- ಶ್ರಮದ ಬೆಲೆ - ಮೇ 1, 2022
- ಬಂಗಾರದ ಮನುಷ್ಯ ಎಂಬ ಅದ್ಭುತ ಚಿತ್ರದ ಕುರಿತು - ಏಪ್ರಿಲ್ 24, 2022
- ಶ್ರೀ ಶಿವಕುಮಾರ ಶಿವಯೋಗಿಗಳ ಜನುಮ ದಿನ - ಏಪ್ರಿಲ್ 1, 2022
“ಮನಶುದ್ಧವಿಲ್ಲದವಂಗೆ ದ್ರವ್ಯದ ಬಡತನವಲ್ಲದೆ ಚಿತ್ತಶುದ್ಧದಲ್ಲಿ ಕಾಯಕವ ಮಾಡುವಲ್ಲಿ ಸದ್ಭಕ್ತಂಗೆ ಎತ್ತ ನೋಡಿದತ್ತ ಲಕ್ಷ್ಮಿ ತಾನಾಗಿಪ್ಪಳು ಮಾರಯ್ಯಪ್ರಿಯ ಅಮರೇಶ್ವರ ಲಿಂಗದ ಸೇವೆಯುಳ್ಳನ್ನಕ್ಕ”
“ಕಾಯಕದಲ್ಲಿ ನಿರತನಾದಡೆ ಗುರುದರ್ಶನವಾದರೂ ಮರೆಯಬೇಕು ಲಿಂಗಪೂಜೆಯಾದರೂ ಮರೆಯಬೇಕು ಜಂಗಮ ಮುಂದೆ ನಿಂತಿದ್ದರು ಹಂಗು ಹರಿಯಬೇಕು ಕಾಯಕವೇ ಕೈಲಾಸವಾದ ಕಾರಣ ಅಮರೇಶ್ವರ ಲಿಂಗವಾಯಿತ್ತಾದರೂ ಕಾಯಕದೊಳಗು “
ಎಂಬ ವಚನಗಳು ನಮಗೆ ಶ್ರಮದ ಮಹತ್ವವನ್ನು ಬಿಂಬಿಸುತ್ತವೆ .
“ಮೇ” ತಿಂಗಳು ಶ್ರಮವನ್ನು ಶ್ರಮಿಕರನ್ನು ಗೌರವಿಸುವ ತಿಂಗಳು. ತಿಂಗಳ ಆರಂಭದ “ಕಾರ್ಮಿಕರ ದಿನ” ಸರ್ವರಿಗೂ ಸಮಾನ ಅವಕಾಶ ಸಮಾನ ಹಕ್ಕು ಅಧಿಕಾರಗಳನ್ನು ನೀಡಬೇಕೆಂದು ಪ್ರತಿಪಾದಿಸಿದ ಸಮಾಜವಾದಿ ಕಾಲ್ ಮಾರ್ಕ್ ಹುಟ್ಟಿದ ದಿನ ಮೇ 5 .
ಜೀವಿಗಳ ಶ್ರೇಷ್ಠತೆ ಕುಲದಿಂದಲ್ಲ ಕಾಯಕದಿಂದ ಬರುತ್ತದೆಂದು ಕಾಯಕವೇ ಕೈಲಾಸವೆಂದ ಬಸವಣ್ಣನ ಜಯಂತಿ ಬರುವುದು ಮೇ ತಿಂಗಳಲ್ಲಿ.
ಕಾಯಕ ಜೀವಿಗಳಿಗೆ ಸೂಕ್ತ ಗೌರವ ಹಕ್ಕುಗಳನ್ನು ಒದಗಿಸಿಕೊಡಲು ಚಳುವಳಿಗಳ ಕಟ್ಟಿದ ಬಸವ ಕಾರ್ಲ್ ಮಾರ್ಕ್ ರ ನಡುವೆ ದೇಶಕಾಲದ ಅಂತರವಿದ್ದರೂ ಮಾರ್ಗಗಳು ಭಿನ್ನವಾಗಿದ್ದರೂ ಸಮಾಜಕ್ಕೆ ಶ್ರಮದ ನಿಖರ ಮಹತ್ವ ತಿಳಿಸುವುದು ಇವರಿಬ್ಬರ ಪ್ರತಿಪಾದನೆಯಾಗಿದೆ.
