ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಅಂತರ ರಾಷ್ಟ್ರೀಯ ಟೆನಿಸ್ & ಕರ್ನಾಟಕದ ರಾಜಕೀಯ……

ರೋಜರ್ ಫೆಡರರ್, ರಾಫೆಲ್ ನಡಾಲ್, ನೊವಾಕ್ ಜೊಕೊವಿಕ್..... ಕುಮಾರಸ್ವಾಮಿ, ಸಿದ್ದರಾಮಯ್ಯ, ಯಡಿಯೂರಪ್ಪ........ ಹೇಗೆ..ಮುಂದೆ ಓದಿ...
ವಿವೇಕಾನಂದ ಎಚ್.ಕೆ.
ಇತ್ತೀಚಿನ ಬರಹಗಳು: ವಿವೇಕಾನಂದ ಎಚ್.ಕೆ. (ಎಲ್ಲವನ್ನು ಓದಿ)

ರೋಜರ್ ಫೆಡರರ್, ರಾಫೆಲ್ ನಡಾಲ್, ನೊವಾಕ್ ಜೊಕೊವಿಕ್…..

ಕುಮಾರಸ್ವಾಮಿ, ಸಿದ್ದರಾಮಯ್ಯ, ಯಡಿಯೂರಪ್ಪ……..

ಸುಮಾರು 15 ವರ್ಷಗಳಿಂದ ಈ ಮೂವರೇ ಅಂತರರಾಷ್ಟ್ರೀಯ ಟಿನಿಸ್ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಬಹುತೇಕ ಹಂಚಿಕೊಳ್ಳುತ್ತಿದ್ದಾರೆ. ಅಂದರೆ ಮಾರುಕಟ್ಟೆಯಲ್ಲಿಯಲ್ಲ. ತಮ್ಮ ಪ್ರತಿಭೆ, ಸಾಮರ್ಥ್ಯ, ಶ್ರಮ, ಆಟದ ಚಾಕಚಕ್ಯತೆ, ತಾಳ್ಮೆ ಎಲ್ಲವನ್ನೂ ಒಟ್ಟುಗೂಡಿಸಿ.

ಹಾಗೆಯೇ ಕರ್ನಾಟಕದಲ್ಲಿ ಸುಮಾರು 15 ವರ್ಷಗಳಿಂದ ಮೂರು ಜನ ಮಾತ್ರ ಅಧಿಕಾರ ಹಂಚಿಕೊಳ್ಳುತ್ತಿದ್ದಾರೆ.
ಯಡಿಯೂರಪ್ಪ, ಸಿದ್ದರಾಮಯ್ಯ, ಕುಮಾರಸ್ವಾಮಿ.
( ಸದಾನಂದ ಗೌಡ ಮತ್ತು ಜಗದೀಶ್ ಶೆಟ್ಟರ್ ಕೇವಲ ಕಾಯ್ದಿಟ್ಟ ಆಟಗಾರರು – ಆಡಳಿತಗಾರರು ಮಾತ್ರ )

ಫೆಡರರ್ ಕಲಾತ್ಮಕ ಆಟಗಾರ,
ನಡಾಲ್ ಆಕ್ರಮಣಕಾರಿ ಆಟಗಾರ,
ಜೋಕೋವಿಕ್ ವೇಗ ಮತ್ತು ಬಲಿಷ್ಠ ಮಿಶ್ರಿತ ಆಟಗಾರ…..

ಸಿದ್ದತಾಮಯ್ಯ – ಕಲಾತ್ಮಕ ಆಡಳಿತಗಾರ,
ಕುಮಾರಸ್ವಾಮಿ – ವೇಗದ ಆಡಳಿತಗಾರ,
ಯಡಿಯೂರಪ್ಪ,) – ವೇಗ ಮತ್ತು ಆಕ್ರಮಣ ಮಿಶ್ರಿತ ಆಡಳಿತಗಾರ……

ಇದು ಒಂದು ಮೇಲ್ನೋಟದ ಹೋಲಿಕೆ ಮಾತ್ರ.
ವಾಸ್ತವದಲ್ಲಿ,……

ಕುಮಾರಸ್ವಾಮಿ…………

ಈ ಮೂವರಲ್ಲಿ ಮೊದಲು ಮುಖ್ಯಮಂತ್ರಿ ಅಧಿಕಾರ ಪಡೆದದ್ದು ಕುಮಾರಸ್ವಾಮಿ ಮತ್ತು ಎರಡು ಬಾರಿ.

