಕಣ್ಣು ನನ್ನನ್ನು ಹಿಂಬಾಲಿಸುತ್ತಿದ್ದವು.ಅಲ್ಲದೆ ಆ ಕಣ್ಣುಗಳನ್ನು ನೋಡಿದರೆ ಆ ಕಣ್ಣುಗಳಲ್ಲಿ
ಪ್ರೀತಿಯ ನಿವೇದನೆ ಕಾಣುತ್ತಲಿತ್ತು.ಹಾಗಾಗಿ ನಾನು ಆ ಹುಡುಗಿಯ ಪುಸ್ತಕದಲ್ಲಿ ಹಸ್ತಾಕ್ಷರ ಮಾಡದೆ ಅಂಗೈಯಲ್ಲಿ
ಮಾಡಿದೆ.ಹೌದು! ನಾನು ಬೆಕ್ಕಿನ ಕಣ್ಣಿನ ಹುಡುಗಿಯನ್ನು ಪ್ರೀತಿಸುತ್ತೇನೆ.ಅಲ್ಲದೆ ಬೆಕ್ಕಿನ ಕಣ್ಣಿನ ಹುಡುಗಿಯೂ ನನ್ನನ್ನು
ಪ್ರೀತಿಸುತ್ತಾಳೆ.”
ಒಲ್ಮಾನ ಈ ಘೋಷಣೆ ‘ಒಲ್ಮಾ’ ಜನಾಂಗದೊಳಗೆ ಸಂಚಲನವನ್ನು ಸೃಷ್ಟಿ ಮಾಡಿತು.ಅಲ್ಲದೆ ಕೆಲವು ಧರ್ಮಾಂಧರು
ಒಲ್ಮಾನನ್ನು ಈ ವಿಚಾರವಾಗಿ ತೀಕ್ಷ್ಣವಾಗಿ ಕಾಡಲು ಶುರು ಮಾಡಿದರು.ಯಾವುದಕ್ಕೂ ವಿಚಿಲಿತವಾಗದ ಒಲ್ಮಾ ತನ್ನ
ಪ್ರೇಮಕ್ಕೆ ಮತ್ತು ತನ್ನ ಬೆಕ್ಕಿನ ಕಣ್ಣಿನ ಹುಡುಗಿ ಅಂದರೆ ನಲ್ಮಿಯಾಗೆ ಒಂದಿಷ್ಟು ಚ್ಯುತಿಯ ಬರದ ಹಾಗೆ ನಡೆದು ಕೊಂಡರು.
ಈಗ ಒಲ್ಮಾ ಮತ್ತು ನಲ್ಮಿಯ ನಡುವಿನ ಪ್ರೇಮ ರಹಸ್ಯವಾಗಿ ಉಳಿದಿಲ್ಲ,ಹಾಗಾಗಿ ಆ ಬೆಕ್ಕಿನ ಕಣ್ಣಿನ ಹುಡುಗಿ ಸಹಾ
ಒಲ್ಮಾನ ಎಲ್ಲಾ ಸಭೆಗಳಲ್ಲಿ ಢಾಳಾಗಿಯೆ ಎಲ್ಲರಿಗೂ ಕಾಣುವಂತೆಯೆ ಸಭೆಯ ಮುಂದಿನ ಆಸನಗಳಲ್ಲಿಯೆ
ಕುಳಿತಿರುತ್ತಿದ್ದಳು.ಅಲ್ಲದೆ ಆ ಹುಡುಗಿಯ ಇರುವಿಕೆಯು ಒಲ್ಮಾಗೆ ಹೊಸ ಹುಮ್ಮಸ್ಸು ತರುತ್ತಿತ್ತು, ಒಲ್ಮಾ ತನ್ನ ಬಿಡುವಿಲ್ಲದ
ರಾಜಕೀಯ ಸಮಾರಂಭಗಳ ನಡುವೆ ಬೆಕ್ಕಿನ ಕಣ್ಣಿನ ಹುಡುಗಿ ಅಥವಾ ನಲ್ಮಿಯಾಳ ಜೊತೆ ಮಾತಾಡುವುದಕ್ಕೆ ಸಮಯವೆ
ಸಿಕ್ಕಿರಲಿಲ್ಲ.ಆದರೂ ಹಾಗೂ ಹೀಗೂ ಮಾಡಿ ಸಮಯವನ್ನು ಹೊಂದಿಸಿಕೊಂಡು ನಲ್ಮಿಯಾಳನ್ನು ಮುಖತಃ ಭೆಟಿಯಾದನು.
