ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಬಂಗಾರದ ಮನುಷ್ಯ ಎಂಬ ಅದ್ಭುತ ಚಿತ್ರದ ಕುರಿತು

ಅನುಸೂಯ ಯತೀಶ್

ವಿಷಯ : ಸಾರ್ವಭೌಮ ಡಾ: ರಾಜಕುಮಾರ್ ಚಲನಚಿತ್ರದ ಕುರಿತು .

ಚಿತ್ರ :

ಕಥೆ : ಟಿ ಕೆ ರಾಮರಾವ್ ಕಾದಂಬರಿಯಾಧಾರಿತ

ಚಿತ್ರಕಥೆ : ಎಸ್ ಸಿದ್ದಲಿಂಗಯ್ಯ

ನಿರ್ಮಾಣ : ಶ್ರೀನಿಧಿ ಪ್ರೊಡಕ್ಷನ್ಸ್

ಛಾಯಾಗ್ರಹಣ : ಡಿವಿ ರಾಮರಾವ್

ಸಾಹಿತ್ಯ : ಹುಣಸೂರು ಕೃಷ್ಣಮೂರ್ತಿ

ಸಂಗೀತ : ಜಿ ಕೆ ವೆಂಕಟೇಶ್

ಹಿನ್ನೆಲೆಗಾಯನ : ಪಿಬಿ ಶ್ರೀನಿವಾಸ್ ಪಿ ಸುಶೀಲ

ಹಾಡುಗಳ ಸಂಖ್ಯೆ: ಐದು

ನಿರ್ಮಿಸಿದ ದಾಖಲೆ : ಎರಡು ವರ್ಷಗಳ ನಿರಂತರ ಪ್ರದರ್ಶನ

ಬಿಡುಗಡೆಯಾದ ವರ್ಷ : 1972

ಪಾತ್ರವರ್ಗ : ನಾಯಕನಟ ಡಾಕ್ಟರ್ ರಾಜಕುಮಾರ್ , ನಾಯಕನಟಿ ಭಾರತಿ, ಬಾಲಕೃಷ್ಣ, ಶ್ರೀನಾಥ್, ಆರತಿ, .ಎಂ ಪಿ ಶಂಕರ್ ,ದ್ವಾರಕೀಶ್, ವಜ್ರಮುನಿ, ಬಿ .ವಿ. ರಾಧ .

Bangaarada Manushya - Wikipedia

ಬಂಗಾರ ಬಹಳ ಅಮೂಲ್ಯವಾದ ವಸ್ತು.
ಹೊಳೆಯುವುದು ಅದರ ಗುಣ . ಪ್ರತಿಯೊಬ್ಬರೂ ಆಶಿಸುವ ವಸ್ತು. ಬಂಗಾರ ಎಂಬ ಶಬ್ದ ನಮ್ಮ ಕಿವಿಯ ಮೇಲೆ ಬಿದ್ದ ಕೂಡಲೇ ಮನಸ್ಸು ಪ್ರಫುಲ್ಲಗೊಳ್ಳುತ್ತದೆ.
ಮೈ ಮನಗಳು ರೋಮಾಂಚನಗೊಳ್ಳುತ್ತವೆ . ಮಕ್ಕಳಿಂದ ಹಿಡಿದು ಮುದುಕರವರೆಗೂ ಇಷ್ಟ ಪಡುವರು . ಆಭರಣ ಪ್ರಿಯರ ಜೀವವೆ ಬಂಗಾರ .

