- ಎನ್ನ ಗಂಡಂಗೆ ಅಂಡದ ಬೀಜವಿಲ್ಲ - ಏಪ್ರಿಲ್ 30, 2020
ಎಲ್ಲರ ಹೆಂಡಿರು ತೊಳಸಿಕ್ಕುವರು;
ಕದಿರ ರೆಮ್ಮವ್ವೆ, ವಚನಗಾರ್ತಿ, ಶರಣೆ
ಎನ್ನ ಗಂಡಂಗೆ ತೊಳಸುವುದಿಲ್ಲ.
ಎಲ್ಲರ ಗಂಡಂದಿರಿಗೆ ಬಸಿವರು;
ಎನ್ನ ಗಂಡಂಗೆ ಬಸಿವುದಿಲ್ಲ. ಎಲ್ಲರ ಗಂಡಂದಿರಿಗೆ ಬೀಜವುಂಟು;
ಎನ್ನ ಗಂಡಂಗೆ ಅಂಡದ ಬೀಜವಿಲ್ಲ.
ಎಲ್ಲರ ಗಂಡಂದಿರು ಮೇಲೆ;
ಎನ್ನ ಗಂಡ ಕೆಳಗೆ, ನಾ ಮೇಲೆ.
ಕದಿರ ರೆಮ್ಮಿಯೊಡೆಯ ಗುಮ್ಮೇಶ್ವರಾ.
ಶರಣೆ ಕದಿರ ರೆಮ್ಮೆವ್ವೆಯ ಪ್ರಸ್ತುತ ಈ ವಚನವು; ಶರಣತತ್ವ ಸಿದ್ಧಾಂತದಂತೆ ‘ಶರಣ ಸತಿ ಲಿಂಗ ಪತಿ’ಯ ಭಾವವು ಇಲ್ಲಿ ಅತ್ಯಂತ ಮನೋಹರವಾಗಿಯೇ ಅನುಭವ ಗಮ್ಯವಾದ ಲೌಕಿಕಾನುಭವ ಮತ್ತು ಅಲೌಕಿಕ ಅನುಭಾವದ ಸಮ್ಮಿಶ್ರ ಗುಣ ರಮ್ಯಭಾವ ಶೃಂಗಾರ ರಸಪೂರಿತ ರಂಜನಾತ್ಮಕವಾದ ನುಡಿ ಪುಂಜಗಳ ಗೂಂಜನದ ಬೆಡಗಿನ ನಡಿಗೆಯದಾಗಿದೆ.
ಇಲ್ಲಿಯೇ ಒಂದು ವಿಷಯವನ್ನು ನಾವು ಸ್ಪಷ್ಟವಾಗಿ ತಿಳಿದು ಕೊಳ್ಳುವ ಅಗತ್ಯವಿ ದೆ. ಏನೆಂದರೆ ಸಾಮಾನ್ಯ ಗ್ರಹಿಕೆಯಂತೆ ಶರಣರು ಧಾರ್ಮಿಕ ಕಟ್ಟಳೆಯ ಸೀದಾ ಸನ್ಯಾಸಿಗಳಂತಲ್ಲ. ಅವರು ಲೌಕಿಕರಂತೆ ಪಕ್ಕಾ ಸಂಸಾರಿಗಳು. ಶರಣರು ಪ್ರಕೃತಿ ಸಹಜವಾದ ಕಾಮ ಪ್ರೇಮ ಭಾವವನ್ನು ನಿರಾಕರಿಸಿದವರಲ್ಲ. ಪ್ರಕೃತಿ ಧರ್ಮವ ನ್ನು ಅರಿತು ಮನ್ನಿಸಿ, ಅರಿವಿನ ಸಹಜ ಕ್ರಿಯೆಯ ಆಚರಣೆಗೆ ಅತ್ಯಂತ ಮಹತ್ವ ವನ್ನು ನೀಡಿದವರು. ಅಷ್ಟೇ ಅಲ್ಲದೆ ಅದರ ಇತಿ ಮಿತಿಗಳನ್ನೂ ಸಹಿತ ಅರಿತು ಕೊಂಡು ಹದನಾಗಿ ಆಚರಿಸುವವರು.
ತನ್ಮೂಲಕ ಶರಣರು ಸೃಜನಶೀಲವಾಗಿ ಬದುಕಿ, ವ್ಯಷ್ಟಿ ಹಾಗೂ ಸಮಷ್ಟಿಯಲ್ಲಿನ ಸೃಷ್ಟಿ ಪ್ರಕ್ರಿಯೆಯ ಕಾರ್ಯ ಚಟುವಟಿಕೆ ಯನ್ನು ಗೌರವಿಸಿ,ಅದನ್ನು ನಿರ್ವಹಿಸಿ, ಆ ಮೂಲಕವಾಗಿ ಈ ಜಗದ ಉಳಿವಿನ ಬಾಳಿಗೆ ಬಯಲಬೆಳಕಾಗಿ ಉಳಿದವರು.