“ಶ್ರಮ ಅನ್ನುವುದು ದುಡಿಮೆಯ ಒಳಗೆ ಅಡಗಿರುವ ಸತ್ಯ” ಶ್ರಮಕ್ಕೆ ಬೆವರು ಅಂತಲೂ ಕರೆಯುವರು .ಈ ಜಗತ್ತಿನಲ್ಲಿ ಹೊಟ್ಟೆಯ ತುತ್ತಿನ ಚೀಲ ತುಂಬಲು ಲಕ್ಷಾಂತರ ಜನರು ದಿನವಿಡೀ ಕ್ಷಮಿಸುತ್ತಾರೆ. ಶ್ರಮ ಕೇವಲ ಅವರಿಗೆ ಮಾತ್ರ ಊಟ ನೀಡುವುದಿಲ್ಲ ಬದಲಾಗಿ ಇತರ ಜೀವಿಗಳ ಹಸಿವನ್ನು ನೀಗಿಸುತ್ತದೆ .
ಕೆಲಸ ಮಾಡಲು ಮಾನವರಿಗೆ ಶ್ರಮವೇ ಕಲೆ ,ಶ್ರಮವೇ ವಿರಾಮ, ಶ್ರಮವೇ ಮನೋರಂಜನೆ, ಮನುಷ್ಯ ಜೀವಿಗೆ ಬಿಡುವು ಸಿಗಬೇಕೆಂದರೆ ಒಂದು ಕೆಲಸದಿಂದ ಇನ್ನೊಂದು ಕೆಲಸಕ್ಕೆ ಜಿಗಿಯುವುದು ಎಂದು ಅನತೋಲ್ ಪ್ರಾನ್ಸ್ ಎಂಬುವರು ಪ್ರತಿಪಾದಿಸಿದ್ದಾರೆ. ಶ್ರಮ ಎನ್ನುವುದು ನಮ್ಮ ಸಂಸ್ಕೃತಿಯಲ್ಲ . ಶ್ರಮ ಎಂಬುದು ಮಾನವನ ಬದುಕಿನ ಮೂಲ ತತ್ವವಾಗಿದೆ .
ನಮ್ಮ ಹಿರಿಯರಿಗೆ ಶ್ರಮದ ಮೌಲ್ಯ ತಿಳಿದಿತ್ತು. ಸೋಮಾರಿತನವನ್ನು ಕುಳಿತು ಉಣ್ಣುವುದನ್ನು ಹೀಗಳೆದರು. ಶ್ರಮದ ಮಹತ್ವ ಸಾರುವ ಅಸಂಖ್ಯ ಗಾದೆಗಳು ನುಡಿಮುತ್ತುಗಳು ತತ್ವಪದಗಳನ್ನು ಕಟ್ಟಿ ಹಾಡಿದರು . ಕಾಯಕವನ್ನೇ ಉಸಿರಾಗಿಸಿಕೊಂಡು ಬಾಳಿ ಬದುಕಿದರು .
ಕುಳಿತು ಉಣ್ಣುವವನಿಗೆ ಕುಡಿಕೆ ಹೊನ್ನು ಸಾಲದು ಎಂಬ ಗಾದೆಮಾತು ನಮಗಿಷ್ಟವಾದ ಮಹತ್ವವನ್ನು ಸಾರಿ ಹೇಳುತ್ತದೆ .
ಶ್ರಮ ಎಂದರೆ ಕೆಲಸ ಮಾಡುವುದು ಎಂದರ್ಥ ಬ್ರಹ್ಮಾಂಡದ ಪ್ರತಿಯೊಂದು ಜೀವಿಯು ತನ್ನ ಉಳಿವಿಗಾಗಿ ಇತರರ ಪೋಷಣೆಗಾಗಿ ಶ್ರಮ ವಹಿಸಲೇ ಬೇಕಾಗಿದೆ .
ಶ್ರಮದ ಮಹತ್ವ ತಿಳಿಸುವ ಈ ಕಥೆ ನೋಡೋಣ.
ಪ್ರಸಿದ್ಧ ಹಾಗೂ ಶ್ರೀಮಂತ ವ್ಯಾಪಾರಿಯೊಬ್ಬನು ತನ್ನ ಬೇಜವಾಬ್ದಾರಿ ಮಗನಿಗೆ ಶ್ರಮದ ಮೌಲ್ಯ ತಿಳಿಸಲು ದುಡಿದು ನಾಣ್ಯ ತಂದರೆ ಮಾತ್ರ ಊಟ ಹಾಕುವೆ ಎಂದು ತಾಕೀತು ಮಾಡಿದನು . ಇದರಿಂದ ಬಯಗೊಂಡ ಅವನು ಅಮ್ಮನಿಂದ ಒಮ್ಮೆ ಅಕ್ಕನಿಂದ ಒಮ್ಮೆ ಹಣ ಪಡೆದು ತಂದಾಗ ಅದನ್ನು ವ್ಯಾಪಾರಿ ಬಾವಿಗೆ ಹಾಕಲು ತಿಳಿಸುವನು.