ಮಾತಿಗೆ ಮೊದಲೆ ನಲ್ಮಿಯಾ “ ನಾನು ನಲ್ಮಿಯಾ ಜನಾಂಗದವಳು.ನೀವು ಒಲ್ಮಾ ಜನಾಂಗದವರು.ಅಲ್ಲದೆ ನೀವೆ ಮುಂದೆ
ನಿಂತು ಒಲ್ಮಾ ಜನಾಂಗದ ಏಳಿಗೆಗಾಗಿ ಹೊಸ ರಾಷ್ಟ್ರದ ವಕಾಲತ್ತಿನಲ್ಲಿದ್ದೀರಿ.ಹಾಗೇನಾದರು ಮುಂದೊದು ದಿನ ಒಲ್ಮಾ
ರಾಷ್ಟ್ರ ಸ್ಥಾಪಿತವಾದರೆ ಅಲ್ಲಿ ಕೇವಲ ಒಲ್ಮಾ ಜನಾಂಗದವರಿಗೆ ಮಾತ್ರ ಅವಕಾಶವಿರುತ್ತದೆ ಹಾಗಾಗಿ ನಮ್ಮ ಭವಿಷ್ಯವೇನು?”
“ಇಲ್ಲ ನಲ್ಲಿಯಾ ನನಗೆ ನಿನ್ನ ಜನಾಂಗದ ಅರಿವುಂಟು ಅಲ್ಲದೆ ನಿನ್ನ ಬಗ್ಗೆ ಪೂರಾ ತಿಳಿದು ಕೊಂಡಿದ್ದೇನೆ.ಹಾಗೆಂದ ಮಾತ್ರಕ್ಕೆ
ನಾನು ನಿನ್ನನ್ನು ಪ್ರೀತಿಸುವುದಕ್ಕೂ ಮೊದಲು ಇದೆಲ್ಲವನ್ನು ತಿಳಿದಕೊಂಡಿದ್ದೆ ಅಂತಲ್ಲ.ಆದರೆ ಆ ಹಸ್ತಾಕ್ಷರದ ಪ್ರಹಸನದಿಂದ
ನನಗೆ ನನ್ನ ಒಲ್ಮಿಯಾ ಜನಾಂಗದವರಿಂದ ತೀವ್ರ ಒತ್ತಡ ಬಂತು.ಆವಾಗಲೆ ನನಗೆ ಗೊತ್ತಾಗಿದ್ದು ನೀನು ನಲ್ಮಿಯಾ
ಜನಾಂಗಕ್ಕೆ ಸೇರಿದವಳೆಂದು.ನಾನು ರಾಜಕೀಯವಾಗಿ ಒಲ್ಮಾ ರಾಷ್ಟ್ರ ಸ್ಥಾಪನೆಗೆ ಬಧ್ಧನಾಗಿದ್ದೇನೆ.ಹಾಗೆಯೆ ಪ್ರೀತಿಯ
ವಿಚಾರವಾಗಿಯೂ ಕೇವಲ ನಿನಗೆ ಮತ್ತು ನಿನಗೆ ಮಾತ್ರ ಬಧ್ದನಾಗಿದ್ದೇನೆ.” ಎಂದು ನಲ್ಮಿಯಾ ಕೈ ಹಿಡಿದು ಹೇಳಿದ
ಭಾಗ-2
ಒಲ್ಮಾನ ರಾಜಾಕೀಯ ಜಿದ್ದಾ ಜಿದ್ದಿ ಭಾಷಣಗಳು ಮತ್ತು ಪಟ್ಟುಗಳು ತೀವ್ರ ವೇಗದಲ್ಲಿಯೆ ಮುಂದುವರೆದಿತ್ತು.ಹಾಗೆಯೆ
ಒಂದು ಸಭೆಯಿಂದ ಮೇಲೆದ್ದ ಒಬ್ಬ ಸಭಿಕ “ ನೀನು ಒಲ್ಮಾ ಜನಾಂಗಕ್ಕೆ ಸೇರಿದವನಾಗಿದ್ದು ಮತ್ತು ‘ಒಲ್ಮಾ’ ರಾಷ್ಟ್ಟ ರಚನೆಯ
ಮುಂದಾಳತ್ವ ವಹಿಸಿರುವೆ ನೀನು ಹೇಗೆ ತಾನೆ ನಲ್ಮಿಯಾ ಜನಾಂಗದ ಹುಡುಗಿಯನ್ನು ಪ್ರೀತಿಸುತ್ತೀಯಾ? ಅಲ್ಲದೆ ನಾವು
ಹೇಗೆ ತಾನೆ ನಿನ್ನನ್ನು ನಾಯಕೆಂದು ಒಪ್ಪಿಕೊಳ್ಳುವುದು?”
