ಇತ್ತೀಚಿನ ಬರಹಗಳು: ಶಾಂತಾ ಶಾಸ್ತ್ರಿ (ಎಲ್ಲವನ್ನು ಓದಿ)
- ಕವಿ ಸಮಯ – ಶಾಂತಾ ಶಾಸ್ತ್ರಿ - ಸೆಪ್ಟೆಂಬರ್ 10, 2021
- ಅರವತ್ಮೂರು - ಏಪ್ರಿಲ್ 4, 2021
- ಕರೋನ ಲಾಕ್ ಡೌನ್ - ಡಿಸಂಬರ್ 20, 2020
ವಿಷಾಣು ಕರೋನ ವಿಶ್ವವನ್ನು ಆವರಿಸಿತಲ್ಲ
ಪ್ರತಿ ಮನೆ ಮನದ ಮೂಲೆಗಳನು ತಡಕಾಡಿತಲ್ಲ
ಇಹದ ಮೋಹ ಪಾಶವನ್ನು ಸಡಿಲಗೊಳಿಸಿತಲ್ಲ
ಮನುಜನಲ್ಲಿ ಮಾನವತೆಯ ಉತ್ತಿ ಬಿತ್ತಿತಲ್ಲ.
ಬಡವನೋ ಬಲ್ಲಿದನೋ ಅದು ನೋಡಲಿಲ್ಲ
ಜಾತಿಪಾತಿ ವಯೋಮಾನ ಅದು ಕೇಳಲಿಲ್ಲ
ಒಂಟಿಯೋ ಜಂಟಿಯೋ ಸಂಬಂಧ ಎಣಿಸಲಿಲ್ಲ
ಶ್ರಮಜೀವ ಸಮಭಾವ ಮೊದಲಾಯಿತಲ್ಲ.
ಅಧರ್ಮವನ್ನು ಅಳಿಸಲು ತನುವ ತೊಳೆಸಿತಲ್ಲ
ಮಾಸ್ಕ್ ಧರಿಸಿ ಮುಖ ಮೂಗು ಬಾಯಿ ಮುಚ್ಚಿತಲ್ಲ
ಆಂತರ್ಯವನ್ನು ಅರಿಯಲು ಅಂತರವ ಬಯಸಿತಲ್ಲ
ಭವದ ಬವಣೆ ನೀಗಲು ಮಿತಿಯ ತಿಳಿಸಿತಲ್ಲ.
ಅಣ್ವಸ್ತ್ರ,ಬಾಂಬ್ ಬಿಲ್ಲುಬಾಣ ಬೇಕಾಗಲೇ ಇಲ್ಲ
ರಕ್ತಪಾತವಿರದೆ ಮಹಾಯುದ್ಧವಾಯಿತಲ್ಲ
ಪಶು ಪಕ್ಷಿ ಪ್ರಾಣಿಗಳೂ ಕನಿಕರಿಸಿದವೆಲ್ಲ
ತನ್ನ ರಕ್ಷಣೆಗೆ ಮನುಜ ತಾನೇ ಯೋಧನಾದನಲ್ಲ.
ಭೂತಾಯಿ ತನ್ನ ಭಾರವನ್ನು ಇಳಿಸಿಕೊಂಡಳಲ್ಲ
ರಣಚಂಡಿ ಮಹಾಮಾರಿ ಏನೆಲ್ಲ ಅದನು ಕರೆಯಿರೆಲ್ಲ
ಲಾಕ್ ಡೌನ್ ಜಗದ ಶುದ್ಧೀಕರಣ ಮಾಡಿತಲ್ಲ
ಕರೋನ ನಿನ್ನ ಮಹಿಮೆ ಬಲು ಘೋರವಾದುದೆಲ್ಲ.
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