ಇವರು ಒಮ್ಮೆ ಹಿಂಬಾಗಿಲಿನಿಂದ ಮತ್ತೊಮ್ಮೆ ಅದೃಷ್ಟದ ಅವಕಾಶದ ಮೂಲಕ ಅಧಿಕಾರ ವಹಿಸಿಕೊಂಡವರು.

ಸ್ವಲ್ಪ ಭಾವುಕ ವ್ಯಕ್ತಿ. ಕಷ್ಟ ಎಂದು ಬರುವ ಯಾರೇ ಆಗಲಿ ತಕ್ಷಣಕ್ಕೆ ಸ್ಪಂದಿಸುವ ಗುಣವಿರುವವರು. ಜನರಿಗೆ ಒಳ್ಳೆಯದನ್ನು ಮಾಡಿ ಅವರ ಪ್ರೀತಿಗೆ ಪಾತ್ರರಾಗಬೇಕೆಂಬ ಹಂಬಲವಿರುವವರು. ವಿವಿಧ ಪಕ್ಷದ ನಾಯಕರನ್ನು ಒಲಿಸಿಕೊಳ್ಳುವ ಗುಣ ಇರುವವರು. ಎಲ್ಲಾ ಮಟ್ಟದ ಜನರೊಂದಿಗೆ ಒಳ್ಳೆಯ ಸಂಪರ್ಕ ಮತ್ತು ಸಂವಹನ ನಡೆಸುವ ಕಲೆಗಾರಿಕೆ ಇದೆ.

ಆದರೆ ಆಡಳಿತಾತ್ಮಕ ದಕ್ಷತೆ ಇಲ್ಲವೇ ಇಲ್ಲ. ಹುಡುಗು ಬುದ್ದಿಯ ದೂರದೃಷ್ಟಿ ಇಲ್ಲದ ನಾಯಕ. ಯಾವುದೇ ಸೈದ್ದಾಂತಿಕ ಬದ್ದತೆ ಇಲ್ಲ. ಆ ಕ್ಷಣದ ವಿಷಯಗಳಿಗೆ ನೇರವಾಗಿ ಪ್ರತಿಕ್ರಿಯಿಸುವ ಗುಣ ಮಾತ್ರವಿದೆ. ಮಾತಿನ ಮೇಲೆ ನಿಯಂತ್ರಣವಿಲ್ಲ. ಒಳ್ಳೆಯ ಗುಣದ ಕೆಟ್ಟ ಆಡಳಿತಗಾರ.

ಸಿದ್ದರಾಮಯ್ಯ….

ನೇರವಾಗಿ ಬಹುಮತ ಪಡೆದ ಪಕ್ಷದ ನಾಯಕರಾಗಿ ಆಯ್ಕೆಯಾದವರು. ದಕ್ಷ ಆಡಳಿತಗಾರ. ಆಡಳಿತದ ಮೇಲೆ ನಿಯಂತ್ರಣ ಸಾಧಿಸಿದ್ದರು. ಕೆಲವು ಮಹತ್ವದ ಯೋಜನೆಗಳನ್ನು ರೂಪಿಸಿದರು. ಬಡವರ – ಶೋಷಿತರ ಪರ ಕಾಳಜಿ ಇದ್ದವರು. ನೇರ ಮತ್ತು ಮುಕ್ತ ಭ್ರಷ್ಟಾಚಾರ ಮಾಡಲು ಹೆದರುತ್ತಿದ್ದರು. ಸಾಮಾಜಿಕ ವ್ಯವಸ್ಥೆಯ ಬಗ್ಗೆ ತಿಳಿವಳಿಕೆ ಹೊಂದಿದ್ದರು.

ಆದರೆ, ಸೋಮಾರಿ ಮತ್ತು ದುರಹಂಕಾರಿ ಎಂದು ಮೇಲ್ನೋಟಕ್ಕೆ ಕಂಡುಬರುತ್ತದೆ. ಜನ ಸಾಮಾನ್ಯರೊಂದಿಗೆ ನೇರವಾಗಿ ಮತ್ತು ಪ್ರೀತಿಯಿಂದ ಮಾತನಾಡುವಷ್ಟು ಅಂತರ ಅವರಿಗೆ ಇರಲಿಲ್ಲ. ಕಾಂಗ್ರೆಸ್ ಸಂಸ್ಕೃತಿಗೆ ಒಗ್ಗಿಕೊಳ್ಳುವ ಮತ್ತು ತಮ್ಮತನ ಉಳಿಸಿಕೊಳ್ಳಲು ಒಂದಷ್ಟು ಸಮಯ ವ್ಯರ್ಥ ಮಾಡಿದರು.

ಯಡಿಯೂರಪ್ಪ…..