ತಕ್ಷಣ ಮಗ ಬಾವಿಗೆ ಹಾಕುವನು. ನಂತರ ಎಲ್ಲರನ್ನು ಇವನಿಂದ ದೂರ ಕಳಿಸಿ ಹಣ ತರಲು ಹಾಕಿತು ಮಾಡಿದಾಗ ಅವನೇ ಸ್ವತಃ ಸಂಪಾದನೆ ಮಾಡಿ ತಂದ ಹಣವನ್ನು ವ್ಯಾಪಾರಿ ಬಾವಿಯಲ್ಲಿ ಹಾಕಲು ತಿಳಿಸಿದಾಗ ಅವನು ನಾನು ಈ ಹಣ ದುಡಿಯಲು ಕಷ್ಟ ಪಟ್ಟಿರುವೆ . ಕೈಗಳು ಬೊಬ್ಬೆಯಾಗಿವೆ.ಮೈ ಬೆವರಿನ ಆಗರವಾಯಿತು . ಇಡಿ ದೇಹ ಕಂಪಿಸಿತ್ತು. ಮುಖ ಬಿಸಿಲಿಗೆ ಬಾಡಿತ್ತು. ಕಾಲುಗಳು ನಿತ್ರಾಣವಾಗಿದ್ದವು.
ಇಷ್ಟೆಲ್ಲಾ ಕಷ್ಟಪಟ್ಟು ದುಡಿದ ಹಣ ಬಾವಿಗೆ ಹಾಕಲಾರೆ ಎಂದನು.ಇದರ ಮೂಲಕ ಮಗನಿಗೆ ಶ್ರಮದ ಬೆಲೆಯ ಅರಿವನ್ನು ಮೂಡಿಸಿದ್ದ ನಿದರ್ಶನ ನೋಡಬಹುದು .
ಶ್ರಮಗಳಲ್ಲಿ ನಾವು ಎರಡು ವಿಧಗಳನ್ನು ಕಾಣಬಹುದು. ಬೌದ್ಧಿಕ ಶ್ರಮ ಪ್ರಧಾನ ಕೆಲಸ.
ಶರೀರ ಶ್ರಮ ಪ್ರಧಾನ ಕೆಲಸ. ಬೌದ್ಧಿಕ ಶ್ರಮ ಪ್ರಧಾನ ಕೆಲಸಗಳು ಬುದ್ಧಿಶಕ್ತಿಯನ್ನು ಬಂಡವಾಳವಾಗಿಸಿಕೊಂಡು ತಂತ್ರಜ್ಞಾನವನ್ನು ಬಳಸಿಕೊಂಡು ಎಸಿ ಕೊಠಡಿಗಳಲ್ಲಿ ಕುಳಿತು ಮಾಡುವುದೇ ಆಗಿದೆ. ಅದಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಹಣ ಹರಿದು ಬರುತ್ತದೆ.
ಎರಡನೆಯದು ಶರೀರ ಶ್ರಮ ಎನ್ನುವುದು. ಇದು ಆರೋಗ್ಯಕರ ವಾದಂತಹ ಕೆಲಸದ ವಿಧಾನವಾಗಿದೆ ಇಲ್ಲಿ ದೈಹಿಕ ಚಟುವಟಿಕೆಗಳು ಪ್ರಧಾನವಾಗಿರುವುದರಿಂದ ಇಡೀ ದೇಹದ ಲವಲವಿಕೆಯಿಂದ ಚಟುವಟಿಕೆಯಿಂದ ಕೂಡಿದ್ದು ದೇಹ ಹಾಗೂ ಮನಸ್ಸು ಪ್ರಫುಲ್ಲವಾಗಿರುತ್ತದೆ ಇದರಿಂದ ನಾವು ಆರೋಗ್ಯವನ್ನು ಕಾಪಾಡಿಕೊಳ್ಳಬಹುದು .ಆದರೆ ಶ್ರಮಕ್ಕೆ ತಕ್ಕ ಮೌಲ್ಯ ಸಿಗುವುದಿಲ್ಲ ಆರ್ಥಿಕ ದೃಷ್ಟಿಯಿಂದ ಇದು ಬಹಳ ಕಷ್ಟದ ಕೆಲಸವಾಗಿದೆ .