ಇಷ್ಟೆಲ್ಲಾ ಮಹತ್ವ ಒಂದು ವಸ್ತುವಿಗೆ ಇರುವುದಾದರೆ ಇದಕ್ಕೆ ಸರಿಸಾಟಿಯಾದ ಮತ್ತೊಂದು ಬಂಗಾರ ನಮ್ಮ ಕರ್ನಾಟಕ ದಲ್ಲಿದೆ. ಯಾವುದು ಅಂತ ಆಲೋಚಿಸುತ್ತಿರುವಿರಾ ಅವರೆ ನಮ್ಮ ಕನ್ನಡದ ಕಣ್ಮಣಿ ,ಸಾರ್ವಭೌಮ, ವರನಟ , ದಾದಾಸಾಹೇಬ್ ಫಾಲ್ಕೆ ವಿಜೇತ , ಎಲ್ಲರ ಮನೆ ಮನಗಳಲ್ಲಿ ರಾರಾಜಿಸುತ್ತಿರುವ ಬಂಗಾರದ ಮನುಷ್ಯ ಡಾ . ರಾಜ್ ಕುಮಾರ್
ಎಲ್ಲಾ ಅಭಿಮಾನಿಗಳನ್ನು ಅಭಿಮಾನಿ ದೇವರೆ ಎಂದು ಸಂಬೋಧಿಸುವ ಮೂಲಕ ಕನ್ನಡಿಗರ ಹೃದಯದಲ್ಲಿ ರಾಜಣ್ಣ ಎಂದು ನೆಲೆಯೂರಿರುವ ಕನ್ನಡ ನಾಡು ಕಂಡ ಅಮೋಘ ನಟ ಶೀರೋಮಣಿ ಎಂದರೆ ಅದು ಡಾ. ರಾಜ್ ರವರು .

ಬಂಗಾರದ ಮನುಷ್ಯ ಎಂಬ ಸಿನಿಮಾದಲ್ಲಿ ನಟಿಸುವ ಮೂಲಕ ಅಂದಿನಿಂದ ಇಂದಿನವರೆಗೂ ಬಂಗಾರದ ಮನುಷ್ಯ ಆಗಿ ಉಳಿದಿದ್ದಾರೆ.
ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ರಾಜ್ ಅಭಿನಯಿಸದ ಸಿನಿಮಾಗಳಿಲ್ಲ . ಕಾಮಿಡಿ ಟ್ರ್ಯಾಜಿಡಿ ಸಾಹಸ ಪೌರಾಣಿಕ ಐತಿಹಾಸಿಕ ಪ್ರೇಮ ವಿರಹ ಕೋಪ ಹಾಸ್ಯ ನೋವು ನಲಿವು ಕಷ್ಟ ಸುಖ ವಿಲ್ಲನ್ ರೈತ ಕೂಲಿ ರಾಜ ಸೈನಿಕ ಪ್ರೇಮಿ ಹೀಗೆ ಯಾವುದೇ ಪಾತ್ರ ನೀಡಿದರೂ ಲೀಲಾಠಾಲವಾಗಿ ಅಭಿನಯಿಸುವ ಅವರ ಮನೋಜ್ಞ ಅಭಿನಯಕೆ ಸರಿಸಾಟಿಯಿಲ್ಲಾ . ಕನ್ನಡ ನಾಡು ಕಂಡ ಅದ್ಭುತ ಪ್ರತಿಭೆ ಅಂದರೆ ಅದು ರಾಜಣ್ಣ .

ಅವರು ತೆರೆಯ ಮೇಲೆ ಬಂದರೆ ತೆರೆಗೊಂದು ಮೌಲ್ಯ ಬರುತ್ತಿತ್ತು. ಅಂತಹ ಮನ ಮಿಡಿಯುವ ನಟನೆಯ ಮೂಲಕ ಕೋಟಿ ಕೋಟಿ ಚಿತ್ರ ರಸಿಕರ ಆರಾಧ್ಯದೈವ ಆಗಿ ಹೊಳೆಯುತ್ತಿರುವ ಬಂಗಾರದ ಮನುಷ್ಯ ಎಂದರೆ ಅವರೆ ಡಾ. ರಾಜ್ ಕುಮಾರ್.

ನಾವೀಗ ಅವರು ಅಭಿನಯಿಸಿದ ಬಂಗಾರದ ಮನುಷ್ಯ ಸಿನಿಮಾ ಬಗ್ಗೆ ಒಂದಷ್ಟು ಬೆಳಕು ಚೆಲ್ಲುವ ಪ್ರಯತ್ನ ಮಾಡೋಣ .
ಈ ಸಿನಿಮಾದ ಮುಖ್ಯಭೂಮಿಕೆಯಲ್ಲಿ ವರನಟ ನಟ ಸಾರ್ವಭೌಮ ಡಾಕ್ಟರ್ ರಾಜಕುಮಾರ್ ಅವರು ಅಭಿನಯಿಸುತ್ತಾರೆ. ಕನ್ನಡ ಚಿತ್ರರಂಗದ ಇತಿಹಾಸದ ಪುಟಗಳನ್ನು ತಿರುವಿದಾಗ ಡಾಕ್ಟರ್ ರಾಜಕುಮಾರ್ ಅವರು ಕನ್ನಡ ಚಲನಚಿತ್ರರಂಗದ ಧ್ರುವತಾರೆ ಯಾಗಿ ಮಿನುಗಿದ್ದಾರೆ ಎಂಬುದಕ್ಕೆ ಇಂದು ಎಲ್ಲಾ ಕಲಾಭಿಮಾನಿಗಳ ಮನಸ್ಸಿನಲ್ಲಿ ಆರಾಧ್ಯದೈವವಾಗಿ ಉಳಿದಿರುವುದಕಿಂತ ದೊಡ್ಡ ಸಾಕ್ಷಿ ಬೇಕಾಗಿಲ್ಲ.