ಎರಡೂ ಬಾರಿಯೂ ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದವರು. ( ಮೊದಲನೇ ಬಾರಿ ಸ್ವಲ್ಪ ಭಿನ್ನ ) ಇನ್ನೂ ಆಡಳಿತ ನಡೆಸುತ್ತಿದ್ದಾರೆ.
ಅತ್ಯುತ್ಸಾಹಿ ಮತ್ತು ದಣಿವರಿಯದ ಕೆಲಸಗಾರರ. ಸಮಯಕ್ಕೆ ತಕ್ಕಂತೆ ದಕ್ಷತೆ ಮತ್ತು ಪ್ರಾಮಾಣಿಕತೆ ಮೆರೆಯುತ್ತಾರೆ. ಜನರಲ್ಲಿ ಒಳ್ಳೆಯ ಹೆಸರು ಗಳಿಸಬೇಕು ಎಂಬ ಹಂಬಲವೂ ಇದೆ. ಮೊದಲನೇ ಬಾರಿಗಿಂತ ಈಗ ಹೆಚ್ಚು ಎಚ್ಚರಿಕೆಯಿಂದ ಕೆಲಸ ಮಾಡುತ್ತಿದ್ದಾರೆ.
ರೈತರ ಪರ ಕಾಳಜಿ ಇದೆ.

ಆದರೆ ತಮ್ಮ ಎಲ್ಲಾ ಕಾರ್ಯತಂತ್ರಗಳು ಅಧಿಕಾರ ಮತ್ತು ಹಣದ ಸುತ್ತಲೇ ಕೇಂದ್ರೀಕರಿಸುತ್ತಾರೆ. ಭ್ರಷ್ಟಾಚಾರದ ವಿಷಯದಲ್ಲಿ ಸಂಕೋಚವೇನು ಇಲ್ಲ. ತಮ್ಮ ಪಕ್ಷದ ಮೂಲ ಸಿದ್ದಾಂತಕ್ಕಿಂತ ಸ್ಥಳೀಯ ರಾಜಕೀಯವೇ ಅವರಿಗೆ ಮುಖ್ಯ. ಮುಂಗೋಪಿ ಮತ್ತು ಆತುರಗಾರ. ದೂರದೃಷ್ಟಿಯೂ ಕಡಿಮೆ. ಇವರಿಗೂ ಸಾಮಾನ್ಯ ಜನರನ್ನು ಪ್ರೀತಿಯಿಂದ ಮಾತನಾಡಿಸುವ ಅಭ್ಯಾಸ ಇಲ್ಲ.

ಜನಸಾಮಾನ್ಯರ ಭಾಷೆಯಲ್ಲಿ ನಾನು ಗ್ರಹಿಸಿದಂತೆ ಈ ಮೂರರಲ್ಲಿ ವಿವಿಧ ಗುಣ ಸ್ವಭಾವಗಳಲ್ಲಿ ಅನುಕ್ರಮವಾಗಿ ಅವರ ಸ್ಥಾನಗಳು……

ಆಡಳಿತದ ಸಾಮರ್ಥ್ಯದಲ್ಲಿ,
1) ಸಿದ್ದರಾಮಯ್ಯ
2) ಯಡಿಯೂರಪ್ಪ
3) ಕುಮಾರಸ್ವಾಮಿ…

ಒಳ್ಳೆಯ ಮಾನವೀಯ ಗುಣ
1) ಕುಮಾರಸ್ವಾಮಿ
2) ಯಡಿಯೂರಪ್ಪ
3) ಸಿದ್ದರಾಮಯ್ಯ

ಬುದ್ದಿವಂತರು
1) ಸಿದ್ದರಾಮಯ್ಯ
2) ಯಡಿಯೂರಪ್ಪ
3) ಕುಮಾರಸ್ವಾಮಿ

ವೈಯಕ್ತಿಕವಾಗಿ ನಂಬಿಕೆ ಅರ್ಹರು
1) ಯಡಿಯೂರಪ್ಪ
2) ಕುಮಾರಸ್ವಾಮಿ
3) ಸಿದ್ದರಾಮಯ್ಯ

ಅತಿ ಹೆಚ್ಚು ಜಾತಿವಾದಿಗಳು
1) ಕುಮಾರಸ್ವಾಮಿ
2) ಯಡಿಯೂರಪ್ಪ
3) ಸಿದ್ದರಾಮಯ್ಯ

ಭ್ರಷ್ಟರು
1) ಯಡಿಯೂರಪ್ಪ
2) ಕುಮಾರಸ್ವಾಮಿ
3) ಸಿದ್ದರಾಮಯ್ಯ

ವೈಯಕ್ತಿಕ ಬದುಕಿನ ಶುದ್ದತೆ ( ಸಾರ್ವಜನಿಕವಾಗಿ ಕಂಡು ಬಂದಂತೆ )
1) ಸಿದ್ದರಾಮಯ್ಯ
2) ಯಡಿಯೂರಪ್ಪ
3) ಕುಮಾರಸ್ವಾಮಿ