“ಕೃತ್ಯ ಕಾಯಕ ವಿಲ್ಲದವರು ಭಕ್ತರಲ್ಲ ಸತ್ಯಶುದ್ಧವಿಲ್ಲದುದು ಕಾಯಕವಲ್ಲ ಆಸೆಯೆಂಬುದು ಭವದ ಬೀಜ ನಿರಾಸೆಯೆಂಬುದು ನಿತ್ಯಮುಕ್ತಿ ಉರಿಲಿಂಗಪೆದ್ದಿಗಳರಸನಲ್ಲಿ ಸದರವಲ್ಲ ಕಾಣವ್ವಾ “
ಎಂಬ ವಚನಮೃತ ಅವು ನಮಗೆ ಶ್ರಮದ ಮೌಲ್ಯವನ್ನು ಎತ್ತಿ ಹಿಡಿಯುತ್ತದೆ .
ನಾನು ಈಗ ನಿಮ್ಮೊಂದಿಗೆ ಹಂಚಿಕೊಳ್ಳಲು ಆಶಿಸುವ ವಿಷಯವೆಂದರೆ ಶ್ರಮದ ಬೆಲೆ ಅದರಲ್ಲೂ ಬಹಳ ಮುಖ್ಯವಾಗಿ ನಮ್ಮೆಲ್ಲರ ಸಕಲ ಬ್ರಹ್ಮಾಂಡವು ಅನ್ನವನ್ನು ನೀಡುವ ಕಾಯಕಯೋಗಿ ಶ್ರಮಿಕ ಜೀವಿ ದೇಶದ ಬೆನ್ನೆಲುಬು ದಂತಹ ಅನ್ನದಾತನ ಶ್ರಮದ ಬಗ್ಗೆ ಬೆಳಕು ಚೆಲ್ಲೋಣ
“ರೈತ ಎಂದರೆ ಬೇಸಾಯ ಅಥವಾ ವ್ಯವಸಾಯ ಕೃಷಿ ಒಕ್ಕಲುತನ ಮಾಡುವವರು” ಎಂದು ಹೇಳಲಾಗುತ್ತದೆ. ಹಾಗಾದ್ರೆ ವ್ಯವಸಾಯ ಎಂದರೆ ಏನು “ಆಹಾರ ಮತ್ತು ಸರಕುಗಳನ್ನು ಉತ್ಪಾದಿಸುವ ಒಂದು ವಿಧಾನವಾಗಿದೆ”. ವ್ಯವಸಾಯ ಕ್ಷೇತ್ರದಲ್ಲಿ ನಾವು ಇಬ್ಬರು ಆಶ್ರಮವನ್ನು ಮರೆಯುವಂತಿಲ್ಲ ಒಬ್ಬ ರೈತ ರೈತ ಮತ್ತೊಬ್ಬರನ್ನು ಸಂಗಾತಿಗಳಾದ ಎತ್ತುಗಳು ನಿಜವಾದ ಶ್ರಮಿಕರು ಅಂದರೆ ಅವರೆ .
“ರೈತನೇ ದೇಶದ ಬೆನ್ನೆಲುಬು “ಎಂಬ ಗಾಂಧೀಜಿಯವರ ನುಡಿ ಹಾಗೂ “ಜೈ ಕಿಸಾನ್ “ಎಂಬ ಲಾಲ್ ಬಹುದ್ದೂರ್ ಶಾಸ್ತ್ರಿ ಅವರ ಘೋಷಣೆ ನಮಗೆ ರೈತನ ಮಹತ್ವವನ್ನು ಸಾರುತ್ತದೆ .ಇಂದು ಸಿರಿವಂತ ಸಿರಿವಂತ ಎಷ್ಟಿದ್ದರೂ ಅಷ್ಟೈಶ್ವರ್ಯಗಳನ್ನು ತಿನ್ನಲು ಸಾಧ್ಯವಿಲ್ಲ ಎಲ್ಲರೂ ತಿನ್ನದೇ ಬೇಕಾಗಿರುವುದು ಆಹಾರದ ತುತ್ತನ್ನು ಅದಕ್ಕಾಗಿ ಎಲ್ಲರಿಗೂ ಮೂಲಭೂತವಾದ ಅಗತ್ಯವಾದ ಆಹಾರವನ್ನು ನೀಡುವವನು ನಮ್ಮ ಕಾಯಕಯೋಗಿ ರೈತ ನಾಗಿದ್ದಾನೆ .
ಆಹಾರವನ್ನು ಬೆಳೆಯುವ ಪುಣ್ಯ ಪುರುಷರ ರೈತ ತಾನು ಹಗಲಿರುಳೆನ್ನದೇ ಶ್ರಮವಹಿಸಿ ಬಿಸಿಲು ಮಳೆ ಚಳಿ ಗಾಳಿ ಗುಡುಗು ಸಿಡಿಲುಗಳಿಂದ ಮಾನವಕುಲಕ್ಕೆ ಸಲಹುತ್ತಿರುವ ದೈವ ಎಂದರೆ ಬದುಕಿನ ಉಸಿರು ಕೊಟ್ಟಂತಹ ರೈತರ ಮಾತ್ರ .
