- ರವಿಯಂತೆ ಕವಿಯೂ- ಅಂಬಾರಕೊಡ್ಲದ ವಿಷ್ಣುನಾಯ್ಕರು - ಫೆಬ್ರುವರಿ 27, 2024
- ಎರಡು ಅನುವಾದಿತ ಕವಿತೆಗಳು - ಸೆಪ್ಟೆಂಬರ್ 26, 2020
- ಬೇಲಿಗಳು - ಆಗಸ್ಟ್ 20, 2020
ಕವಿತೆ -೧ : ಶುಭ ಬೆಳಗು
ಬೆರಗು ನನಗೆ,
ನನ್ನಾಣೆ
ಹೀಗೆ ಪ್ರೀತಿಸುವವರೆಗೆ
ನಾವು ಮಾಡಿದ್ದಾರೂ ಏನು?
ಮೊಲೆ ಚೀಪಿ ಹಾಲುಣ್ಣುವ
ಎಳೆಗೂಸುಗಳಂತೆ,
ಹುಡುಗಾಟದಲ್ಲಿ ಮೈಮರೆತ
ಮಕ್ಕಳಂತೆ
ಮೋಜು ಮಸ್ತಿಯನ್ನೆ
ಸೂರೆಗೊಂಡೆವೇನು?
ಅಥವಾ ಗುಹೆಯಲ್ಲಿ ಬಿದ್ದುಕೊಂಡ
ಏಳು ಜನ ನಿದ್ರಾಳುಗಳಂತೆ
ಗೊರಕೆಯಲ್ಲೇ ದಿನಗಳೆದೆವೇನು?
ಹಾಗೇ ಇದ್ದೀತು ಬಿಡು,
ಇವೂ ಸುಖದ ಭ್ರಮೆಗಳೇ ಅಲ್ಲವೇನು?
ಇಲ್ಲಿಯತನಕ ಕಂಡ
ಅದೆಷ್ಟೋ ಚೆಲುವು
ಅಲ್ಲಿ ಹಾತೊರೆದು ಹಂಬಲಿಸಿದ್ದು,
ಪಡೆದದ್ದು ಬೇರೇನು?
ನಿನ್ನ ಪಡೆವ ಕನಸಿನ ಹೊರತು.
ಹೋದರೆ ಹೋಗಲಿ ಬಿಡು,
ಜಲ ಪರ್ಯಟನೆಯಲ್ಲಿ
ಹೊಸ ಜಗವ ಹುಡುಕಿ ಹೊರಟವರು.
ಸೃಷ್ಟಿಸಲಿ ಬಿಡು,
ವಿಶ್ವಗಳ ಮೇಲೆ ವಿಶ್ವಗಳ
ನಕಾಶೆ ಬರೆವವರು.
ನಾವಿಲ್ಲಿ, ನಮ್ಮದೇ ಜಗದಲ್ಲಿ
ಪರಸ್ಪರರ ಜಗತ್ತೇ ಆಗೋಣ
ಕಾಣುವುದು
ನಿನ್ನ ಕಣ್ಣಲ್ಲಿ ನನ್ನದೇ ಮುಖ
ನನ್ನಲ್ಲಿ ನಿನ್ನ ಮುಖಬಿಂಬ.
ಹೃದಯದೊಳಗಿನ
ಅಪ್ಪಟ ಭಾವಗಳಿಗೆ
ಮುಖವೇ ದರ್ಪಣದಂತೆ.
ಕಾಣಬಹುದೆಲ್ಲಿ
ಎರಡು ಸಮಾನ ಗೋಳಗಳು?
ಅದೇ ಉತ್ತರದ ಶೀತವಲಯ
ಮತ್ತು ಸೂಯಾಸ್ತದೊಡನೆ
ಕತ್ತಲೆಗೆ ಸರಿವ ಪಶ್ಚಿಮ
ಇವುಗಳ ವಿನಃ..
ಹದವಾಗಿ ಒಂದಕ್ಕೊಂದು
ಮಿಳಿತಗೊಳ್ಳದೇ ಇರುವುದು ಎಂದೂ
ಶಾಶ್ವತವಾಗಿರದು.
ನಾವಿಬ್ಬರೂ ಒಂದು,
ಹಾಗೇ ಪ್ರೀತಿಯೂ
ಒಂದರೊಳಗೊಂದು.
ಇನ್ಯಾವುದೂ ಅದನು ಭಂಗಿಸದು
ಸಾವೆಂದೂ ನಮ್ಮ ಬಾಧಿಸದು.