ಈ ಹಿನ್ನೆಲೆಯಲ್ಲಿ ; ಕದಿರ ರೆಮ್ಮವ್ವೆಯ ಮೇಲಿನ ವಚನ ಚಿಂತನೆಯನ್ನು ಮಾಡ ಬೇಕಾಗುತ್ತದೆ.ಅದನ್ನು ನೋಡೋಣ.
ಮೊದಲ ಓದಿನಲ್ಲಿಯೇ ಈ ವಚನವು; ಮೇಲ್ನೋಟದಲ್ಲಿ ಅತ್ಯಂತ ರಸಿಕತೆಯ ಚೇತೋಹಾರಿ ಭಾವವನ್ನು ಇಂಬಿಟ್ಟು ಕೊಂಡ ಹಾಗೆ ನೇರ ಗ್ರಹಿಕೆಗೆ ಬರುತ್ತದೆ. ವಚನ ಅಷ್ಟು ಸರಸಮಯತೆಯನ್ನು ನಳನಳಿಸುತ್ತದೆ. ಇದೇ ಸಂದರ್ಭದಲ್ಲಿ ‘ರಸಿಕನಾಡಿದ ಮಾತು ಶಶಿಯುದಿಸಿ ಬಂದಂತೆ’ ಎಂಬ ಕವಿನುಡಿಯೂ ಸಹಿತ ನೆನಪಿಗೆ ಬಾರದಿರದು.
ಆದರೆ, ವಚನವು; ಅಷ್ಟು ನೇರವಾಗಿ ಲೌಕಿಕ ಅನುಭವವನ್ನೇ ಹೇಳಲು ಇಲ್ಲಿ ಖಂಡಿತಾ ಉಪಕ್ರಮಿಸುತ್ತಿಲ್ಲಾ ಎನ್ನುವ ಪ್ರಜ್ಞೆಯು ಅನುಸಂಧಾನವನ್ನು ಸರಿದಾ ರಿಗೆ ತರಬಲ್ಲದು. ಹಾಗಾಗಿ, ಈ ವಚನದ ಒಳನೋಟ ಕಾಣಲು; ಮೇಲ್ನೋಟದೀ ಲೌಕಿಕ ರೂಪಕದ ದೃಷ್ಟಾಂತವನ್ನು ಆಸ ರೆಯಾಗಿಸಿಕೊಂಡು ಮುಂದೆ ಸಾಗಿದರೆ ಅನುಭಾವದ ಅನೂಹ್ಯ ಲೋಕದ ಸತ್ಯ ವು ಕಾಣಬರುತ್ತದೆ.
ಎಲ್ಲರ ಹೆಂಡಿರು ತೊಳಸಿಕ್ಕುವರು; ಎನ್ನ ಗಂಡಂಗೆ ತೊಳಸುವುದಿಲ್ಲ.
ಎಲ್ಲರ ಗಂಡಂದಿರಿಗೆ ಬಸಿವರು;
ಎನ್ನ ಗಂಡಂಗೆ ಬಸಿವುದಿಲ್ಲ.
ವಚನದ ಪ್ರಾರಂಭಿಕ ಈ ನಾಲ್ಕೂ ಸಾ ಲುಗಳು ನೀಡುವ ಅನುಭವದ ಚಿತ್ರಣ ವನ್ನು ನೋಡಿದಾಗ; ಈ ವಚನಕಾರರಿಗೆ ಇದ್ದಂಥ ಲೋಕಗ್ರಹಿಕೆಯ ಹಾಸುಬೀಸು ಹಾಗೂ ಅದಕ್ಕೆ ತಕ್ಕಂತಹ ಭಾಷಾ ಬಳಕೆ ಯ ಬಗ್ಗೆ ಅವರಿಗಿದ್ದ ಆ ಶಕ್ತಿ ಸಾಮರ್ಥ್ಯ ಖಂಡಿತಾ ನಮ್ಮ ಅರಿವಿಗೆ ಬರುತ್ತವೆ.
ಆದ್ದರಿಂದ ‘ಶರಣ ಸತಿ’ಯ ಭಾವದಲ್ಲಿ ಅರಳಿರುವ ಈ ವಚನ ಪುಷ್ಪವು; ತನ್ನ ಪರಿಮಳಿಸುವ ಅರ್ಥಪೂರ್ಣತೆಯ ಕಾರಣ ಘನತೆ ಗೌರವವನ್ನು ಉಳ್ಳದ್ದು.