1929ರ ಏಪ್ರಿಲ್ 24ರಂದು ಚಾಮರಾಜನಗರದ ದೊಡ್ಡ ಗಾಜನೂರಿನಲ್ಲಿ ದೊಡ್ಡ ರಂಗಭೂಮಿ ಕುಟುಂಬವೊಂದರಲ್ಲಿ ಜನಿಸಿದರು .ಇವರು ವರ್ಣರಂಜಿತ ನಾಯಕ ನಟರು ತಮ್ಮ 12ನೇ ವರ್ಷದಲ್ಲಿ ಬಾಲನಟನಾಗಿ ಕನ್ನಡ ಚಲನಚಿತ್ರರಂಗಕ್ಕೆ ಪ್ರವೇಶಿಸಿ ಕನ್ನಡ ಸಿನಿಮಾಗಳ ಬಗ್ಗೆ ಇತರ ಜನರು ಹುಬ್ಬೇರುವಂತೆ ಮಾಡುವವನು ನೋಡುವಂತೆ ಛಾಪು ಮೂಡಿಸಿದ ಹೆಗ್ಗಳಿಕೆ ಇವರದು. ಚಲನಚಿತ್ರರಂಗದ ಅತ್ಯುನ್ನತ ಪ್ರಶಸ್ತಿಯಾದ ದಾದಾಸಾಹೇಬ್ ಫಾಲ್ಕೆ ಯನ್ನು ಮೊದಲ ಬಾರಿಗೆ ತಮ್ಮ ಮುಡಿಗೇರಿಸಿಕೊಂಡ ನಟ ಮುತ್ತುರಾಜ್. ಇವರ ಮೊದಲ ನಾಮದೇಯ 1954ರಲ್ಲಿ ತೆರೆಕಂಡ ಅವರ ಮೊದಲು ನಾಯಕ ನಟನಾಗಿ ಅಭಿನಯಿಸಿದ ಸಿನಿಮಾ ಬೇಡರಕಣ್ಣಪ್ಪ .ಈ ಚಿತ್ರಕ್ಕೆ ನಿರ್ದೇಶಕರಾದ ಎಚ್ಎಂ ಸಿಂಹ ಮುತ್ತುರಾಜ ರಾಜಕುಮಾರ್ ಅಂತ ಹೊಸ ನಾಮಕರಣ ಮಾಡಿದರು. ಅಮ್ಮ ಅಂದಿನಿಂದ ಇಂದಿನವರೆಗೂ ಎಲ್ಲಾ ಚಿತ್ರ ಪ್ರೇಮಿಗಳ ಹೃದಯ ಸಿಂಹಾಸನದಲ್ಲಿ ರಾಜಕುಮಾರನಂತೆ ರಾರಾಜಿಸುತ್ತಿದ್ದಾರೆ

