- ಉತ್ತಮ ಯಲಿಗಾರ ಅವರ ಎರಡು ಗಜಲ್ಗಳು - ನವೆಂಬರ್ 18, 2022
- ಹೇಮಂತ್ ದೇವಲೇಕರ್ ಅವರ ಕವನಗಳು – ೨ - ಜುಲೈ 19, 2021
- ಹೇಮಂತ್ ದೇವಲೇಕರ್ ಅವರ ಕವನಗಳು – ೧ - ಜೂನ್ 6, 2021
ಮೂಲ : ಹಿಂದಿ
ಅನುವಾದ : ಉತ್ತಮ ಯಲಿಗಾರ
ಮರಗಳ ಅಂತರಂಗ
ನಿನ್ನೆ
ಮಾನ್ಸೂನಿನ ಮೊದಲ ಮಳೆ
ಇಂದು, ಖುಷಿಯಿಂದ ಬಾಗಿಲು ಉಬ್ಬಿಕೊಂಡಿದೆ
ಕಿಟಕಿ ಬಾಗಿಲುಗಳು ಬರಿ ಕಟ್ಟಿಗೆಯಲ್ಲ
ವಿಸ್ಥಾಪಿತ ಕಾಡು!
ನನಗೆ ಭಾಸವಾಗುತ್ತದೆ;
ಮರಗಳ ಮಧ್ಯ ನಡೆದಂತೆ
ಟೊಂಗೆಯ ಮೇಲೆ ಕುಳಿತಂತೆ
ಮರಗಳ ಪೊಳ್ಳಲ್ಲಿ ಪುಸ್ತಕಗಳನ್ನಿಟ್ಟಂತೆ
ನಾನು ಸುತ್ತುವರೆದಂತೆ ಅರಣ್ಯದಿಂದ;
ದಂತ ಕಥೆಗಳಲ್ಲಿ ಸಿಗುವ
ಸುಗಂಧ ಭರಿತ ಅರಣ್ಯ
ನಿನ್ನೆ ಋತುವಿನ
ಪ್ರಥಮ ಮಳೆ
ಇಂದು, ಬಾಗಿಲು ಚೌಕಟ್ಟಿನಲ್ಲಿ
ಸಿಕ್ಕಿ ಹಾಕಿಕೊಳ್ಳುತ್ತಿದೆ
ಮುಚ್ಚಿಕೊಳ್ಳಲು ಮನಸ್ಸಿಲ್ಲ ಅದಕ್ಕೆ
ಥೇಟ್, ಮರಗಳಂತೆ!
ಒಂದು ಕತ್ತರಿಸಲಾದ ಶರೀರದಲ್ಲಿ
ಮತ್ತೆ ಹರಿದಾಡುತ್ತಿದೆ ಮರದ ರಕ್ತ
ಕಳೆದು ಹೋಗಿದೆ ಬಾಗಿಲು
ಬಾಲ್ಯದ ನೆನಪುಗಳಲ್ಲಿ
ಕೈಚಾಚಿ, ಸಾವಿರಾರು ಬೊಗಸೆ ಒಡ್ಡಿ
ಮಳೆಯನ್ನು ಶೇಖರಿಸುವದು..
..ಮೈ ಮರೆತು ನಲಿದಾಡುವದು
ಅದು ಇಂದು ಮತ್ತೆ ಹಸಿರಾಗಿದೆ
******
ಪರಾಗ ಸ್ಪರ್ಶ
ಪಾತರಗಿತ್ತಿಯ ಅಧರಗಳಲ್ಲಿ
ಅಡಗಿವೆ ಜಗತ್ತಿನ
ಎಲ್ಲಕ್ಕಿಂತ ಸುಂದರ ಪ್ರೇಮಪತ್ರಗಳು
ಚಿಟ್ಟೆಯು ಹಾರುವ ಹೂವು
ಹಾರಿ ಹೋಗುವದು
ಒಂದು ಹೂವಿನ ನಗು
ಒಂದು ನಿರಾಶ ಹೂವಿನೆಡೆಗೆ
ಒಂದು ಹೂವಿನ ಹೃದಯ ಹಾರುವದು ಇನ್ನೊಂದರೆಡೆಗೆ
ಒಂದು ಹೂವಿನ ಸ್ವಪ್ನ
ಇಳಿಯುವದು ಇನ್ನೊಂದು ಹೂವಿನ ಸ್ವಪ್ನದಲ್ಲಿ
ಎರಡು ಹೂಗಳ ಮಧ್ಯದ ಸಮಯ
ಒಂದು ಹೊಸ ಪ್ರಪಂಚದ ಕಲ್ಪನೆ
ಪಾತರಗಿತ್ತಿಯಂತೆ ಸೃಜಿಸುವ
ಔದಾರ್ಯ ಇರಬೇಕು
ಸಂದೇಶವಾಹಕನಲ್ಲಿ
*******
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