“ನನ್ನ ಪ್ರೀತಿ, ಅದು ನನ್ನ ವಯಕ್ತಿಕ .ಅಲ್ಲದೆ ನಲ್ಮಿಯಾ ಜನಾಂಗದ ನಲ್ಮಿಯಾಳನ್ನು ನಾನು ಮದುವೆಯೂ
ಆಗುತ್ತೇನೆ.ಆದರೆ ನೆನಪಿಡಿ.’ಒಲ್ಮಾ’ ರಾಷ್ಟ್ರ ರಚನೆಯಲ್ಲಿ ನಾನು ಶೇಕಡ ನೂರಕ್ಕೆನೂರರಷ್ಟು ಬಧ್ಧನಾಗಿದ್ದೇನೆ.ಮತ್ತು
‘ಒಲ್ಮಾ’ ರಾಷ್ಟ್ರ ರಚನೆಯೆ ನನ್ನ ಜೀವನದ ಪರಮೋಚ್ಛ ಗುರಿ” ಆ ನೆರೆದಿದ್ದ ಸಭೆಯಿಂದ ಬಂದ ಕರತಾಡನ ಮತ್ತು ಜಯ
ಘೋಷಗಳು ಮೊದಲಿನಂತೆ ಮಾರ್ದನಿಸಲಿಲ್ಲ.ಅದನ್ನು ಒಲ್ಮಾ ಗಮನಿಸಿದ್ದನು.ಹಾಗೂ ಕ್ಷೀಣಿಸಿದ ಈ
ಮಾರ್ದನಿಂದಾಗಬಹುದಾದ ಅನಾಹುತವು ಎನೋ ಇದೆ ಎಂದು ಸಹಾ ಅಂದಾಜಿಸಿದ್ದನು.
ಒಂದು ದಿನ ಕೇವಲ ತಮ್ಮ ತಮ್ಮ ಹಿತೈಷಿಗಳ ಸಮ್ಮುಖದಲ್ಲಿ ಇಬ್ಬರ ಧರ್ಮಾನುಸಾರ ಒಲ್ಮಾ ಮತ್ತು ನಲ್ಮಿಯಾಳ ವಿವಾಹ
ಎರೆಡು ಜನಾಂಗದ ತೀವ್ರ ವಿರೋಧದ ನಡುವೆಯೂ ನಡೆದು ಹೋಯಿತು.ಆದರೆ ಮದುವೆಯಾದ ಮರುದಿನವೆ ಒಲ್ಮಾ ಮತ್ತು
ನಲ್ಮಿಯಾ ಜನಾಂಗದ ನಡುವೆ ಭುಗೆಲೆದ್ದ ದಂಗೆ ನಲ್ಮಿಯಾಳನ್ನು ಬಲಿ ಪಡೆಯುವಲ್ಲಿ ಕೊನೆಯಾಯಿತು. ಒಲ್ಮಾ
ತೀವ್ರತರವಾದ ಕ್ಷೋಭೆಗಳೊಗಾದರು.ಈ ಕೃತ್ಯವನ್ನು ಮಾಡಿದವರ್ಯಾರು ಮತ್ತು ಅವರು ಯಾವ ಜನಾಂಗಕ್ಕೆ
ಸೇರಿದವರೆಂದು ಸ್ಪಷ್ವವಾಗಿ ಅರ್ಥವಾಗಿತ್ತು.ಆದರೆ ಕೈ ಕಟ್ಟಿ ಹೋಗಿತ್ತು..ಪ್ರೀತಿಸಿ ಮದುವೆಯಾದ ಹೆಂಡತಿಯನ್ನು ಕಳೆದು