70ರ ದಶಕದಲ್ಲಿ ಕನ್ನಡ ಚಿತ್ರೋದ್ಯಮ ಮದ್ರಾಸ್ನಲ್ಲಿ ನೆಲೆಯೂರಿತ್ತು ಚಟುವಟಿಕೆಗಳು ನಡೆಯುತ್ತಿದ್ದವು ಚಿತ್ರೀಕರಣದ ಅನುಕೂಲಕ್ಕಾಗಿ ಡಾಕ್ಟರ್ ರಾಜಕುಮಾರ್ ಅವರು ಮದರಾಸಿನಲ್ಲಿಯೇ ವಾಸವಾಗಿದ್ದರು ಅಂದು ಜನರಿಗೆ ಯಾವುದೇ ಮನೋರಂಜನೆಯ ಮೂಲಗಳು ಇರಲಿಲ್ಲ ಅಂತಹ ಸಂದರ್ಭದಲ್ಲಿ ಬಂಗಾರದ ಮನುಷ್ಯ ಸಿನಿಮಾ ಕನ್ನಡದಲ್ಲಿ ತೆರೆಕಂಡಾಗ ಹೊಸ ದಾಖಲೆಯನ್ನು ಬರೆಯಿತು ಇ ಸಿನಿಮಾ ಜನರಿಗೆ ಕೇವಲ ಮನೋರಂಜನೆಯ ಮೂಲ ಮಾತ್ರವಾಗದೆ ಅಂದಿನ ಸಮಾಜದಲ್ಲಿ ಸಾಕಷ್ಟು ಬದಲಾವಣೆ ತಂದಿತು

1972 ರಲ್ಲಿ ಬಿಡುಗಡೆಯಾದ ಈ ಸಿನಿಮಾ ಸಿದ್ದಲಿಂಗಯ್ಯನವರ ನಿರ್ದೇಶನದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಜಿ ಕೆ ವೆಂಕಟೇಶ್ ಅವರ ಸಂಗೀತ ನಿರ್ದೇಶನದಲ್ಲಿ ಅಮೋಘವಾಗಿ ಮೂಡಿಬಂದಿತ್ತು ಡಾಕ್ಟರ್ ರಾಜಕುಮಾರ್ ಅವರು ಮಣ್ಣಿನ ಮಗನಾಗಿ ರೈತನ ಪಾತ್ರದಲ್ಲಿ ನಟಿಸಿ ಹಳ್ಳಿಗಳ ಮೌಲ್ಯವನ್ನು ಗಗನದೆತ್ತರಕ್ಕೆ ಕೊಂಡೊಯ್ದರು. ಹಳ್ಳಿಯಲ್ಲಿದ್ದ ಅದೆಷ್ಟೋ ಯುವಕರು ವ್ಯವಸಾಯ ಬಿಟ್ಟು ಪಟ್ಟಣ ಸೇರಿ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಿದ್ದರು. ಬಂಗಾರದ ಮನುಷ್ಯ ಸಿನಿಮಾ ನೋಡಿ ಅದರಿಂದ ಪ್ರೇರೇಪಿತರಾಗಿ ತಮ್ಮ ಊರಿಗೆ ವಾಪಸಾದರು ಕೃಷಿ ಚಟುವಟಿಕೆಗಳಲ್ಲಿ ತೊಡಗಿ ಉತ್ತಮ ಜೀವನ ನಿರ್ವಹಣೆ ಮಾಡುವಂತೆ ಪ್ರೇರೇಪಿಸುವಲ್ಲಿ ಸಿನಿಮಾ ಯಶಸ್ವಿಯಾಗಿತ್ತು.

ಬಂಗಾರದ ಮನುಷ್ಯ ಅಷ್ಟರಮಟ್ಟಿಗೆ ಸಮಾಜವನ್ನು ಆವರಿಸಿತ್ತು ಎಂದರೆ ಒಮ್ಮೆ ಸಿನಿಮಾ ನೋಡಿದವರು ಮತ್ತೆ ಮತ್ತೆ ಹತ್ತಾರು ಬಾರಿ ಸಿನಿಮಾ ನೋಡಲು ಹೋಗುತ್ತಿದ್ದರು ಸತತವಾಗಿ ಎರಡು ವರ್ಷಗಳ ಕಾಲ ನಿರಂತರ ಪ್ರದರ್ಶನ ಕಂಡ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಅಮ್ಮ ಸಾವಿರಾರು ಜನರ ಜೀವನಶೈಲಿ ಬದಲಿಸುವ ಶಕ್ತಿ ಒಂದು ಸಿನಿಮಾಗೆ ಇದೆ ಎಂದು ತೋರಿಸಿಕೊಟ್ಟ ಸಿನಿಮಾ ಬಂಗಾರದ ಮನುಷ್ಯ ಈ ಚಿತ್ರ ಚಿತ್ರದ “ಆಗದು ಎಂದು ಕೈಲಾಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ” ಎಂಬ ಹಾಡು ಕೇಳಿ ಅದೆಷ್ಟು ಜನ ತಮ್ಮ ಬದುಕಿನ ದೃಷ್ಟಿಕೋನವನ್ನೇ ಬದಲಿಸಿಕೊಂಡರಂತೆ.