“ಕೈಕೆಸರಾದರೆ ಬಾಯಿ ಮೊಸರು ” “ಕಷ್ಟಪಟ್ಟು ಕೆಲಸ ಮಾಡಿದರೆ ಸ್ವರ್ಗ ಸುಖ “ಎಂಬ ಗಾದೆ ಮಾತುಗಳನ್ನು ನಾವು ನೆನಪಿಡಬೇಕು .
“ನಿನ್ನ ಬೆವರು ಸುರಿಸಿ ನೀನು ಅನ್ನ ತಿನ್ನು” ಎಂದು ಬೈಬಲ್ ಕೂಡ ಶ್ರಮದ ಮಹತ್ವವನ್ನು ಸಾರುತ್ತದೆ.
ಹಿಂದೆ ರೈತ ತಾನು ಪಡೆದ ಕೃಷಿ ಭೂಮಿಯಲ್ಲಿ ಸಾಗುವಳಿ ಮಾಡುತ್ತಿದ್ದ ಆಗ ಮಳೆ ಚೆನ್ನಾಗಿ ಬಿಡುತ್ತಿತ್ತು ಫಸಲು ಕೈಸೇರುತ್ತಿತ್ತು ಅನುದಾನವನ್ನು ನೀಡುತ್ತಾ ಸಾಗುತ್ತಿದ್ದ.
ಆದರೆ ಇಂದಿನ ರೈತನ ಪರಿಸ್ಥಿತಿ ಬಹಳ ಬದಲಾಗಿದೆ ಆಧುನಿಕತೆಯ ಭರಾಟೆಗೆ ಮಾರುಹೋಗಿ ನಾಗರೀಕತೆಯ ಸೋಗಿನಲ್ಲಿ ಜನರು ವ್ಯವಸಾಯ ಮಾಡುವುದನ್ನೇ ಮರೆತಿದ್ದಾರೆ ಎಂದು ಯಾರಿಗೂ ಶ್ರಮದ ಕೆಲಸ ಬೇಕಾಗಿಲ್ಲ ಬಟ್ಟೆ ಮಾಡಬಾರದು ಕೈಕಾಲುಗಳು ಕೆಸರ್ ಆಗಬಾರದು ನಗರ ಜೀವನವೇ ಎಲ್ಲರಿಗೂ ಬೇಕು ಹಳ್ಳಿ ಯಾಗಲಿ ಹಳ್ಳಿಯ ಕೆಲಸಕಾರ್ಯಗಳಲ್ಲಿ ಯಾರಿಗೂ ಕೂಡ ಬೇಕಾಗಿಲ್ಲ ಇಂತಹ ಮನೋಭಾವನೆ ಜನಮಾನಸದಲ್ಲಿ ಮನೆ ಮಾಡಿದ್ದು ಇದರ ಹೊಡೆತಕ್ಕೆ ಸಿಕ್ಕು ಇಂದು ಕೃಷಿ ಭೂಮಿಗಳು ಸಾಗುವಳಿ ಮಾಡದೆ ಬಂಜರು ಕೂಪಗಳಾಗಿವೆ .
ಮತ್ತೊಂದು ಕಡೆ ನಗರೀಕರಣ ಕೈಗಾರಿಕೀಕರಣ ಅಭಿವೃದ್ಧಿಯ ಹೆಸರಿನಲ್ಲಿ ರೈತನ ಫಲವತ್ತಾದ ಕೃಷಿ ಭೂಮಿಯನ್ನು ಕಿತ್ತುಕೊಂಡು ಆ ಜಾಗದಲ್ಲಿ ಕಾಂಕ್ರಿಟ್ ಕಟ್ಟಡಗಳು ದೊಡ್ಡದೊಡ್ಡ ಕೈಗಾರಿಕೆಗಳನ್ನು ಸ್ಥಾಪಿಸಿ ವಾಯುಮಾಲಿನ್ಯವನ್ನುಉಂಟು ಮಾಡುತ್ತಿರುವುದು ಬಹಳ ದುರದೃಷ್ಟಕರವಾದ ಸಂಗತಿಯಾಗಿದೆ .