ಇಂಗ್ಲೀಷ ಮೂಲ -ಜಾನ್ ಡನ್.
ಕನ್ನಡಕ್ಕೆ -ನಾಗರೇಖಾ ಗಾಂವಕರ
The Good-Morrow
BY JOHN DONNE
I wonder, by my troth, what thou and I
Did, till we loved? Were we not weaned till then?
But sucked on country pleasures, childishly?
Or snorted we in the Seven Sleepers’ den?
’Twas so; but this, all pleasures fancies be.
If ever any beauty I did see,
Which I desired, and got, ’twas but a dream of thee.
And now good-morrow to our waking souls,
Which watch not one another out of fear;
For love, all love of other sights controls,
And makes one little room an everywhere.
Let sea-discoverers to new worlds have gone,
Let maps to other, worlds on worlds have shown,
Let us possess one world, each hath one, and is one.
My face in thine eye, thine in mine appears,
And true plain hearts do in the faces rest;
Where can we find two better hemispheres,
Without sharp north, without declining west?
Whatever dies, was not mixed equally;
If our two loves be one, or, thou and I
Love so alike, that none do slacken, none can die.
ಕವಿತೆ-೨ : ಸತ್ತಾಗ ನೊಣವೊಂದರ ಗುಂಯ್ಗುಡಿತ ಕೇಳಿದೆ
ನಾನು ಸತ್ತಾಗ ನೊಣವೊಂದರ
ಗುಂಯ್ಗುಡಿತ ಕೇಳಿದೆ
ನನ್ನ ದೇಹದ ಸುತ್ತಲೂ
ಸುಳಿಗಾಳಿಯ ನಿಟ್ಟುಸಿರ ನಡುವಿನ
ಗಾಳಿಯ ನೀರವತೆಯಂತಹ ಅದೇ ನಿಶ್ಯಬ್ದತೆ
ಸುತ್ತಲಿನ ಕಣ್ಣುಗಳು ಬಾಡಿ ಒಣಗಿದ್ದವು.
ಉಸಿರ ಬಿಗಿಹಿಡಿದುಕೊಂಡಿದ್ದವು.
ಆ ಅಂತ್ಯ ಕಾಲದ ದಾಳಿಗೆ ಸಾಕ್ಷಿಯಾಗಿದ್ದ
ದೊರೆ ತನ್ನ ಅಧಿಕಾರದ ಸೀಮೆಯೊಳಗಿರುವಾಗಲೇ,
ನಾ ಬಿಟ್ಟುಹೋಗಬೇಕಾದ ನನ್ನ
ಗುರುತಗಳ ಸಂಕಲ್ಪಿಸಿದೆ
ನನ್ನಾವ ಭಾಗವನ್ನು ಹಂಚಬಹುದಿತ್ತೋ ಅದನ್ನು
ಸಹಿ ಮಾಡಿ ಹೊರಬಂದೆ.
ಅಷ್ಟೇ ಅದಾಗಲೇ ಅಲ್ಲಿ ಅಡ್ಡ ಬಂದಿತ್ತೊಂದು ನೊಣ.
ಅನಿಶ್ಚಿತ ನೀಲಿ ಗುಂಯ್ಗುಡಿತ ಹೊತ್ತು
ನನ್ನ ಮತ್ತು ಬೆಳಕಿನ ನಡುವೆ.
ಮತ್ತು ಅನಂತರ ಕಿಟಕಿಗಳು ಸೋತವು
ಮತ್ತೆ ನನಗೆ ಕಾಣಬೇಕಾದದ್ದನ್ನು ನೋಡಲಾಗಲೇ ಇಲ್ಲ.
ಇಂಗ್ಲೀಷ ಮೂಲ- ಎಮಿಲಿ ಡಿಕನ್ಸನ್
ಕನ್ನಡಕ್ಕೆ – ನಾಗರೇಖಾ ಗಾಂವಕರ
I heard a Fly buzz – when I died
BY EMILY DICKINSON
I heard a Fly buzz – when I died –
The Stillness in the Room
Was like the Stillness in the Air –
Between the Heaves of Storm –
The Eyes around – had wrung them dry –
And Breaths were gathering firm
For that last Onset – when the King
Be witnessed – in the Room –
I willed my Keepsakes – Signed away
What portion of me be
Assignable – and then it was
There interposed a Fly –
With Blue – uncertain – stumbling Buzz –
Between the light – and me –
And then the Windows failed – and then
I could not see to see –
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