ಈ ಹಾಡು ಸಾಧನೆಗೆ ಅಸಾಧ್ಯವಾದುದು ಯಾವುದು ಇಲ್ಲಾ ಎಂಬುದನ್ನು ಸಾಬೀತುಪಡಿಸುತ್ತದೆ.
ಇಲ್ಲಿ ನಾಯಕ ನಟ ಮಣ್ಣನ್ನೆ ನಂಬಿ ದೃಡ ಸಂಕಲ್ಪ ಮಾಡಿ ಬಂಜರು ಭೂಮಿಯಲ್ಲಿ ಬಂಗಾರದ ಬೆಳೆ ಬೆಳೆದು ಬಂಗಾರದ ಮನುಷ್ಯನೇ ಆಗುವನು .ಇಲ್ಲಿ ನಾಯಕ ಹಾಡುವ ಹಾಡು ಇಂದಿಗೂ ಎಲ್ಲಾ ಯುವ ಪ್ರತಿಭೆಗಳಿಗೆ ದಾರಿ ದೀಪವಾಗಿದೆ .
ಇದು ರಾಜಕುಮಾರ್ ಬದುಕಿನ ಮಹತ್ವದ ಮೈಲಿಗಲ್ಲಾಯಿತು .

ಈ ಸಿನಿಮಾದಲ್ಲಿ ನಾಯಕ ಕಷ್ಟ ಬಿದ್ದು ಕೃಷಿ ಮಾಡಿ ಎಲ್ಲರ ಲಾಲನೆ ಪಾಲನೆ ಮಾಡಿ ಗೂಳಿಯ ದಾಳಿಗೆ ಸಿಲುಕಿ ತನ್ನ ಹೆಂಡತಿಯನ್ನು ಕಳೆದುಕೊಂಡ ಕಥೆಯಲ್ಲಿ ನಾಯಕನ ಮನೋಜ್ಞ ಅಭಿನಯ
ಮೂಡಿಬಂದಿದೆ. ಪ್ರೀತಿ ಸರಸ ತ್ಯಾಗ ಸಾಧನೆ ಸಂದೇಶ ಪ್ರತಿಯೊಂದನ್ನು ಹೊತ್ತು ತಂದ ಸಿನಿಮಾ ಎಂದರೆ ಅದು ಬಂಗಾರದ ಮನುಷ್ಯ.

ಇಷ್ಟೆಲ್ಲಾ ವಿಶೇಷತೆಗಳನ್ನು ಹೊಂದಿರುವ ಈ ಸಿನಿಮಾದಲ್ಲಿ ಒಟ್ಟು ಐದು ಹಾಡುಗಳಿವೆ.

  1. ಬಾಳ ಬಂಗಾರ ನೀನು ಹಣೆಯ ಸಿಂಗಾರ ನೀನು.
  2. ನಗು ನಗುತಾ ನಲಿ
  3. ಆಹಾ ಮೈಸೂರು ಮಲ್ಲಿಗೆ.
  4. ಆಗದು ಎಂದು ಕೈಲಾಗದು ಎಂದು .
  5. ಹನಿ ಹನಿಗೂಡಿದರೆ ಹಳ್ಳ ಬಾಳ ಬಂಗಾರ ನೀನು ಹಣೆಯ ಸಿಂಗಾರ ನೀನು ನಿನ್ನ ಕೈಲಾಡೋ ಗೊಂಬೆ ನಾನಯ್ಯ

ಈ ಹಾಡನ್ನು ಜಿ ಕೆ ವೆಂಕಟೇಶ್ ಅವರು ಸಂಗೀತ ನಿರ್ದೇಶಿಸಿ ಪಿ ಸುಶೀಲಾ ರವರು ಹಾಡಿರುವ ಈ ಹಾಡು ನಾಯಕಿಯಾದ ಭಾರತಿಯವರು ನಾಯಕ ನಟನಾದ ರಾಜಕುಮಾರ್ ಅವರಿಗೆ ಹಾಡುವ ಹಾಡು ಇದರಲ್ಲಿ ಅವರ ಚೆಲುವನ್ನು ವರ್ಣಿಸುವ ಜೊತೆಗೆ ನಾನು ಸದಾ ನಿನ್ನ ಜೊತೆಯಾಗಿರುತ್ತೇನೆ ಎಂಬ ಸಂದೇಶ ಸಾರುತ್ತದೆ.