ಇದರಿಂದ ರೈತನಿಗೆ ವ್ಯವಸಾಯ ಮಾಡಲು ಜಾಗವಿಲ್ಲದಂತೆ ಮಾಡಲಾಗಿದೆ ಜೊತೆಗೆ ಇದ್ದ ಸಣ್ಣಪುಟ್ಟ ಜಮೀನಿನಲ್ಲಿ ಸಾಗುವಳಿ ಮಾಡೋಣವೆಂದರೆ ಅವನಿಗೆ ಆರ್ಥಿಕ ಸಂಕಷ್ಟಗಳು ಎದ್ದು ಕಾಣುತ್ತಿವೆ ಇಂದು ರೈತನ ನೋವು ಸಂಕಟಕ್ಕೆ ಕೊನೆಯಿಲ್ಲದಂತಾಗಿದೆ ಮಾನವನ ದುರಾಸೆಯ ಫಲವಾಗಿ ಪ್ರಕೃತಿಯು ಅವನ ವಿರುದ್ಧ ಸಿಡಿದು ನಿಂತಿದೆ ನಿಸರ್ಗ ಇಂದು ನಮಗೆ ಬುದ್ಧಿ ಕಲಿಸುತ್ತದೆ ಪ್ರಕೃತಿ ವಿಕೋಪಗಳಿಗೆ ರೈತರ ಬಲಿಪಶುವಾಗಿದ್ದಾರೆ ಸಿಡಿಲು-ಮಿಂಚಿನ ಆರ್ಭಟ ಗಳ ನಡುವೆ ಸಿಕ್ಕಿ ಸಾವನ್ನಪ್ಪಿದ್ದಾನೆ ಜೊತೆಗೆ ಅವನ ಜೊತೆ ಪ್ರಾಣಿಗಳು ಕೂಡ ಸಿಡಿಲಿನ ಬಡಿತಕ್ಕೆ ಪ್ರಾಣತ್ಯಾಗ ಮಾಡುತ್ತಿರುವುದು ಬಹಳ ನೋವಿನ ಸಂಗತಿಯಾಗಿದೆ
ರೈತ ವರ್ಷವಿಡೀ ಕಷ್ಟಪಟ್ಟು ಕೆಲಸ ಮಾಡುವನು ಇನ್ನೇನು ಫಸಲು ಮನೆಗೆ ಬರುತ್ತದೆ ಎನ್ನುವಷ್ಟರಲ್ಲಿ ಅಕಾಲಿಕ ಮಳೆ ಬಂದು ಬೆಳೆದ ಬೆಳೆಯನ್ನೆಲ್ಲಾ ಕೊಚ್ಚಿಕೊಂಡು ಹೋಗುತ್ತದೆ ಇಲ್ಲವೇ ಬೆಳಗ್ಗೆ ಅಗತ್ಯ ಇರುವಾಗ ಮಳೆಬಾರದೇ ರೈತರಿಗೆ ನಷ್ಟ ಉಂಟಾಗುತ್ತದೆ .
ಒಟ್ಟಿನಲ್ಲಿ ಮಳೆ ಬಂದರೂ ಮಳೆ ಬರದಿದ್ದರೂ ರೈತರ ಪರಿಸ್ಥಿತಿ ಮಾತ್ರ ಡೋಲಾಯಮಾನವಾಗಿ ಇರುತ್ತದೆ .
ರೈತನು ಪ್ರಕೃತಿಯಿಂದ ಈ ರೀತಿಯ ನೋವನ್ನು ಒಂದರಿಂದ ಮತ್ತೊಂದು ರೀತಿಯ ನೋವನ್ನು ಬೇಕಾಗುತ್ತದೆ ರೈತರ ತನ್ನಲ್ಲಿರುವ ಜಮೀನಿನಲ್ಲಿ ವ್ಯವಸಾಯ ಮಾಡಲು ಹಣ ಸಾಲದೇ ಬ್ಯಾಂಕಿನಿಂದ ಸಾಲ ಮಾಡಿ ಬೆಳೆಯುತ್ತಾನೆ ವೇಳೆಗೆ ಸರಿಯಾಗಿ ಮಳೆಬಾರದೇ ಪಸಲು ಬಾರದೆ ನಷ್ಟವಾಗಿ ದೈಹಿಕ ಶ್ರಮದ ಜೊತೆಗೆ ಮಾನಸಿಕವಾದ ನೋವನ್ನೂ ಅನುಭವಿಸುತ್ತಾನೆ ಇಡೀ ದೇಶಕ್ಕೆ ಅನ್ನ ನೀಡಬೇಕಾದ ರೈತ ರೈತ ತಾನೆ ಜನ್ಮನೀಡಿ ಹೇಳಿದಂತಹ ತನ್ನ ಮಡಿಲ ಕುರಿಗಳಿಗೂ ಕೂಡ ಅನ್ನವ ನೀಡಲು ಹೆಣಗಾಡುವ ಪರಿಸ್ಥಿತಿಯಲ್ಲಿ ಇದ್ದಾನೆ ಎಂದರೆ ಇದಕ್ಕಿಂತ ದೊಡ್ಡ ವಿಪರ್ಯಾಸ ರೈತನಿಗೆ ಇದೆಯೇ ಒಂದು ಕಡೆ ಅನ್ನ ನೀಡಲು ಆಗಲಿಲ್ಲವೆ ಎಂಬ ಕೊರಗು ಆದರೆ ಮತ್ತೊಂದು ಕಡೆ ಬ್ಯಾಂಕಿನವರಿಗೆ ಸೇರಿಸಬೇಕಾದ ಸಾಲದ ಹೊರೆ ಮತ್ತೊಂದು ಕಡೆ ಇವೆಲ್ಲವುಗಳ ನಡುವೆ ರೈತನ ಬದುಕು ಜರ್ಜರಿತವಾಗಿತ್ತು ನೋವಿನಲ್ಲೇ ಪರಿತಪಿಸುವಂತಾಗಿದೆ.