ಕೊಂಡ ಆ ಒಂದು ನೋವಿನಲ್ಲಿಯೆ ಒಲ್ಮಿಯಾ ರಾಷ್ಟ್ರ ರಚನೆಯ ಪೂರ್ವ ಭಾವಿ ಸಭೆಗೆ ಹಾಜರಾದನು ಮತ್ತು ‘ಒಲ್ಮಾ’
ರಾಷ್ಟ್ರದ ವಕಾಲತ್ತು ವಹಿಸಲೆ ಬೇಕಾಗಿತ್ತು.ಆ ಸಭೆಯಲ್ಲಿಯೆ ನಲ್ಮಾ ಜನಾಂಗಕ್ಕಾಗಿ ಹೊಸ ರಾಷ್ಟ್ರ ನಿರ್ಮಾಣ
ಮಾಡಬೇಕೆನ್ನುವುದನ್ನು ತೀರ್ಮಾನಿಸಲಾಯಿತು.ಒಲ್ಮಾಗೆ ತುಂಬಾ ಸಂತೋಷವಾಯಿತು.ತನ್ನ ಹೋರಾಟದ ಹಾದಿ ಇಷ್ಟು
ಬೇಗ ಫಲ ಕೊಡುವುದೆಂದು ಊಹಿಸಿಯೆ ಇರಲಿಲ್ಲ.ಆದರೆ ಆ ಸಂಭ್ರಮದ ಮಧ್ಯೆ ತಾನು ಕಳೆದುಕೊಂಡ ನಲ್ಮಿಯಾಳನ್ನು
ನೆನೆದು ಕುಸಿದು ಹೋದರು.ಅನಾವಶ್ಯಕವಾಗಿ ನಲ್ಮಿಯಾ ಜೀವ ಬಲಿ ಪಡೆದ ಹೋರಾಟ ಹಾದಿ ನೆನೆದು ಪಶ್ಚಾತ್ತಾಪ
ಪಟ್ಟರು.ತಾನೆ ಮುಂದೆ ನಿಂತು ವಕಾಲತ್ತು ವಹಿಸಿ ನಿರ್ಮಾಣ ಮಾಡಿರುವ ರಾಷ್ಟ್ರ ಸ್ಫಾಪನೆ ಆಗಲಿದೆ.ತನ್ನ ಮುಂದಾಲೋಚನೆ
ಇಲ್ಲದೆ ನಡೆದು ಹೋದ ಒಲ್ಮಿಯಾ ರಾಷ್ಟ್ರ ರಚನೆ ವಿಚಾರ ದಂಗೆಯ ರೂಪತಾಳಿ, ಒಲ್ಮಾ ಮತ್ತು ನಲ್ಮಿಯಾ ಜನಾಂಗದ
ಪ್ರಜೆಗಳ ಮಾರಣ ಹೋಮವು ದಿನಂಪ್ರತಿ ನಡೆಯುತ್ತಿತ್ತು.ಎಷ್ಟೆ ಪ್ರಯತ್ನ ಪಟ್ಟರು ದಂಗೆಯ ಪರಿ ಹತೋಟಿಗೆ ಬರುವ
ಪ್ರಮೇಯವೆ ಕಾಣಿತ್ತಿರಲಿಲ್ಲ.ದಂಗೆಯ ಪ್ರಮಾಣವನ್ನು ಒಲ್ಮಾ ಅಸಹಾಯಕರಾಗಿ ನೋಡತಲ್ಲಿದ್ದನು.ಪ್ರತಿ ಜೀವವು