ಒಬ್ಬ ಯಶಸ್ವಿ ಪುರುಷನ ಹಿಂದೆ ಮಹಿಳೆ ಇರುತ್ತಾಳೆ ಎಂಬುದಕ್ಕೆ ಇಂಬುಕೊಡುವಂತೆ ಹಾಡು ಇದೆ .

ಈ ಚಿತ್ರದಲ್ಲಿ ಇರುವ ಎಲ್ಲಾ ಹಾಡುಗಳು ವರ್ಣಿಸುವ ರೀತಿ ಇವರ ಪಾತ್ರ ಪ್ರತಿಯೊಂದು ಮನಮಿಡಿಯುವಂತೆ ಮೂಡಿಬಂದಿವೆ.

ಈ ಹಾಡುಗಳು ಕೇವಲ ಅಕ್ಷರ ಅಥವಾ ಪದಪುಂಜವನ್ನು ಮಾತ್ರ ಹೊಂದಿಲ್ಲಾ ಅಮೋಘ ಸಾಹಿತ್ಯವನ್ನು ಹೊಂದಿವೆ.

ಪ್ರತಿಯೊಬ್ಬರನ್ನು ತನ್ನೆಡೆಗೆ ಸೆಳೆಯುವ ಸಾಹಿತ್ಯ ಈ ಹಾಡುಗಳಿದೆ.

ಬಂಗಾರ ಎಂಬುದು ಹೆಣ್ಣಿಗೆ ಅಮೂಲ್ಯವಾದ ಆವರಣ ಆದರೆ ಅದನ್ನು ಮೀರಿದ ಸಂದೇಶ ಬಾಳ ಬಂಗಾರ ನೀನು ಹಾಡಿನ ಮೂಲಕ ವ್ಯಕ್ತವಾಗಿದೆ ಪ್ರಿಯತಮ ಅಥವಾ ಗಂಡನೇ ಹೆಣ್ಣಿನ ಬದುಕಿನ ಬಂಗಾರ.ಹಣೆಯ ಸಿಂಗಾರ ಕೂಡ ನೀನೆ ಅದಕ್ಕಿಂತ ಬೇರೆ ಒಡವೆ ಅಲಂಕಾರ ಬೇಡ ಅನ್ನುವ ಕವಿಯ ಭಾವಕೆ ನನ್ನದೊಂದು ಸೆಲ್ಯೂಟ್ . ಈ ಅಮೂಲ್ಯ ಸಂದೇಶವನ್ನು ಹೊತ್ತು ತಂದಿದೆ ಹಾಡಿನ ಮೂಲಕ.

ಹಗಲು-ಇರುಳು ಎಲ್ಲ ಈ ಜೀವ ನಿನ್ನನ್ನೇ ಬಯಸುವುದು ನೀ ಬೇಡ ಎಂದರು ದೂರ ತಳ್ಳಿದರು ಜರಿದರೂ ನಾನು ನಿನ್ನ ಬಿಟ್ಟು ದೂರ ಹೋಗಲಾರೆ ನಿನಗೆ ನೆರಳಾಗಿ ನಾ ಇರುವೆ ಎಂಬ ನಾಯಕಿಯ ಪ್ರೇಮ ಭಾವಗಳು ಎಲ್ಲ ಜನರ ಮನಸ್ಸನ್ನು ಸೂರೆಗೊಂಡಿದೆ.