ಹಾಗಾದರೆ ಇಂತಹ ನೋವುಂಡು ಬದುಕುವ ರೈತನ ಪರಿಸ್ಥಿತಿ ಸುಧಾರಿಸುವುದು ಹೇಗೆ ಇದಕ್ಕೆಲ್ಲ ಹೊಣೆ ಯಾರು ಎಂದು ನಾವು ಆಲೋಚಿಸಲೇ ಬೇಕು .
ಪ್ರತಿಯೊಂದು ಜೀವಿಗೂ ಅನ್ನ ನೀಡುವ ರೈತನ ಸಂಕಷ್ಟಗಳಿಗೆ ಸಾಂತ್ವನದ ಮುಲಾಮು ಹಚ್ಚುವ ಆದರೂ ಯಾರೂ ಹೇಗೆ ಎಂಬ ಪ್ರಶ್ನೆಗಳು ನಮ್ಮನ್ನು ಕಾಡುತ್ತವೆ .
ಈ ನಿಟ್ಟಿನಲ್ಲಿ ಪ್ರಜ್ಞಾವಂತ ನಾಗರಿಕರು ಯೋಚನೆ ಮಾಡಬೇಕು ರೈತನಿಗೆ ಅವನ ಒಂದು ಸಂಕಷ್ಟಗಳಿಗೆ ಸೂಕ್ತವಾದ ಪರಿಹಾರ ಒದಗಿಸುವಲ್ಲಿ ಹೋರಾಡಬೇಕು ಜೊತೆಗೆ ತಾನೂ ಕೂಡ ತನ್ನ ಕೈಲಾದ ಅಂತಹ ಸೇವೆಯನ್ನ ರೈತರಿಗಾಗಿ ಮಾಡಬೇಕು ಅವನು ನಮ್ಮ ಹಾಗೆ ಸೂಟು ಬೂಟು ಹಾಕಿಕೊಂಡು ದುಡಿಯಲು ಹೊರಟರೆ ನಾವು ತಿನ್ನುವುದಾದರೂ ಏನನ್ನು ಎಂದು ಎಲ್ಲರೂ ಆಲೋಚಿಸೋಣ.