ರಾಜಕೀಯ ತಂತ್ರಗಾರಿಕೆ
1) ಯಡಿಯೂರಪ್ಪ
2) ಕುಮಾರಸ್ವಾಮಿ
3) ಸಿದ್ದರಾಮಯ್ಯ

ಸಾರ್ವಜನಿಕ ಬದುಕಿನ ಮಾದರಿ
1) ಸಿದ್ದರಾಮಯ್ಯ
2) ಕುಮಾರಸ್ವಾಮಿ
3) ಯಡಿಯೂರಪ್ಪ

ಒಟ್ಟಾರೆ ಎಲ್ಲಾ ವಿಷಯಗಳನ್ನು ಗಮನಿಸಿ ಈ ಮೂವರಲ್ಲಿ ನನಗೆ ಮೂಡಿದ ಅಭಿಪ್ರಾಯ
1) ಸಿದ್ದರಾಮಯ್ಯ
2) ಯಡಿಯೂರಪ್ಪ
3) ಕುಮಾರಸ್ವಾಮಿ.

ಇವರುಗಳು ತಮ್ಮ ಆಡಳಿತಾವಧಿಯಲ್ಲಿ ನೀಡಿದ ಕಾರ್ಯಯೋಜನೆಗಳು, ಅದರ‌ ಪರಿಣಾಮ ಮತ್ತು ಫಲಿತಾಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿ ನೋಡಬೇಕಾಗುತ್ತದೆ. ಈಗಿನ ಆಡಳಿತ ವ್ಯವಸ್ಥೆಯಲ್ಲಿ ಕಡಿಮೆ ಭ್ರಷ್ಟರು ಯಾರು, ಕನಿಷ್ಠ ಜನರ ಬಗ್ಗೆ ಕಾಳಜಿಯನ್ನು ತಮ್ಮ ಅಂತರಾಳದಲ್ಲಿ ಹೊಂದಿದ್ದವರು ಯಾರು ಎಂಬುದನ್ನು ಮೇಲ್ನೋಟಕ್ಕೆ ಅವರ ಮಾತುಗಳಿಂದ ಗ್ರಹಿಸದೆ ಒಳ ಮನಸ್ಸಿನಿಂದ ನೋಡ ಬೇಕಾಗುತ್ತದೆ.

ಜಾತಿ ಮತ್ತು ಪಕ್ಷದ ಆಧಾರದ ಮೇಲೆ ಜನರಿಗೆ ಅವರ ಜಾತಿ ಪಕ್ಷದ ನಾಯಕರೇ ಉತ್ತಮ ಎಂಬ ಅಭಿಪ್ರಾಯ ಮೂಡುವುದು ಸಹಜ. ಆದರೆ ಆತ್ಮಸಾಕ್ಷಿಯ ವಿಮರ್ಶೆಯಲ್ಲಿ ನಾವು ಇದನ್ನು ಮೀರುವ ಪ್ರಯತ್ನ ಮಾಡಬೇಕು. 360 ಡಿಗ್ರಿ ಕೋನದಲ್ಲಿ ಎಲ್ಲವನ್ನೂ ಅವಲೋಕಿಸಿ ಅಭಿಪ್ರಾಯ ರೂಪಿಸಿಕೊಳ್ಳಬೇಕು.

ಕರ್ನಾಟಕದ ರಾಜಕೀಯದಲ್ಲಿ
ಇದೀಗ ಹೊಸ ನಾಯಕತ್ವ, ಭರವಸೆಯ ಆಡಳಿತಗಾರ,
ಜನರ ಸಮಸ್ಯೆಗಳಿಗೆ ಸ್ಪಂದಿಸುವ,
ಭ್ರಷ್ಟಾಚಾರ ರಹಿತ, ಕ್ರಾಂತಿಕಾರಿ ಚಿಂತನೆಯ ವ್ಯಕ್ತಿಯೊಬ್ಬ ರಾಜಕೀಯದಲ್ಲಿ ಮೂಡಿಬರುವ ಅವಶ್ಯಕತೆ ಇದೆ. ಅದು ಯಾರು ಮತ್ತು ಹೇಗೆ ಎಂಬ ಆಲೋಚನೆಯಲ್ಲಿ………

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ.

ವಿವೇಕಾನಂದ. ಹೆಚ್.ಕೆ.