- ಕನ್ನಡ ಕಾಂತಾರ.. - ಅಕ್ಟೋಬರ್ 8, 2025
- ಗಾಂಧಿ-ಸಿದ್ಧಾರೂಢರ ಭೇಟಿಗೆ ನೂರಾ ಮೂರು ವರ್ಷ - ನವೆಂಬರ್ 12, 2023
- ಕುವೆಂಪು ಕನಸಿನ ಸಚಿವ ಮಂಡಲ - ಡಿಸಂಬರ್ 29, 2021
ಕನ್ನಡ ಕಾಂತರದೋಳ್
ಜನಪದ ಅಂತರಂಗದಲ್ಲಿ
ಕಣ್ಣು ಮುಚ್ಚೇ ಕಾಡೆ ಗೂಡು
ಮುದ್ದಿನ ಮೂಟೆ ಉರುಳೇ ಹೋಯ್ತು
ನಮ್ಮ ಹಕ್ಕಿ ಬಿಟ್ಟೇ ಬಿಟ್ಟೆ
ನಿಮ್ಮ ಯ ಹಕ್ಕಿ ಬಿಚ್ಚಿ ಟ್ಟು ಕೊಳ್ಳಿ..!
ಕನ್ನಡ ಕಾಡುಗಳಲ್ಲಿ
ಪುಣ್ಯ ಕೋಟಿ ಹುಲಿ
ಪಂಚತಂತ್ರ ಕಥೆಗಳ ರಾಜ ಸಿಂಹ
ಸವಡಿ ಊರಿನ ದುರ್ಗಸಿಂಹ
ಕಾಂತಾರ ಸೀಮೆಯ ಪಂಪವಾಸಿಸಿದ
ಕೋಗಿಲೆ ಮೇಣ್ ಮರಿದುಂಬಿಯಾಗಿ ಬಯಸಿದ
ಬನವಾಸಿ ಸುಂದರ
ಕದಂಬರ ವೈಜಯಂತಿಪುರದ ಮಧುಕೇಶ್ವರ..
ನಾ ದೇವನೊ ನೀ ದೇವನೊ
ಎಂದ ಬಳ್ಳಿಗಾವೆ ಅಲ್ಲಮನ ಗುಹೇಶ್ವರ
ಅನಿಮಿಷಯ್ಯನ ಬೆರಗು ಸಾಕ್ಷಾತ್ಕಾರ..!!
ಕಾಂತಾರ ಮಲೆಗಳಲ್ಲಿ ಮಗಳು
ಹೆಗ್ಗಡತಿ ಕಾನೂರ ಕಗ್ಗತ್ತಲ ಪೂವಯ್ಯ
ಕನ್ನಡ ತನ ಬೆಳಗಿದ ಕಥೆ ಹೇಳಿದ ಕುವೆಂಪು..
ಕಾಂತಾರ ಕನ್ನಡ ಡಿಂಡಿಮಬಾರಿಸಿ..
ಮುಗಿಲ ಮುಟ್ಟುವ ಜಯಭೇರಿ..
ನಿಲುಕದ ಆಕಾಶದಲ್ಲಿ ಕೈಯಿಂದ ಮುಟ್ಟಿ
ತಾರೆಗಳ ಹಿಂಡು ಹಿಡಿದು ಕನ್ನಡಿಸಿ
ಕನ್ನಡತನವ ಜಗದ ಬೆಳ್ಳಿ ತೆರೆಗಳಲ್ಲಿ
ಕನ್ನಡ ತೇರ ನೇರಿ ಮೆರೆಸಿ
ತಾಯಿ ಭುವನೇಶ್ವರಿ ಯಲ್ಲಿ..!!




ಹೆಚ್ಚಿನ ಬರಹಗಳಿಗಾಗಿ
ಹೂರಣವಿಲ್ಲದ ಹೋಳಿಗೆ
ಒದ್ದೆ ಹಕ್ಕಿಯ ಹಾಡು ಮತ್ತು ಇತರ ಕವಿತೆಗಳು
ಸಂಕ್ರಾಂತಿ