ಬಲಿಯಾದಗ ನಲ್ಮಿಯಾಳ ಮಾತು ನೆನಪಾಗುತ್ತಿತ್ತು.”ನಾನು ನಲ್ಮಿಯಾ ಜನಾಂಗದವಳು ಮತ್ತು ನೀವು ಒಲ್ಮಾ ರಾಷ್ಟ್ರದ
ವಕಾಲತ್ತು ವಹಿಸಿರುವ ನಾಯಕರು.ಹಾಗಾಗಿ ಈ ವಿಚಾರವಾಗಿ ಏನಾದರು ಹೆಚ್ಚು ಕಡಿಮೆ ಯಾಗ ಬಹುದೆ?’ಆದರೆ ಆ ಕ್ಷಣದಲ್ಲಿ
ಒಲ್ಮಾ “ಅದ್ಯಾವುದು ಸಂಭವಿಸುವುದಿಲ್ಲ.ಅಲ್ಲದೆ ಒಲ್ಮಾ ಜನಾಂಗಕ್ಕೆ ಬೇಕಾಗಿರುವುದು ಹೊಸ ರಾಷ್ಟ್ರವೆ ಹೊರತು ದಂಗೆಯಲ್ಲ”
ಎಂದು ಹೇಳಿದ್ದನು. ಇಲ್ಲಿ ನೋಡಿದರೆ ದಂಗೆಯ ಪ್ರಮಾಣ ತೀವ್ರ ಪ್ರಮಾಣದಲ್ಲಿ ಏರುತ್ತಲಿತ್ತು ಮತ್ತು ದಂಗೆ ಥಮಣಿಯಾಗುವ
ಪರಿಸ್ಥಿತಿಯಲ್ಲಿರಲಿಲ್ಲ.ವಿಪರೀತ ಕ್ಷೋಭೆಗಳೊಗಾದ ಒಲ್ಮಾ ನೇರವಾಗಿ ನಲ್ಮಿಯಾ ಅಂತ್ಯ ಸಂಸ್ಕಾರ ನಡೆದ ಸ್ಥಳಕ್ಕೆ
ಹೊರಟನು ಮತ್ತು ಕೈಮುಗಿದು – “ನನ್ನನ್ನು ಕ್ಷಮಿಸಿ ಬಿಡು.ನಿನ್ನ ಸಾವಿಗೆ ಕಾರಣ ನಾನೆ ಅನ್ನಿಸುತ್ತಲಿದೆ.ಅಲ್ಲದೆ ಈಗಿನ
ದಂಗೆಯೂ ನನ್ನ ಪಾಪದ ಕೂಸು ಅಂತ ಅನ್ನಿಸಲಿಕ್ಕೆ ಶುರುವಾಗಿದೆ.ನನ್ನ, ನನ್ನ ಉದ್ದೇಶ ಕೇವಲ ಒಲ್ಮಾ ರಾಷ್ಟ್ರದ ಪರಿಕಲ್ಪನೆ
ಮತ್ತು ಸಾಕ್ಷಾತ್ಕಾರವಾಗಿತ್ತು.ನನ್ನಿಂದ ಕ್ಷಮಿಸಿಲಾಗದಂತಹ ಅಪರಾಧವಾಗಿ ಬಿಟ್ಟಿದೆ.” ಎಂದು ನಲ್ಮಿಯಾ ತನ್ನ ಎದುರಿಗೆ
ಇರುವಂತೆ ಭಾವಿಸಿ ಮಾತಾಡಲು ಶುರು ಮಾಡಿದನು..ಕೊನೆಯಲ್ಲಿ ಎನೊ ಉತ್ತರ ಸಿಕ್ಕಿದೆ ಅಂದುಕೊಂಡು
ಸಮಾಧಾನದಿಂದ ವಾಪಾಸ್ಸಾದನು.