ಈ ನಿಟ್ಟಿನಲ್ಲಿ ಸರ್ಕಾರಗಳು ಸಾಕಷ್ಟು ಚಿಂತನೆಯನ್ನು ಮಾಡಬೇಕಾಗಿದೆ ಪ್ರತಿಯೊಂದು ದೇಶವೂ ಕೂಡ ತನ್ನ ದೇಶದ ರೈತರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಸೂಕ್ತವಾದಂತಹ ತೀರ್ಮಾನಗಳನ್ನು ಕೈಗೊಳ್ಳಬೇಕು ಸೂಕ್ತ ಸಮಯದಲ್ಲಿ ಸೂಕ್ತವಾದ ನೆರವನ್ನು ನೀಡಬೇಕು ಬೆಳೆ ಪರಿಹಾರ ದಂತಹ ಯೋಜನೆಗಳು ಸೇರಿದಂತೆ ಬೆಳೆಸಾಲ ಬೆಳೆ ವಿಮೆ ಗರಿಮೆಗಳನ್ನು ಪ್ರಾಮಾಣಿಕವಾಗಿ ರೈತರಿಗೆ ತಲುಪಿಸುವ ದಾರಿಯಲ್ಲಿ ಹೆಜ್ಜೆ ಇಡಬೇಕಾಗಿದೆ ಕೇವಲ ಇವೆಲ್ಲ ಘೋಷಣೆಗಳ ಆಗಿ ಉಳಿಯದೆ ರೈತನ ನೋವುಗಳಿಗೆ ಅವನ ಸಂಕಷ್ಟಗಳಿಗೆ ಶಾಶ್ವತ ವಾದಂತಹ ಪರಿಹಾರವನ್ನು ಹುಡುಕುವಂತಹ ಮುಲಾಮು ಹಚ್ಚುವಂತಹ ಯೋಜನೆಗಳನ್ನು ಸರ್ಕಾರ ಜಾರಿ ಮಾಡಬೇಕು ರೈತನ ಏಳಿಗೆಯೇ ಸರ್ಕಾರದ ಯೋಜನೆಗಳ ಮೊದಲ ಆದ್ಯತೆಯಾಗಬೇಕು ವ್ಯವಸಾಯ ಮಾಡುವವರಿಗೆ ಪ್ರೋತ್ಸಾಹ ನೀಡಬೇಕು ಜನತೆಯಲ್ಲಿ ವ್ಯವಸಾಯ ಮಾಡುವ ಉತ್ಸಾಹ ಮೂಡುವಂತಹ ಪ್ರೋತ್ಸಾಹದಾಯಕ ಆಶಾದಾಯಕ ಕಾನೂನುಗಳನ್ನು ರೂಪಿಸಬೇಕು ಈ ನಿಟ್ಟಿನಲ್ಲಿ ಸರ್ಕಾರ ಪ್ರಾಮಾಣಿಕವಾಗಿ ಪ್ರಯತ್ನಿಸುವ ಮೂಲಕ ದೇಶದ ಬೆನ್ನೆಲುಬಾದ ರೈತರಿಗೆ ಭದ್ರತೆಯನ್ನು ಒದಗಿಸಿಕೊಡಬೇಕು ಒಂದು ದೇಶದ ರೈತರ ಪರಿಸ್ಥಿತಿ ಸುಧಾರಿಸಲು ಹೊರತು ಆದೇಶ ಎಂದು ಅಭಿವೃದ್ಧಿ ಕಾಣಲು ಸಾಧ್ಯವಿಲ್ಲ ಅದರಲ್ಲೂ ಭಾರತ ವ್ಯವಸಾಯ ಪ್ರಧಾನವಾದ ದೇಶ ದೇಶದ ಬಹುಸಂಖ್ಯಾತರ ವ್ಯವಸಾಯವನ್ನೇ ಅವಲಂಬಿಸಿರುವುದರಿಂದ ನಮ್ಮ ದೇಶ ಅಭಿವೃದ್ಧಿಯಾಗಬೇಕು ಎಂದರೆ ಮೊದಲು ರೈತರ ಅಭಿವೃದ್ಧಿಯಾಗಬೇಕು ರೈತನ ಏಳಿಗೆ ದೇಶದ ಏಳಿಗೆ ರೈತನ ಅಭಿವೃದ್ಧಿಯೇ ದೇಶದ ಅಭಿವೃದ್ಧಿರೈತನ ಸಂತೋಷವೇ ದೇಶದ ಸಂತೋಷ
ಈ ನಿಟ್ಟಿನಲ್ಲಿ ಎಲ್ಲರೂ ರೈತನಿಗೆ ವಂದನೆಯನ್ನು ಸಲ್ಲಿಸಲೇಬೇಕು ಕೇವಲ ಶ್ರಮಿಕರ ದಿನ ಅಥವಾ ಕಾರ್ಮಿಕರ ದಿನದಂದು ಮಾತ್ರ ಶ್ರಮಿಕ ವರ್ಗಕ್ಕೆ ವಂದನೆ ಸಲ್ಲಿಸಿ ಭಾಷಣಗಳಿಗೆ ಮಾತ್ರ ಸೀಮಿತವಾಗದಂತೆ ನೈಜವಾದ ಕಾರ್ಯರೂಪದ ಮೂಲಕ ರೈತರನ್ನು ಅವನ ಪರಿಸ್ಥಿತಿಯನ್ನು ಮೇಲೆತ್ತುವ ಪ್ರಯತ್ನವಾಗಿ ಸಾಗಬೇಕು ಎಂಬ ಸದಾಶಯದೊಂದಿಗೆ ನನ್ನ ಲೇಖನಕ್ಕೊಂದು ವಿರಾಮವನ್ನು ಹಿಡಿದಿದ್ದೇನೆ .
ಧನ್ಯವಾದಗಳೊಂದಿಗೆ,
ಅನುಸೂಯ ಯತೀಶ್
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್