ಈ ಹಾಡಿನಲ್ಲಿರುವ ತಂದನೋ ತಾನು ತಂದನೋ ತಾನು ಎಲ್ಲರ ಒಂದು ಮನ ಸೆಳೆಯುವಲ್ಲಿ ಅಮೋಘ ಪಾತ್ರವಹಿಸಿತು ತಂದಾನಿ ತಾನೋ ತಾನಿ ತಂದಾನೋ ನೀನು ಎದೆ ನೀನು ಎದೆಯ ಸೆರೆಮನೆ ನಿನ್ನೆದೆಯ ಸೆರೆಮನೆಯ ಚಂದ ನಾನು ನೂರಾರು ಜನುಮ ಬಂದರೂ ನಿನ್ನ ಸತಿಯಾಗಿ ಬರುವೆ ಎಂಬ ಸತಿಧರ್ಮ ಸಾರುವ ಈ ಸಾಲುಗಳು ಎಲ್ಲ ಹೆಂಗೆಳೆಯರ ಹೃದಯದಲ್ಲಿ ತನ್ನ ಗಂಡನ ಬಗ್ಗೆ ಅಭಿಮಾನ ಪ್ರೀತಿ ತೋರುವಂತೆ ಮಾಡಿದವು ಎಂದೇ ಹೇಳಬಹುದು.

ನಾಯಕ-ನಾಯಕಿಯ ಪ್ರೇಮಸಲ್ಲಾಪದ ರಮ್ಯತೆಯ ಹಾಡುಗಳು ಭಾರತೀಯವರ ಕಣ್ಮನ ಸೆಳೆವ ನೃತ್ಯವು ಕೂಡ ಹಾಡುಗಳ ಪ್ರೌಢಿಮೆಯನ್ನು ಹೆಚ್ಚಿಸಿದೆ .

ಸದಾ ಎಲ್ಲರನ್ನೂ ಕಾಡುವ ಈ ಹಾಡುಗಳು ಎಷ್ಟು ಸರಿ ಸಾರಿ ಹಾಡಿದರೂ ಮತ್ತೆ ಮತ್ತೆ ನಾಲಿಗೆ ಮೇಲೆ ನಲಿದಾಡುತ್ತವೆ.

ಅಂದಿನಿಂದ ಇಂದಿನವರೆಗೂ ಪ್ರತಿಯೊಬ್ಬರ ಮನಸೂರೆಗೊಂಡ ಪ್ರಸಿದ್ಧ ಹಾಡುಗಳು ಇವು. ಇಷ್ಟೆಲ್ಲಾ ಹೊಸ ಹಾಡುಗಳು ಬಂದರೂ 70ರ ದಶಕದ ಈ ಹಾಡುಗಳು ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದೆ ಎಂದರೆ ಅವುಗಳ ಮಹತ್ವ ಎಷ್ಟಿದೆ ಎಂದು ನಾವು ಅರಿಯಬೇಕು .

ಬಹಳ ಕಾಡುವ ಈ ಹಾಡುಗಳು ಸ್ಫೂರ್ತಿಯ ಸೆಲೆಯಾಗಿದೆ .ಇದರಲ್ಲಿ ಮೂಡಿಬಂದಿರುವ ಇಂಪಾದ ಸಂಗೀತ ಮತ್ತೆ ಮತ್ತೆ ಕೇಳಬೇಕೆಂದು ಮನಸೆಳೆಯುತ್ತದೆ. ನನ್ನ ಮನಸ್ಸಿನಲ್ಲಿ ಅದಮ್ಯವಾದ ಸಂತಸ ಮೂಡಿಸುತ್ತವೆ. ಕಣ್ಮನ ನೋಟ ನಾಯಕ-ನಾಯಕಿಯರ ಮನಮುಟ್ಟುವ ಅಭಿನಯ ನನ್ನ ಸದಾ ಕಾಡುತ್ತ ಮತ್ತೆ ಮತ್ತೆ ಕೇಳಬೇಕು ಎಂಬ ಅಭಿಲಾಷೆ ಮೂಡಿಸುತ್ತದೆ.

ನಿಮ್ಮನ್ನು ಸದಾ ಕಾಡುತ್ತಿವೆಯಾ ಈ ಹಾಡುಗಳು ಹಾಗೂ ಸಿನಿಮಾ.

ಹಾಗಾದರೆ ಬನ್ನಿ ಬೇಗ ಬೇಗ …ಎಲ್ಲರೂ ಕೂಡಿ ಮತ್ತೊಮ್ಮೆ ಸಿನಿಮಾ ನೋಡೋಣ…… ಹಾಡೋಣ…. …

https://youtu.be/OJU-4_Yh5QA

ಅನುಸೂಯ ಯತೀಶ್.