ಹೊಸ ರಾಷ್ಟ್ರದ ಅಮೂರ್ತ ರೂಪ ಈಗ ಮೂರ್ತ ರೂಪಕ್ಕೆ ಬರುವ ದಿನಗಳು ಹತ್ತಿರಕ್ಕೆ ಬಂದವು.ಈಗ ನಡೆಯುವ ಸಭೆಯ
ಪರಿಭಾಷೆಗಳು ಬದಲಾಗಿದ್ದವು. ಒಲ್ಮಾಗೆ ತನ್ನ ಕನಸಿನ ‘ಒಲ್ಮಾ’ ರಾಷ್ಟ್ರದ ಕಲ್ಪನೆ ಮೂರ್ತ ರೂಪಕ್ಕೆ ಬಂದಿದ್ದರಿಂದ
ಮನಸ್ಸಿನಲ್ಲಿ ಸಂಭ್ರಮವು ನಲೆ ನಿಂತಿತ್ತು.ಇದರ ಮಧ್ಯೆ ಒಲ್ಮಾಗೆ ಒಲ್ಮಾ ಜನಾಂಗ ಘಟಾನುಘಟಿ ನಾಯಕರ ಮಗಳನ್ನು
ಮದುವೆಯಾಗುವಂತೆ ಪುಸಲಾಯಿಸುವ ಪ್ರಸಂಗಗಳು ನಡೆದು ಹೋದವು.ಆದರೆ ಒಲ್ಮಾ ಅದ್ಯಾವುದಕ್ಕೂ ಸೊಪ್ಪು
ಹಾಕಿರಲಿಲ್ಲ.ಕಾರಣ ಒಲ್ಮಾ ಮನಸ್ಸಿನ ತುಂಬಾ ನಲ್ಮಿಯಾಳೆ ತುಂಬಿದ್ದಳು.
ಹೊಸ ರಾಷ್ಟ್ರದ ಪ್ರಕ್ರಿಯೆಗಳು ತುಂಬಾ ಬಿರುಸಿನಿಂದಲೆ ನಡೆದು ಹೋದವು..ಒಲ್ಮಾ ತಮ್ಮ ಬಿರುಸಿನ ರಾಜಕೀಯ
ಜೀವನದಲ್ಲಿ ಸ್ವಲ್ಪ ಸಮಯವಾದರು ಬಿಡುವು ಮಾಡಿಕೊಂಡು ನಲ್ಮಿಯಾ ಅಂತ್ಯ ಸಂಸ್ಕಾರ ನಡೆದ ಸ್ಥಳಕ್ಕೆ ಹೋಗಿ ನಲ್ಮಿಯಾ
ತನ್ನ ಜೊತೆ ಈಗಲೂ ಇದ್ದಾಳೆ ಎನ್ನುವ ಪರಿಯಲ್ಲಿ ಸಂಭಾಷಣೆ ನಡೆಸಿ ಬರುತ್ತಿದ್ದನು.ಸುಮಾರು ದಿನಗಳೆ ಕರಗಿ ಹೋದವು
ನಲ್ಮಿಯಾಳ ಅಂತ್ಯ ಸಂಸ್ಕಾರ ನಡೆದ ಸ್ಥಳಕ್ಕೆ ಹೋಗುವುದಕ್ಕೆ ಆಗಿರಲಿಲ್ಲ.ಒಂದು ಅರ್ಥದಲ್ಲಿ ನಲ್ಮಿಯಾಳ ನೆನಪು ನೇಪಥ್ಯಕ್ಕೆ
ಸರಿದು ಹೋಯಿತು.
ಹೊಸ ರಾಷ್ಟ ಉದಯವಾಗುವ ದಿನವೂ ಬಂದೆ ಬಿಟ್ಟಿತು. ನಿಜವಾಗಿಯೂ ಆ ದಿನ ಅತಿ ಸಂಭ್ರಮದ
ದಿನವಾಗಬೇಕಾಗಿತ್ತು.ಆದರೆ ಖಾಲಿತನ ಒಲ್ಮಾನನ್ನು ವಿಪರೀತ ಕಾಡುತ್ತಿತ್ತು.ಆ ಕ್ಷಣಕ್ಕೆ ಒಲ್ಮಾ ನೆನಪಿಗೆ ಬಂದದ್ದೆಂದರೆ
‘ನಲ್ಮಿಯಾ’.ಎದ್ದು ಸೀದಾ ನಲ್ಮಿಯಾ ಅಂತ್ಯಸಂಸ್ಕಾರವಾದ ಸ್ಥಳಕ್ಕೆ ದೌಡಾಯಿಸಿದನು.ಅಲ್ಲಿ ನಿಂತು ನಲ್ಮಿಯಾ ಜೊತೆ
