ಇತ್ತೀಚಿನ ಬರಹಗಳು: ಬೆಂಶ್ರೀ ರವೀಂದ್ರ (ಎಲ್ಲವನ್ನು ಓದಿ)
- ಸಮಾಧಿ ಸಡಗರ - ಜನವರಿ 22, 2022
- ನಿಬ್ಬು ಮುರಿದು ಹಾರಿತು - ಸೆಪ್ಟೆಂಬರ್ 25, 2021
- ಮತ್ತೆ ಬಂತು ಆಷಾಢ - ಜುಲೈ 21, 2021
ಕುಂದದಿರಲಿ ಕಸುವು
ಬಾಡದಿರಲಿ ಉಸಿರು
ಆತ್ಮಸ್ಥೈರ್ಯ ಬಲವು
ಚಿಗುರುತಿರಲಿ ಹಸಿರು
ತುಂಬದಿರಲಿ ದುಗುಡ
ಕೇಳುತಿರಲಿ ಮರ್ಮರ
ಕೈಗೆ ಕೈಯಿರಲಿ ಸಂಗಡ
ದಣಿಯದಿರಲಿ ಮೈಮನ
ಭಯಬೇಡ ಬದುಕಿನಲಿ
ನಂಬಿಕೆಯಿರಲಿ ನಮ್ಮಲಿ
ಕಳೆದವಗೆ ನೀಡು ಸದ್ಗತಿ
ವಿಜ್ಞಾನವೆ ಜಗದಗತಿ
ನಡೆಯ ಶಿಸ್ತು ಅನುಶಾಸನ
ಪಡೆಯ ಶಿಸ್ತೇ ಜೀವನ
ಯಮ ನಿಯಮ ಶ್ವಸನ
ದೃಢತೆ ದೈವ ವಿಶ್ವಚಿಂತನ
ಅದುರದಿರು ಚೇತನವೇ
ನಮಿಸು ಸಂದ ಬದುಕಿಗೆ
ಇರುವ ಜೀವಕೆ ಸಂಬಾಳಿಕೆ
ವಿಶ್ವದ ಆಟ ಹೊಸದಿಕ್ಕಿಗೆ
ಮರೆಯದಿರಲಿ ವೈರಾಣು
ಅಡಗಲಿ ನಮ್ಮ ಸ್ವೈರಾಣು
ಪ್ರಕೃತಿಯೊಡನೆ ಕೂಡೋಣ
ಸಂದಿಗ್ಧ ಸಮಯ ಗೆಲ್ಲೋಣ
ಹೆಚ್ಚಿನ ಬರಹಗಳಿಗಾಗಿ
ಸಂಕ್ರಾಂತಿ
ಹುಣ್ಣಿಮೆ ರಾತ್ರಿ ದೇವರಾಡುವನು
ಮಹಾಸಾಗರವಾದಳು