೧
ಹೆಂಡತಿ : ರೀ….. ಅಂಗಡಿಗೆ ಹೋಗಿ ಒಂದು ಕೆ.ಜಿ. ಸಕ್ಕರೆ ತನ್ನಿ….
ಗಂಡ : ನಿನ್ನ ತುಟಿಯಲ್ಲಿ ಅಷ್ಟು ಸಕ್ಕರೆ ಇರೋವಾಗ ಬೇರೆ ಸಕ್ಕರೆ ಬೇಕೇನೆ ?
ಹೆಂಡತಿ : ನಿಮ್ಗೆ ಓಕೆ, ಆದ್ರೆ ನಿಮ್ಮ ಫ್ರೆಂಡ್ಸ್ ಬಂದ್ರೆ ???
೨
ಗಂಡ : ಪಕ್ಕದ ಮನೆಯವರು ಅವರ ಗಂಡನ ತಿಥಿಗೆ ಕರೆದಿದ್ದಾರೆ, ನೀನು ಹೋಗಿ ಬಾ.
ಹೆಂಡತಿ : ನಾನು ಹೋಗಲ್ಲ. ನಾನು ಒಮ್ಮೆಯಾದರೂ ನನ್ನ ಗಂಡನ ತಿಥಿಗೆ ಅವರನ್ನು
ಕರೆಯಲಿಲ್ಲ.
ನಾನು ಹ್ಯಾಗೆ ಹೋಗುವುದು?
೩
ಹೆಂಡತಿ: ರೀ…. ಒಂದು ವಿಷಯ ಹೇಳ್ತೀನಿ, ಹೊಡೆಯೋದಿಲ್ಲ ಅಂತ ಮಾತು ಕೊಡಿ?
ಗಂಡ: ಎನೇ ಹೀಗೆ ಹೇಳ್ತೀಯಾ, ನಾನು ನಿಂಗೆ ಯಾವಾತ್ತಾದ್ರೂ ಹೊಡ್ದಿದ್ದೀನಾ, ಹೇಳು ಏನು
ವಿಷಯ?
ಹೆಂಡತಿ: ನಂಗೀಗ ಮೂರು ತಿಂಗ್ಳು !
ಗಂಡ: ಇದು ಖುಷಿಯ ವಿಷಯ ಕಣೇ, ಇದಕ್ಕೆಲ್ಲ ಯಾವ ಗಂಡ ಹೆಂಡತಿಗೆ ಹೊಡೀತಾನೆ?
ಹೆಂಡತಿ: ಕಾಲೇಜ್ನಲ್ಲಿದ್ದಾಗ ಅಪ್ಪಂಗೆ ಹೀಗೆ ವಿಷಯ ಹೇಳಿದ್ದೆ, ಆವಾಗ ಅಪ್ಪ ತುಂಬಾ
ಹೊಡ್ದಿದ್ರು !!!
೪
ರಾಮ : ಲೋ ಶಾಮ ನೆನ್ನೆ ನನ್ನ ಹೆಂಡತಿಯ ಕಣ್ಣಿಗೆ ಕಸ ಬಿದ್ಧು ೫೦೦ ರೂ ಕರ್ಚಾಯಿತು
ಕಣೋ ???
ಶಾಮ : ಅಯ್ಯೌ ಅಷ್ಟೇನ ನೆನ್ನೆ ನನ್ನ ಹೆಂಡತಿಯ ಕಣ್ಣಿಗೆ ಸೀರೆ ಬಿದ್ಧು ೫೦೦೦
ಖರ್ಚಾಯಿತು. !!!
೫
ರಾತ್ರಿ ಕರೆಂಟು ಹೋಗಿತ್ತು !
ಆಗ ಮಂಕ ಹೆಂಡತಿಗೆ ಹೇಳಿದ : ಲೇ ಫ್ಯಾನ್ ಆದ್ರೂ ಹಾಕೆ………. !!!
ಮಂಕಿ : ಆಡಿದ್ರಲ್ಲ ಮಂಕುತನದ ಮಾತು ! ಫ್ಯಾನ್ ಹಾಕಿದ್ರೆ ಕ್ಯಾಂಡಲ್
ಆರಿಹೋಗಲ್ವ ? ? ?
೬
ರಾಮು : ಏನಮ್ಮ ನಿನ್ನ ಗಂಡ ಚೆನ್ನಾಗಿದ್ದಾನ?
ಮೀನಾಕ್ಷಿ : ಏನ್ ಸ್ವಾಮಿ ಏಕವಚನದಲ್ಲಿ ಮಾತನಾಡಿಸ್ತಿರಿ.
ರಾಮು : ಓಹ್, ಏನಮ್ಮ ನಿನ್ನ ಗಂಡಂದಿರೆಲ್ಲಾ ಚೆನ್ನಾಗಿದ್ದಾರ ???
ಹೆಚ್ಚಿನ ಬರಹಗಳಿಗಾಗಿ
ಚಲನಚಿತ್ರ ಶೀರ್ಷಿಕೆಗಳ ಸಿಂಹಾವಲೋಕನ : ಪುಸ್ತಕ ಪರಿಚಯ
ಲೇಟಪ್ಪನ ಸುಪ್ರಭಾತವು
ಹೆಂಡತಿಯೊಬ್ಬಳು ಮನದೊಳಗಿದ್ದರೆ