ಮಾತಾಡಲು ಶರು ಮಾಡಿದರು.”ಇಲ್ಲ, ನಲ್ಮಿಯಾ ಈ ದಿನದೊರೆಗೂ ನಾನು ತುಂಬಾ ಕೆಲಸದ ಮಧ್ಯೆ ಕಳೆದು
ಹೋಗಿದ್ದೆ.ಆದರೆ ಈ ದಿನ ಮಾತ್ರ ನಾನು ನಿನ್ನಲ್ಲಿಯೆ ಕಳೆದು ಹೋಗಿದ್ದೇನೆ.ಇಷ್ಟು ದಿನ ನೀ ಭೌತಿಕವಾಗಿ ನನ್ನ ಬಳಿ ಇಲ್ಲದೆ
ಹೋದರು ಇಲ್ಲೆ ಹತ್ತಿರದಲ್ಲಿರುವ ಈ ಸ್ಥಳಕ್ಕೆ ಬಂದು ನಿನ್ನ ನೆನೆದು ನಿನ್ನ ಜೊತೆ ಮಾತಾಡಿ ಹೊರಡುತ್ತಿದ್ದೆ.ಈಗಿರುವ
ಖಾಲಿತನ ಅತಿ ಆಘಾತಕಾರಿಯಾದದ್ದು.ಇನ್ನು ಮುಂದೆ ನನಗೆ ನಿನ್ನ ನೆನಪಾದರೆ ಹೇಗೆ?.ಮತ್ತೆ ನಾನು ‘ನಲ್ಮಿಯಾ’ ರಾಷ್ಟ್ರಕ್ಕೆ
ಬರುವುದು ಸಾಧ್ಯವೆ?’ಒಲ್ಮಾ’ ರಾಷ್ಟ್ರದ ವಕಾಲತ್ತು ವಹಿಸಿ ಅದರೆ ರಚನೆಗೆ ಅಹರ್ನಿಷ ದುಡಿದ ನನ್ನನ್ನು ಈ ‘ನಲ್ಮಿಯಾ’
ರಾಷ್ಟ್ರದ ಜನತೆ ಕ್ಷಮಿಸಿಯಾರೆ”? ಒಲ್ಮಾನ ನಲ್ಮಿಯಾಳ ಜೊತೆಗಿನ ಸ್ವಗತ ಇನ್ನು ಮುಗಿದಿರಲಿಲ್ಲ ಯ್ಯಾರೊ ಹಿಂದಿನಿಂದ
ಎಳೆದಂತಾಯಿತು – “ ಮತ್ತೆ ದಂಗೆ ಶುರುವಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.ಒಲ್ಮಾ ಜನಾಂಗದ ಜನತೆ ಆದಷ್ಟು ಬೇಗ
‘ನಲ್ಮಿಯಾ’ ರಾಷ್ಟ್ರದ ಗಡಿಯನ್ನು ದಾಟಿ ಹೋಗ ಬೇಕಾಗಿದೆ”.ಆದರೆ ಒಲ್ಮಾ ಜನಾಂಗದ ಜನತೆ ಎಳೆದು ಕೊಂಡು
ಹೋದರು..ದಂಗೆಯ ಪ್ರಮಾಣ ಹಿಂದೆಂದಿಗಿಂತಲೂ ತೀವ್ರವಾಗಿತ್ತು. ಮುಂದಿನ ದಿನಗಳಲ್ಲಿ ಒಲ್ಮಾ ಮತ್ತು ನಲ್ಮಿಯಾ
ರಾಷ್ಟ್ರಗಳ ಮಧ್ಯೆ ಬಧ್ಧ ವೈರತ್ವ ಬೆಳೆಯಿತು.ಯಾವತ್ತು ಒಲ್ಮಾ ಮತ್ತೊಮ್ಮೆ ನಲ್ಮಿಯಾಕ್ಕೆ ಬರದಂತಾಯಿತು.
ಹೆಚ್ಚಿನ ಬರಹಗಳಿಗಾಗಿ
ಮಗುಚಿತೊಂದು ಮೀನು ಬುಟ್ಟಿ
ಶೂಟಿಂಗ್ ಅನ್ಯಾಯ
ಕಾಸಿಲ್ ಆಫ್ ಆಲ್ಬಕರ್ಕೀ