ಇಲ್ಲಿ, ಲೌಕಿಕರ ಸತಿಯರು ಹೇಗೆ ತಮ್ಮ ಗಂಡಂದಿರನ್ನು ಕಾಳಜಿಯಿಂದ ನೋಡಿ ಪೋಷಿಸುವರು ಹಾಗೂ ಅವರನ್ನು ತೃಪ್ತಿ ಪಡಿಸುವರು ಎಂಬ ಉಪಾಸನಾಮಯ ಚಟುವಟಿಕೆಗಳನ್ನು ಹೇಳುತ್ತ ವಚನಕಾ ರ್ತಿ ತಾನು ತನ್ನ ‘ಗಂಡ’ನಿಗೆ ಈ ತರಹದ ಮುತುವರ್ಜಿ ವಹಿಸಿ ಸೇವೆಯನ್ನು ಮಾಡುವುದಿಲ್ಲ ಎನ್ನುವ ಮೂಲಕವಾಗಿ ‘ಶರಣ ಸತಿ’ಯ ರೀತಿಯೇ ಬೇರೆ ತೆರನಾ ದದ್ದು ಎನ್ನುವುದನ್ನು ಸೂಚಿಸುತ್ತಾರೆ.
ಎಲ್ಲರ ಗಂಡಂದಿರಿಗೆ ಬೀಜವುಂಟು; ಎನ್ನ ಗಂಡಂಗೆ ಅಂಡದ ಬೀಜವಿಲ್ಲ.
ಎಲ್ಲರ ಗಂಡಂದಿರು ಮೇಲೆ;
ಎನ್ನ ಗಂಡ ಕೆಳಗೆ, ನಾ ಮೇಲೆ.
ಕದಿರ ರೆಮ್ಮಿಯೊಡೆಯ ಗುಮ್ಮೇಶ್ವರಾ.
ವಚನದ ಕೊನೆಯ ಈ ಮೇಲಿನ ಸಾಲು ಗಳು ನೇರವಾಗಿ ಲೈಂಗಿಕ ಪರಿಭಾಷೆಯ ರೂಪಕದಲ್ಲಿ ತನ್ನ ತೌಲನಿಕದ ಸಂವಾದ ದ ಮೂಲಕ ತೆರೆದು ಕೊಳ್ಳುತ್ತವೆ. ಇಲ್ಲಿ, ‘ಎಲ್ಲರ ಗಂಡಂದಿರಿಗೆ ಬೀಜವುಂಟು’ ಎಂಬ ಈ ಪದ ಪುಂಜವೇ ನೇರ ಕಾಮ ಪ್ರೇಮದ ದ್ಯೋತಕವಾಗಿ ಕಾಣಿಸುತ್ತದೆ ನಿಜ. ಆದರೆ, ಇಲ್ಲಿ ವಚನ ಹೇಳುವ ವಿಷಯ ಅದಲ್ಲ!
ಅದೇನಂದರೆ, ಶರಣ ಸತಿಯ ಲಿಂಗಪತಿ ಗೆ ‘ಅಂಗ’ವಿಲ್ಲ. ಹೀಗಾಗಿ ‘ಅಂಡ’ ವಿಲ್ಲ. ಇದರರ್ಥ ಶರಣರು ಹುಟ್ಟು ಗೆಟ್ಟವರು. ಶರಣರಿಗೆ ಹುಟ್ಟು ಸಾವಿನ ಜೀವನ ರಾಟಾಳವಿಲ್ಲ. ಆದರೆ ಲೌಕಿಕ ಹೆಂಡಿರು ಭೋಗ ಭೂಮಿಯಾದರೆ ಅವರ ಗಂಡ ರು ಮೇಲೆ ಬಿತ್ತಿ ಬೆಳೆಯುವ ಭವಿಗಳು!
ಹಾಗಾಗಿ, ಶರಣ ಸತಿಗೆ, ‘ಅಂಗ’ವಿಲ್ಲದ ‘ಲಿಂಗಪತಿ’ಯೇ ನೆಲೆ-ನೆಲವಾಗಿದ್ದರಿಂದ ಆತ ಕೆಳಗಿರುವನು. ಅಂಥ ಪತಿಯನ್ನು ಪೂಜಿಸಿ ಪೊರೆಯುವ ಶರಣ ಸತಿ, ಇಲ್ಲಿ ತಾನೇ ಮೇಲೆಂದು ತನ್ನ ದೈವವನ್ನು ಉದ್ದೇಶಿಸಿ ಹೇಳುವ ಮೂಲಕ ವಚನ ತನ್ನ ಲೌಕಿಕದ ಲೈಂಗಿಕ ವಾಸನೆಯನ್ನು ಕಳೆದು ಕೊಂಡು, ಆಧ್ಯಾತ್ಮಿಕ ಅರಿವಿನ ಸುಗಂಧದ ಪರಿಮಳವನ್ನು ಸೂಸುತ್ತದೆ.
ಹೆಚ್ಚಿನ ಬರಹಗಳಿಗಾಗಿ
ಚಾಚಾ ನೆಹರು ಮತ್ತು ನಮ್ಮ ಮಕ್ಕಳು
ಭವಿಷ್ಯದ ಔದ್ಯೋಗಿಕ ಕ್ಷೇತ್ರದಲ್ಲಿ ಕನ್ನಡಿಗರು
ಕಲಿಕೆಯ ಮಾಧ್ಯಮವಾಗಿ ಕನ್ನಡ